ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ವಿಶ್ವಕಪ್: ಭಾರತ ವಿರುದ್ಧ ಆಸ್ಟ್ರೇಲಿಯಾಕ್ಕೆ ಸುಲಭ ಜಯ

ICC Womens T20 World Cup 2020: India vs Australia, Final - Live Updates

ಮೆಲ್ಬರ್ನ್, ಮಾರ್ಚ್ 8: ಮೆಲ್ಬರ್ನ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 8) ನಡೆದ ಆಸ್ಟ್ರೇಲಿಯಾ ವನಿತೆಯರು ಮತ್ತು ಭಾರತದ ವನಿತೆಯರ ನಡುವಿನ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸೀಸ್ ಮಹಿಳಾ ತಂಡ 85 ರನ್ ಸುಲಭ ಜಯ ಗಳಿಸಿದೆ. ಇದು ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಟಿ20 ವಿಶ್ವಕಪ್‌ನಲ್ಲಿ ಲಭಿಸಿದ 5ನೇ ಗೆಲುವು.

ಸೆಹ್ವಾಗ್, ಸಚಿನ್ ಆಕರ್ಷಕ ಆಟಕ್ಕೆ ಶರಣಾದ ವೆಸ್ಟ್ ಇಂಡೀಸ್ ಲೆಜೆಂಡ್ಸ್ಸೆಹ್ವಾಗ್, ಸಚಿನ್ ಆಕರ್ಷಕ ಆಟಕ್ಕೆ ಶರಣಾದ ವೆಸ್ಟ್ ಇಂಡೀಸ್ ಲೆಜೆಂಡ್ಸ್

ಟಾಸ್ ಗೆದ್ದು ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ, 20 ಓವರ್‌ಗೆ 4 ವಿಕೆಟ್ ಕಳೆದು 184 ರನ್ ಬಾರಿಸಿ ಭಾರತಕ್ಕೆ 185 ರನ್ ಗುರಿ ನೀಡಿತ್ತು. ಆಸ್ಟ್ರೇಲಿಯಾದಿಂದ ಅಲಿಸಾ ಹೀಲಿ 75 (39 ಎಸೆತ), ಬೆತ್ ಮೂನಿ 78 (54 ಎಸೆತ), ಮೆಗ್ ಲ್ಯಾನಿಂಗ್ 16 ರನ್‌ ಬಾರಿಸಿ ರನ್ ಹೆಚ್ಚಳಕ್ಕೆ ಕೈ ಸೇರಿಸಿದರು.

ಈಕೆ ಮಹಿಳಾ ಟಿ20ಯ ದೃಷ್ಟಿಕೋನವನ್ನೇ ಬದಲಾಯಿಸಿದ ಆಟಗಾರ್ತಿ: ಸಂಜಯ್ ಬಂಗಾರ್ಈಕೆ ಮಹಿಳಾ ಟಿ20ಯ ದೃಷ್ಟಿಕೋನವನ್ನೇ ಬದಲಾಯಿಸಿದ ಆಟಗಾರ್ತಿ: ಸಂಜಯ್ ಬಂಗಾರ್

ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಳ್ಳಲಾರಂಭಿಸಿತು. ಶೆಫಾಲಿ ವರ್ಮಾ 2, ಸ್ಮೃತಿ ಮಂಧಾನ 11, ಜೆಮಿಮಾ ರೋಡ್ರಿಗಸ್ 0, ಹರ್ಮನ್‌ಪ್ರೀತ್ ಕೌರ್ 4 ರನ್‌ಗೆ ವಿಕೆಟ್‌ ಒಪ್ಪಿಸಿದ್ದು ಭಾರತದ ಕಳಪೆ ಬ್ಯಾಟಿಂಗ್‌ಗೆ ಸಾಕ್ಷಿ ಹೇಳಿತು.

ಎರಡನೇ ಬಾರಿಗೆ ಪಿಬಿಎಲ್ ಚಾಂಪಿಯನ್ ಆದ ಬೆಂಗಳೂರು ರ‍್ಯಾಪ್ಟರ್ಸ್ಎರಡನೇ ಬಾರಿಗೆ ಪಿಬಿಎಲ್ ಚಾಂಪಿಯನ್ ಆದ ಬೆಂಗಳೂರು ರ‍್ಯಾಪ್ಟರ್ಸ್

ಭಾರತ ಪರ ಕೊಂಚ ರನ್ ಗಳಿಸಿದವರೆಂದರೆ ದೀಪ್ತಿ ಶರ್ಮಾ (33 ರನ್), ವೇದಾ ಕೃಷ್ಣಮೂರ್ತಿ (19), ರಿಚಾ ಘೋಶ್ (18) ಮಾತ್ರ. ಭಾರತ 19.1ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 99 ರನ್ ಪೇರಿಸಿ ಶರಣಾಯಿತು.

