ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಲ್ ರೌಂಡರ್‌ಗಳ ಆಟ ಭಾರತದ ವಿಶ್ವಕಪ್ ಭವಿಷ್ಯ ನಿರ್ಧರಿಸಲಿದೆಯಾ?!

ICC World Cup 2019: Allrounders performance to determine Indias fortunes

ನವದೆಹಲಿ, ಮೇ 24: ಭಾರತ ಕ್ರಿಕೆಟ್ ತಂಡ ಈ ಹಿಂದೆ ಎರಡು ಸಾರಿ ಏಕದಿನ ವಿಶ್ವಕಪ್ ಟ್ರೋಫಿ ಎತ್ತಿತ್ತಲ್ಲ? ಆ ಎರಡೂ ಪಂದ್ಯಗಳಲ್ಲೂ ತಂಡದ ಆಲ್‌ ರೌಂಡರ್‌ಗಳ ಪಾತ್ರ ಮಹತ್ವದ್ದಾಗಿತ್ತು. ಈ ಬಾರಿ ಟೀಮ್ ಇಂಡಿಯಾ 3ನೇ ಟ್ರೋಫಿ ಗೆಲ್ಲುತ್ತಾ ಅನ್ನೋದು ನಿರ್ಧಾರವಾಗುವಲ್ಲೂ ಆಲ್‌ ರೌಂಡರ್‌ಗಳ ಆಟ ಅತ್ಯಂತ ಪ್ರಮುಖವೆನಿಸಿದೆ.

ವಿಶ್ವಕಪ್‌: ಪಾಕ್‌ ತಂಡದ ಸಾಮರ್ಥ್ಯ ವಿವರಿಸಿದ ಶಾಹಿದ್‌ ಅಫ್ರಿದಿವಿಶ್ವಕಪ್‌: ಪಾಕ್‌ ತಂಡದ ಸಾಮರ್ಥ್ಯ ವಿವರಿಸಿದ ಶಾಹಿದ್‌ ಅಫ್ರಿದಿ

1983ರ ವಿಶ್ವಕಪ್‌ ಗೆಲುವಿನಲ್ಲಿ ಆಲ್ ರೌಂಡರ್‌ ಯಾದಿಯಲ್ಲಿದ್ದ ತಂಡದ ನಾಯಕ ಕಪಿಲ್ ದೇವ್, ಮೋಹೀಂದರ್ ಅಮರ್‌ನಾಥ್, ರೋಜರ್ ಬಿನ್ನಿ ಮತ್ತು ಮದನ್ ಲಾಲ್ ನಿರ್ಣಾಯಕ ಪಾತ್ರ ವಹಿಸಿದ್ದರು. 2011ರಲ್ಲಿ ಧೋನಿ ಪಡೆಯಲ್ಲಿದ್ದ ಯೂಸೂಫ್ ಪಠಾಣ್ ಅಂಥ ಕೊಡುಗೆ ನೀಡದಿದ್ದರೂ ಯುವರಾಜ್ ಸಿಂಗ್ ಅವರು ತಂಡದ ಬೆಂಬಲಕ್ಕೆ ನಿಂತಿದ್ದರು.

ಐಸಿಸಿ ವಿಶ್ವಕಪ್: ಟೂರ್ನಿಯ ಅತೀ ಬಲಿಷ್ಠ ತಂಡ ಹೆಕ್ಕಿದ ವಿರಾಟ್ ಕೊಹ್ಲಿಐಸಿಸಿ ವಿಶ್ವಕಪ್: ಟೂರ್ನಿಯ ಅತೀ ಬಲಿಷ್ಠ ತಂಡ ಹೆಕ್ಕಿದ ವಿರಾಟ್ ಕೊಹ್ಲಿ

ಎಡಗೈ ಸ್ಪಿನ್ ಎಸೆದಿದ್ದ 'ಕೆಚ್ಚೆದೆಯ ಮಹರಾಜ' ಖಾತಿಯ ಯುವರಾಜ್ 2011ರ ವಿಶ್ವಕಪ್ ಟೂರ್ನಿಯಲ್ಲಿ 15 ವಿಕೆಟ್‌ಗಳೊಂದಿಗೆ 363 ರನ್ ತಂಡಕ್ಕೆ ನೀಡಿದ್ದರು. ಅಲ್ಲಿಗೆ ಈ ಬಾರಿಯೂ ವಿಶ್ವಕಪ್ ಗೆಲ್ಲಲು ಆಲ್‌ ರೌಂಡರ್‌ಗಳ ಪ್ರದರ್ಶನ ಅತ್ಯಗತ್ಯ ಅನ್ನೋದು ಖರೆಯಲ್ಲವೆ?

