ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಲೆಗೆ ಚೆಂಡಿನ ಹೊಡೆತ, ಅಪಾಯದಿಂದ ಖವಾಜಾ ಪಾರು: ವೈರಲ್ ವಿಡಿಯೋ

ICC World Cup 2019: Australia’s Khawaja given all clear after head knock

ಸೌತಾಂಪ್ಟನ್, ಮೇ 23: ಸೌತಾಂಪ್ಟನ್‌ನಲ್ಲಿ ಬುಧವಾರ (ಮೇ 22) ನಡೆದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಅನಧಿಕೃತ ಅಭ್ಯಾಸ ಪಂದ್ಯದಲ್ಲಿ ತಲೆಗೆ ಚೆಂಡಿನ ಹೊಡೆತ ತಿಂದಿದ್ದ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್ಮನ್ ಉಸ್ಮಾನ್ ಖವಾಜಾ ಗಂಭೀರ ಅಪಾಯದಿಂದ ಪಾರಾಗಿದ್ದಾರೆ.

ವಿಶ್ವಕಪ್: ಸಚಿನ್ ಪ್ರಕಾರ ಧೋನಿಗೆ ಈ ಬ್ಯಾಟಿಂಗ್ ಕ್ರಮಾಂಕ ಸೂಕ್ತವಂತೆವಿಶ್ವಕಪ್: ಸಚಿನ್ ಪ್ರಕಾರ ಧೋನಿಗೆ ಈ ಬ್ಯಾಟಿಂಗ್ ಕ್ರಮಾಂಕ ಸೂಕ್ತವಂತೆ

ಆಸ್ಟ್ರೇಲಿಯಾ ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ ಆ್ಯಂಡ್ರೆ ರಸೆಲ್ ಎಸೆತದಲ್ಲಿ ಚೆಂಡು ಖವಾಜಾ ತಲೆಗೆ ಬಡಿದಿತ್ತು. ಹೀಗಾಗಿ ಉಸ್ಮಾನ್ 5 ರನ್‌ನೊಂದಿಗೆ ಮೈದಾನದಿಂದ ನಿರ್ಗಮಿಸುವಂತಾಗಿತ್ತು. ಅನಂತರ ಸ್ಕ್ಯಾನಿಂಗ್‌ಗೆ ಒಳಗಾದ ಖವಾಜಾ ಗಂಭೀರ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಚೆಂಡು ಹೆಲ್ಮೆಟ್‌ಗೆ ಬಡಿದಿದ್ದರಿಂದ ದೊಡ್ಡ ದುರಂತ ಸಂಭವಿಸಿಲ್ಲ.

ಪಂದ್ಯ ದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ಎವಿನ್ ಲೆವಿಸ್ 50, ಕಾರ್ಲೋಸ್ ಬ್ರಾತ್‌ವೇಟ್ 60 ರನ್‌ ಕೊಡುಗೆಯೊಂದಿಗೆ 46.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 229 ರನ್ ಪೇರಿಸಿತ್ತು. ಗುರಿ ಬೆನ್ನತ್ತಿದ ಆಸೀಸ್ ಆ್ಯರನ್ ಫಿಂಚ್ 42, ಸ್ಟೀವ್ ಸ್ಮಿತ್ 76, ಶಾನ್‌ಮಾರ್ಷ್ 55 ರನ್‌ನೊಂದಿಗೆ 38.3 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 230 ರನ್ ಪೇರಿಸಿ ಗೆಲುವನ್ನಾಚರಿಸಿತು.

Story first published: Thursday, May 23, 2019, 12:46 [IST]
Other articles published on May 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X