ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಲೋ ಓವರ್‌ ರೇಟ್‌: ಇನ್ಮುಂದೆ ನಾಯಕನಿಗೆ ನಿಷೇಧ ಹೇರೋಹಾಗಿಲ್ಲ!

ICC Wont Suspend International Cricket Captains For Slow Over-Rates

ದುಬೈ, ಜುಲೈ 19: ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡಗಳ ನಾಯಕರ ಸ್ಲೋ ಓವರ್‌ ರೇಟ್‌ ಸಲುವಾಗಿ ನಿಷೇಧ ಶಿಕ್ಷೆಗೆ ಒಳಪಡುವುದನ್ನು ತೆಗೆದು ಹಾಕುವಂತೆ ಐಸಿಸಿ ಕ್ರಿಕೆಟ್‌ ಸಲಹಾ ಸಮಿತಿ ನೀಡಿದ್ದ ಶಿಫಾರಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು (ಐಸಿಸಿ) ಶುಕ್ರವಾರ ಸಮ್ಮತಿಸಿದೆ.

ಶೀಫಾರಸಿನ ಮೇರೆಗೆ ಐಸಿಸಿ ನಿಷೇಧ ಶಿಕ್ಷೆ ಬದಲಾಗಿ ಅಂಕಗಳನ್ನು ಕಡಿತಗೊಳಿಸಿದ್ದು ಜೊತೆಗೆ ಈ ರೀತಿಯ ಪ್ರಮಾದಕ್ಕೆ ಇನ್ಮುಂದೆ ಇಡೀ ತಂಡಕ್ಕೆ ದಂಡ ವಿಧಿಸಲಿದೆ. ಮುಂಬರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಮೂಲಕ ಈ ನೂತನ ನಿಯಮ ಜಾರಿಗೆ ಬರಲಿದೆ.

2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ

"ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಂದ್ಯಗಳಲ್ಲಿ ಯಾವ ತಂಡ ನಿಗದಿತ ಅವಧಿಗೆ ಎಸೆಯ ಬೇಕಿರುವ ಓವರ್‌ಗಳನ್ನು ಎಸೆಯುವಲ್ಲಿ ವಿಫಲವಾಗುತ್ತದೋ ಆ ತಂಡಕ್ಕೆ ಪ್ರತಿ ಓವರ್‌ಗೆ 2 ಚಾಂಪಿಯನ್‌ಷಿಪ್‌ ಅಂಕಗಳನ್ನು ಕಡಿತಗೊಳಿಸಲಾಗುವುದು," ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಗಂಭೀರ ಸ್ವರೂಪದ ಸ್ಲೋ ಓವರ್‌ ರೇಟ್‌ ಅಥವಾ ಪದೇ ಪದೇ ಅದೇ ಪ್ರಮಾದ ಎಸಗಿದರೂ ಕೂಡ ನಾಯಕನ ವಿರುದ್ಧ ನಿಷೇಧ ಹೇರಲಾಗುವುದಿಲ್ಲ. ಮಂದಗತಿಯ ಓವರ್‌ಗಳಿಗೆ ತಂಡದ ಆಟಗಾರರೆಲ್ಲಾ ಜವಾಬ್ದಾರರಾಗಿರುತ್ತಾರೆ. ನಾಯಕನೂ ಒಳಗೊಂಡಂತೆ ಎಲ್ಲರ ವಿರುದ್ಧ ಸಮಾನವಾಗಿ ದಂಡ ವಿಧಿಸಲಾಗುತ್ತದೆ," ಎಂದು ತನ್ನ ಹೇಳಿಕೆಯಲ್ಲಿ ವಿವರಿಸಿದೆ.

ಲಾರ್ಡ್ಸ್‌ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್‌ಲಾರ್ಡ್ಸ್‌ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್‌

ಈ ಮೊದಲು ಒಂದು ವರ್ಷ ಅವಧಿಯಲ್ಲಿ ಒಂದು ತಂಡ ಎರಡು ಬಾರಿ ಸ್ಲೋ ಓವರ್‌ ರೇಟ್‌ ಪ್ರಮಾದ ಎಸಗಿದರೆ ಆ ತಂಡದ ನಾಯಕನಿಗೆ ಒಂದು ಪಂದ್ಯ ನಿಷೇಧ ಶಿಕ್ಷೆ ವಿಧಿಸಲಾಗುತ್ತಿತ್ತು. ಇದೇ ವೇಳೆ ನೋಬಾಲ್‌ ನಿರ್ಧರಿಸಲು ಮತ್ತಷ್ಟು ಪರಿಶೀಲಿಸಬೇಕು ಎಂಬ ಶಿಫಾರಸಿಗೂ ಐಸಿಸಿ ಅಸ್ತು ಎಂದಿದೆ.

Story first published: Friday, July 19, 2019, 18:35 [IST]
Other articles published on Jul 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X