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಭಾರತ ತಂಡದಲ್ಲಿನ ಅತ್ಯಾಕರ್ಷಣೀಯ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ. ವಿಕೆಟ್ ಕೆಡವಿ ಸ್ಫೋಟಕ ರನ್‌ ಕೂಡ ಬಾರಿಸಬಲ್ಲ ಪಾಂಡ್ಯಗೆ ಇದು ಚೊಚ್ಚಲ ವಿಶ್ವಕಪ್. ಕಳೆದ ಎರಡು ವರ್ಷಗಳಲ್ಲಿ ಆಡಿದ 38 ಪಂದ್ಯಗಳಲ್ಲಿ ಪಾಂಡ್ಯ 25.95ರ ಸರಾಸರಿಯಲ್ಲಿ ಒಟ್ಟು 571 ರನ್ ಗಳಿಸಿದ್ದಾರೆ. ಇದರಲ್ಲಿ 83 ಅತ್ಯಧಿಕ ರನ್‌ ಕೂಡ ಸೇರಿದೆ. ಇನ್ನು 35 ವಿಕೆಟ್‌ಗಳು ಸಹ ಪಾಂಡ್ಯಗೆ ಲಭಿಸಿದೆ.

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ

ಈಗ ಭಾರತ ತಂಡದಲ್ಲಿರುವ ಆಲ್ ರೌಂಡರ್‌ಗಳಲ್ಲಿ ಅತ್ಯಂತ ಅನುಭವಿ ಆಟಗಾರ ರವೀಂದ್ರ ಜಡೇಜಾ. ಈ ವರೆಗೆ 8 ವಿಶ್ವಕಪ್‌ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಕಳೆದೆರಡು ವರ್ಷಗಳ ಸಾಧನೆ ಗಮನಿಸಿದರೆ 22 ಪಂದ್ಯಗಳಲ್ಲಿ ಜಡೇಜಾ 16.33ರ ಸರಾಸರಿಯಂತೆ ಕೇವಲ 147 ರನ್ ಗಳಿಸಿದ್ದಾರೆ. ಇನ್ನು 43.82ರ ಸರಾಸರಿಯಲ್ಲಿ 23 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಕೇದಾರ್ ಜಾಧವ್

ಕೇದಾರ್ ಜಾಧವ್

ಪಾಂಡ್ಯ ಬಿಟ್ಟರೆ ತಂಡಕ್ಕೆ ಕೊಂಚ ಬಲವಾಗಿ ನಿಲ್ಲಬಲ್ಲ ಆಲ್ ರೌಂಡರ್ ಕೇದಾರ್ ಜಾಧವ್. ಜಾಧವ್ ಪಾಲಿಗೂ ಇದು ಮೊದಲ ವಿಶ್ವಕಪ್. ಕಳೆದ 2 ವರ್ಷಗಳಲ್ಲಿ ಕೇದಾರ್, ಅಜೇಯ 81 ಅತ್ಯಧಿಕ ರನ್ ಸೇರಿ 37.15ರ ಸರಾಸರಿಯಂತೆ 706 ರನ್ ಗಳಿಸಿದ್ದಾರೆ. 37.90ರ ಸರಾಸರಿಯಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ.

ವಿಜಯ್ ಶಂಕರ್

ವಿಜಯ್ ಶಂಕರ್

ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಅತೀ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವ 'ತ್ರೀ ಡೈಮೆನ್ಶನಲ್ ಪ್ಲೇಯರ್' ವಿಜಯ್ ಶಂಕರ್. 2019ರಲ್ಲಿ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿರುವ ವಿಜಯ್‌ಗೂ ಇದು ಮೊದಲ ವಿಶ್ವಕಪ್. ಒಟ್ಟು 9 ಪಂದ್ಯಗಳಲ್ಲಿ ಶಂಕರ್ 33.00 ಸರಾಸರಿಯಂತೆ 165 ರನ್ ಬಾರಿಸಿದ್ದರೆ, 94.00 ಸರಾಸರಿಯಲ್ಲಿ 2 ವಿಕೆಟ್ ಮುರಿದಿದ್ದಾರೆ.

Story first published: Friday, May 24, 2019, 12:59 [IST]
Other articles published on May 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X