ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಹೊಸ್ತಿಲಲ್ಲಿ ಎಡವಿದ ಭಾರತದ ಮಹಿಳೆಯರು: ಇಂಗ್ಲೆಂಡ್ ವಿರುದ್ಧ ಸೋಲು

icc womens world t20: India loose to England in semifinals

ಆಂಟಿಗುವಾ(ಇಂಗ್ಲೆಂಡ್), ನವೆಂಬರ್ 23: ವಿಶ್ವಕಪ್‌ನ ಫೇನಲ್‌ಗೇರಲು ಹಂತದಲ್ಲಿ ಭಾರತದ ಮಹಿಳೆಯರ ಕ್ರಿಕೆಟ್‌ ತಂಡ ಎಡವಿದೆ. ಇಂದು ನಡೆದ ಪಂದ್ಯದಲ್ಲಿ ಅದು ಇಂಗ್ಲೆಂಡ್ ವಿರುದ್ಧ ಭಾರಿ ಅಂತರದ ಸೋಲು ಕಂಡು ಟೂರ್ನಿಯಿಂದ ಹೊರಬಂದಿದೆ.

ಮಹಿಳಾ ಟಿ-20 ಕ್ರಿಕೆಟ್‌ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವನಿತೆಯರು ಅತಿಥೇಯ ಇಂಗ್ಲೆಂಡ್‌ ತಂಡವನ್ನು ಎದುರಿಸಿದರು. ಟಾಸ್ ಗೆದ್ದ ಭಾರತ ಮೊದಲು ಬ್ಯಾಟ್ ಮಾಡಿತು. ಆದರೆ ಇಂಗ್ಲೆಂಡ್‌ನ ಶಿಸ್ತಿನ ಬೌಲಿಂಗ್ ಎದುರು ತಡವರಿಸಿತು.

ಮಹಿಳಾ ಟಿ20: ಆಸ್ಟ್ರೇಲಿಯಾ ತಂಡವನ್ನು 48 ರನ್‌ನಿಂದ ಕೆಡವಿದ ಭಾರತ ಮಹಿಳಾ ಟಿ20: ಆಸ್ಟ್ರೇಲಿಯಾ ತಂಡವನ್ನು 48 ರನ್‌ನಿಂದ ಕೆಡವಿದ ಭಾರತ

ಮೊದಲು ಬ್ಯಾಟ್ ಮಾಡಿದ ಭಾರತದ ವನಿತೆಯರಲ್ಲಿ ಸ್ಮೃತಿ ಮಂದಾನಾ (32) ಮತ್ತು ರೋಡಿಗ್ರೊಸ್ (26) ಹೊರತುಪಡಿಸಿ ಮತ್ಯಾವ ಆಟಗಾರ್ತಿಯರೂ ಹೆಚ್ಚು ಹೊತ್ತು ಸ್ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಭಾರತ 19.3 ಓವರ್‌ನಲ್ಲಿ 112 ರನ್‌ಗಳಿಗೆ ತನ್ನ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಅಲ್ಪ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್‌ ಮಹಿಳೆಯರು ಕೇವಲ ಎರಡು ವಿಕೆಟ್ ಕಳೆದುಕೊಂಡು 17.1 ಓವರ್‌ಗಳಲ್ಲಿಯೇ ಗುರಿ ತಲುಪಿ, ಫೈನಲ್ ಪ್ರವೇಶಿಸಿದರು. ಇಂಗ್ಲೆಂಡ್ ಪರ ಎ ಜೋನ್ಸ್‌ 53, ಎನ್ ಶೈವರ್ 52 ರನ್ ಗಳಿಸಿ ಅಜೇಯರಾಗುಳಿದರು.

ರಮೇಶ್ ಉಪಸ್ಥಿತಿ ನಮ್ಮ ಮನಸ್ಥಿತಿಯನ್ನೇ ಬದಲಿಸಿತು: ಹರ್ಮನ್‌ಪ್ರೀತ್ ರಮೇಶ್ ಉಪಸ್ಥಿತಿ ನಮ್ಮ ಮನಸ್ಥಿತಿಯನ್ನೇ ಬದಲಿಸಿತು: ಹರ್ಮನ್‌ಪ್ರೀತ್

ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನೇ ತೋರಿದ್ದ ಭಾರತದ ವನಿತೆಯರು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾದಂತಹಾ ಪ್ರಬಲ ತಂಡಗಳನ್ನು ಎದುರಿಸಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದರು.

ಸರಣಿಯುದ್ದಕ್ಕೂ ಉತ್ತಮವಾಗಿ ಆಡುತ್ತಾ ಬಂದಿದ್ದ ಭಾರತದ ವನಿತೆಯರು ವಿಶ್ವಕಪ್‌ಗೆ ಇನ್ನೆರಡು ಮೆಟ್ಟಿಲು ಇದ್ದಾಗ ಎಡವಿ ನಿರಾಸೆ ಅನುಭವಿಸಿದ್ದಾರೆ. ಇಂದಿನ ಮಹತ್ವದ ಪಂದ್ಯಕ್ಕೆ ಅನುಭವಿ ಮಿತಾಲಿ ರಾಜ್ ಅವರನ್ನು ಕೈಬಿಡುವ ನಿರ್ಣಯ ಮಾಡಿದ್ದು ತಂಡಕ್ಕೆ ದೊಡ್ಡ ಹಿನ್ನಡೆ ಆಯಿತು.

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ವೆಸ್ಟ್‌ ಇಂಡೀಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದು, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಫೈನಲ್ ಪಂದ್ಯವು 25 ನವೆಂಬರ್ ನಂದು ನಡೆಯಲಿದೆ.

Story first published: Friday, November 23, 2018, 10:04 [IST]
Other articles published on Nov 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X