ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಟ್ಟ ಕಡೆಗೆ ಕಾಡುವ ಪ್ರಶ್ನೆ, ಮಿಥಾಲಿ ರಾಜ್ ಆಡಿಸಲಿಲ್ಲವೇಕೆ?

ICC Womens WT20: Twitterati question decision to bench Mithali Raj as England crush India in semis

ನಾರ್ಥ್ ಸೌಂಡ್, ನವೆಂಬರ್ 23: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿದೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನವೆಂಬರ್ 22ರಂದು ಫೈನಲ್ ಪಂದ್ಯ ನಡೆಯಲಿದೆ. ಈ ನಡುವೆ ಭಾರತದ ಸೋಲಿಗೆ ಮಿಥಾಲಿ ರಾಜ್ ಆಡಿಸದಿದ್ದದ್ದೇ ಕಾರಣ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಕೂಗೆದ್ದಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 19.3 ಓವರ್ ಗಳಲ್ಲಿ 112 ರನ್ ಗಳಿಸಿತ್ತು. ಉತ್ತಮ ಗುರಿ ನೀಡಲು ವಿಫಲವಾಗಿದ್ದು ಭಾರತದ ತಪ್ಪು. 17.2 ಓವರ್ ಗಳಲ್ಲಿ ಗುರಿ ತಲುಪಿ 8 ವಿಕೆಟ್ ಗಳ ಅರ್ಹ ಜಯವನ್ನು ಇಂಗ್ಲೆಂಡ್ ಸಂಪಾದಿಸಿತು.

ಭಾರತದ ಪರ ಸ್ಮೃತಿ ಮಂದಾನ 33 ರನ್, ಜೆಮಿಯಾ 26 ರನ್, ನಾಯಕಿ ಹರ್ಮನ್ ಪ್ರೀತ್ ಕೌರ್ 16 ರನ್ ಗಳಿಸಿದರು. ಆದರೆ, ಬ್ಯಾಟಿಂಗ್ ಶಕ್ತಿ ಎನಿಸಿರುವ ಮಿಥಾಲಿ ರಾಜ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. 23 ರನ್ ಕಲೆ ಹಾಕುವಲ್ಲಿ 8 ವಿಕೆಟ್ ಕಳೆದುಕೊಂಡ ಭಾರತ ದ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣ ಎಂದು ಟ್ವಿಟ್ಟರ್ ನಲ್ಲಿ ವಾದ ಶುರುವಾಗಿದೆ.

ಇಂಗ್ಲೆಂಡ್ ವಿರುದ್ಧ ಆಸೀಸ್ ಕದನ

ಟೂರ್ನಿಯ ಅಂಕಪಟ್ಟಿ ನೋಡುವವರಿಗೆ ಅಚ್ಚರಿಯೂ ಅಘಾತವೂ ಉಂಟು ಮಾಡುತ್ತೆ. ಅಂಕಪಟ್ಟಿಯಲ್ಲಿ ಎ ಗ್ರೂಪ್‌ ನಲ್ಲಿ ವೆಸ್ಟ್ ಇಂಡೀಸ್ ತಂಡ ಎಲ್ಲಾ 4 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಇತ್ತ ಭಾರತ ಎಲ್ಲಾ ನಾಲ್ಕರಲ್ಲಿ ಗೆದ್ದು ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ತಲೆಬಾಗಿ ಪ್ರಶಸ್ತಿ ಸುತ್ತಿನ ಅವಕಾಶ ಕಾಳೆದುಕೊಂಡಿದೆ. ಆದರೆ ಹಿಂದೆ ಆಡಿದ್ದ ನಾಲ್ಕರಲ್ಲಿ 2 ಪಂದ್ಯ ಗೆದ್ದಿದ್ದ ಇಂಗ್ಲೆಂಡ್, 3 ಪಂದ್ಯ ಗೆದ್ದಿದ್ದ ಆಸ್ಟ್ರೇಲಿಯಾ ಈಗ ಫೈನಲ್‌ ಹಂತಕ್ಕೇರಿವೆ!

ಸಂಜಯ್ ಮಂಜೇಕ್ರರ್ ಟ್ವೀಟ್

ಮಾಜಿ ಕ್ರಿಕೆಟರ್, ಕಾಮೆಂಟೆಟರ್ ಸಂಜಯ್ ಮಂಜೇಕ್ರರ್ ಅವರು ಮಹಿಳಾ ತಂಡವು ಎರಡು ತಪ್ಪೆಸಗಿದೆ. ಮಿಥಾಲಿ ರಾಜ್ ಅವರನ್ನು ಆಡಿಸಲಿಲ್ಲ ಹಾಗೂ ಸ್ಲೋ ಪಿಚ್ ನಲ್ಲಿ ಕಾಯ್ದು ಆಡದೆ ಮುನ್ನುಗ್ಗುವ ಪ್ರವೃತ್ತಿ ತೋರಿದ್ದು ಮುಳುವಾಯಿತು. ತಂತ್ರಗಾರಿಕೆಯಲ್ಲಿ ಸಂಪೂರ್ಣ ವಿಫಲವಾಯಿತು ಎಂದಿದ್ದಾರೆ.

ಎಂಎಸ್ ಧೋನಿ ಇಲ್ಲದ ತಂಡದ ಸ್ಥಿತಿ

ಪ್ರಮುಖ ಪಂದ್ಯಕ್ಕೆ ಧೋನಿಯನ್ನು ಆಡಿಸದೆ ಬೆಲೆತೆತ್ತ ಪರಿಸ್ಥಿತಿ ಹೇಗಿರುತ್ತೋ ಹಾಗೆ ಮಹಿಳಾ ತಂಡದ ಸ್ಥಿತಿ ಆಗಿದೆ. ಉತ್ತಮ ಲಯದಲ್ಲಿದ್ದ ಮಿಥಾಲಿ ಅವರನ್ನು ಬೆಂಚ್ ಪ್ಲೇಯರ್ ಮಾಡಿದ್ದು ತಪ್ಪು

ಹರ್ಷ ಭೋಗ್ಲೆ ಪ್ರಶ್ನೆ

ಓಕೆ, ಸರಿ ಮಿಥಾಲಿ ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸದಿರುವುದಕ್ಕೆ ಕಾರಣಗಳಿರಬಹುದು. ಆದರೆ, ಈ ಪಿಚ್ ನಲ್ಲಿ ನೆಲೆ ನಿಂತು ಆಡಬಲ್ಲ ಆಟಗಾರ್ತಿ ಇದ್ದರೆ ಅದು ಮಿಥಾಲಿ ಮಾತ್ರ. ಮಿಥಾಲಿ ಅವರನ್ನು ಹೊರಗಿಟ್ಟಿದ್ದು ದೊಡ್ಡ ತಪ್ಪು

Story first published: Friday, November 23, 2018, 23:57 [IST]
Other articles published on Nov 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X