ಭಾರತದ ಇನ್ನಿಂಗ್ಸ್‌ನಲ್ಲಿ ಆಸೀಸ್‌ನ ಮೇಗನ್ ಶಟ್ 18ಕ್ಕೆ 4, ಜೆಸ್ ಜೊನಾಸ್ಸೆನ್ 20ಕ್ಕೆ 3 ವಿಕೆಟ್‌ ಮುರಿದು ಪಾರಮ್ಯ ಮೆರೆದರು. ಪಂದ್ಯಶ್ರೇಷ್ಠೆ ಪ್ರಶಸ್ತಿ ಬೆತ್ ಮೂನಿ ಪಡೆದುಕೊಂಡರೆ, ಸರಣಿಶ್ರೇಷ್ಠೆ ಪ್ರಶಸ್ತಿ ಅಲಿಸಾ ಹೀಲಿ ಪಡೆದುಕೊಂಡರು.

ಭಾರತ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂದಾನ, ತಾನಿಯಾ ಭಾಟಿಯಾ (ವಿಕೆ), ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ಸಿ), ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ಶಿಖಾ ಪಾಂಡೆ, ರಾಧಾ ಯಾದವ್, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್.

ಆಸ್ಟ್ರೇಲಿಯಾ ತಂಡ: ಅಲಿಸಾ ಹೀಲಿ (ವಿಕೆ), ಬೆಥ್ ಮೂನಿ, ಮೆಗ್ ಲ್ಯಾನಿಂಗ್ (ಸಿ), ರಾಚೆಲ್ ಹೇನ್ಸ್, ಆಶ್ಲೀ ಗಾರ್ಡ್ನರ್, ಸೋಫಿ ಮೊಲಿನಕ್ಸ್, ನಿಕೋಲಾ ಕ್ಯಾರಿ, ಜೆಸ್ ಜೊನಾಸ್ಸೆನ್, ಜಾರ್ಜಿಯಾ ವೇರ್‌ಹ್ಯಾಮ್, ಡೆಲಿಸ್ಸಾ ಕಿಮ್ಮಿನ್ಸ್, ಮೇಗನ್ ಶುಟ್.

Mar 08, 2020, 2:37 pm IST

5.4ನೇ ಓವರ್ ಮುಕ್ತಾಯಕ್ಕೆ ಭಾರತ 4 ವಿಕೆಟ್ ನಷ್ಟದಲ್ಲಿ 30 ರನ್ ಗಳಿಸಿತ್ತು. ಶೆಫಾಲಿ ವರ್ಮಾ (2 ರನ್), ಸ್ಮೃತಿ ಮಂಧಾನ (11), ಜೆಮಿಮಾ ರೋಡ್ರಿಗಸ್ (0), ಹರ್ಮನ್‌ಪ್ರೀತ್ ಕೌರ್ (4) ವಿಕೆಟ್ ಪತನವಾಗಿದೆ.

Mar 08, 2020, 1:22 pm IST

12 ಓವರ್‌ ಮುಕ್ತಾಯಕ್ಕೆ ಆಸ್ಟ್ರೇಲಿಯಾ ವನಿತೆಯರು 1 ವಿಕೆಟ್ ಕಳೆದು 117 ರನ್ ಗಳಿಸಿದ್ದರು. ಅಲಿಸಾ ಹೀಲಿ ಸ್ಫೋಟಕ ಅರ್ಧಶತಕ (75 ರನ್, 39 ಎಸೆತ) ಬಾರಿಸಿ ವಿಕೆಟ್ ಒಪ್ಪಿಸಿದ್ದರು.

Mar 08, 2020, 1:13 pm IST

10 ಓವರ್‌ ಮುಕ್ತಾಯಕ್ಕೆ ಆಸ್ಟ್ರೇಲಿಯಾ ವನಿತೆಯರು ವಿಕೆಟ್ ನಷ್ಟವಿಲ್ಲದೆ 91 ರನ್ ಗಳಿಸಿದ್ದರು.

Mar 08, 2020, 12:52 pm IST

5 ಓವರ್‌ ಮುಕ್ತಾಯಕ್ಕೆ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 47 ರನ್ ಗಳಿಸಿತ್ತು.

Mar 08, 2020, 12:44 pm IST

ಇನ್ನಿಂಗ್ಸ್ ಆಡುತ್ತಿರುವ ಆಸ್ಟ್ರೇಲಿಯಾ ಮಹಿಳೆಯರು 3ನೇ ಓವರ್‌ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 32 ರನ್ ಗಳಿಸಿದ್ದರು. ಅಲಿಸಾ ಹೀಲಿ, ಬೆಥ್ ಮೂನಿ ಕ್ರೀಸ್‌ನಲ್ಲಿದ್ದರು.

Story first published: Tuesday, December 15, 2020, 16:16 [IST]
Other articles published on Dec 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X