ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

23 ವರ್ಷಗಳ ಹಿಂದಿನ ವಿಶ್ವಕಪ್ ದಾಖಲೆ ಸರಿದೂಗಿಸಿದ ಬೆನ್ ಸ್ಟೋಕ್ಸ್!

ICC World Cup 2019: Ben Stokes equals 23-year-old WC record

ಲಂಡನ್, ಮೇ 31: ಬೆನ್ ಸ್ಟೋಕ್ಸ್ ಅವರ ಆಲ್ ರೌಂಡರ್ ಆಟದಿಂದಾಗಿ ಕೆನ್ನಿಂಗ್ಟನ್ ಓವಲ್‌ನಲ್ಲಿ ಗುರುವಾರ (ಮೇ 30) ನಡೆದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 104 ರನ್ ಭರ್ಜರಿ ಗೆಲುವನ್ನಾಚರಿಸಿತ್ತು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಬೆನ್ ಸ್ಟೋಕ್ಸ್ 89 ರನ್ ಕೊಡುಗೆಯಿಂದಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಕಳೆದು 311 ರನ್ ಗಳಿಸಿತ್ತು. ಅಲ್ಲದೆ ಬೆನ್ ಸ್ಟೋಕ್ಸ್ 12 ಎಸೆತಗಳಿಗೆ 2 ವಿಕೆಟ್ ಮತ್ತು 2 ಕ್ಯಾಚ್ ಕೂಡ ಪಡೆದು ಇಂಗ್ಲೆಂಡ್ ಶುಭಾರಂಭ ಕಾಣಲು ನೆರವು ನೀಡಿದ್ದರು.

ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳನ್ನು ಪ್ರತಿನಿಧಿಸಿದ ಆಟಗಾರರಿವರು!ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳನ್ನು ಪ್ರತಿನಿಧಿಸಿದ ಆಟಗಾರರಿವರು!

ಸ್ಟೋಕ್ಸ್ ಅವರ ಗುರುವಾರದ ಆಲ್ ರೌಂಡರ್ ಪ್ರದರ್ಶನ ಹಲವಾರು ದಾಖಲೆಗೆ ಕಾರಣವಾಗಿತ್ತು. ಅವುಗಳ ಸಂಕ್ಷಿಪ್ತ ವಿವರ ಇಲ್ಲಿದೆ.

1996ರ ವಿಶ್ವಕಪ್ ದಾಖಲೆ ಸರಿಸಮ

1996ರ ವಿಶ್ವಕಪ್ ದಾಖಲೆ ಸರಿಸಮ

ಬೆನ್ ಸ್ಟೋಕ್ಸ್ ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನೀಡಿದ ಆಲ್ ರೌಂಡರ್ ಪ್ರದರ್ಶನ ಸುಮಾರು 23 ವರ್ಷಗಳ ಹಿಂದಿನ ವಿಶ್ವಕಪ್ ದಾಖಲೆ ಸರಿ ದೂಗಿಸಿತು. 1996ರಲ್ಲಿ ಶ್ರೀಲಂಕಾದ ಅರವಿಂದ ಡೆ ಸಿಲ್ವಾ ಅವರು ಆಸ್ಟ್ರೇಲಿಯಾ ವಿರುದ್ಧ 80ಕ್ಕೂ ಅಧಿಕ ರನ್ (ಅಜೇಯ 107 ರನ್), 2 ವಿಕೆಟ್ ಮತ್ತು 2 ಕ್ಯಾಚ್ ಮಾಡಿ ದಾಖಲೆ ನಿರ್ಮಿಸಿದ್ದರು.

5ನೇ ಆಟಗಾರ ಸ್ಟೋಕ್ಸ್

5ನೇ ಆಟಗಾರ ಸ್ಟೋಕ್ಸ್

ವಿಶ್ವಕಪ್ ನಲ್ಲಿ ಆಲ್ ರೌಂಡರ್ ಸಾಧನೆ ಮೆರೆದು ಅಪರೂಪದ ದಾಖಲೆ ನಿರ್ಮಿಸಿದ 5ನೇ ಆಟಗಾರನಾಗಿ ಬೆನ್ ಸ್ಟೋಕ್ಸ್ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಹಿಂದೆ 2007ರಲ್ಲಿ ಕೀನ್ಯಾದ ಸೊ ಟಿಕೋಲೊ, (ಕೆನಡಾ ವಿರುದ್ಧ-72*, 2, 2/34), 2003ರಂದು ಇಂಗ್ಲೆಂಡ್‌ನ ಆ್ಯಂಡ್ರೂ ಫ್ಲಿಂಟಾಫ್ (ಭಾರತ ವಿರುದ್ಧ-64, 2, 2/15), 1996ರಲ್ಲಿ ಶ್ರೀಲಂಕಾದ ಅರವಿಂದ ಡೆ ಸಿಲ್ವಾ (ಆಸೀಸ್ ವಿರುದ್ಧ-107*, 2, 3/42), 1983ರಲ್ಲಿ ಭಾರತದ ಕಪಿಲ್ ದೇವ್ (ಜಿಂಬಾಬ್ವೆ ವಿರುದ್ಧ-175, 2, 1/32) ಈ ದಾಖಲೆಗಾಗಿ ಗುರುತಿಸಿಕೊಂಡಿದ್ದರು.

ಹಲವು ಮೈಲಿಗಲ್ಲು

ಹಲವು ಮೈಲಿಗಲ್ಲು

ಬೆನ್ ಸ್ಟೋಕ್ಸ್ ಸಿಡಿಸಿದ ಈ 89 ರನ್ ಅವರಿಗೆ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಲೂ ನೆರವಾಗಿದೆ. 89 ರನ್‌ನಿಂದಾಗಿ ಸ್ಟೋಕ್ಸ್ 16ನೇ ಏಕದಿನ ಅರ್ಧ ಶತಕ, ಇಂಗ್ಲೆಂಡ್‌ನಲ್ಲಿ 7ನೇ ಏಕದಿನ ಅರ್ಧ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಏಕದಿನ ಅರ್ಧ ಶತಕ, 2019ರ ಮೂರನೇ ಏಕದಿನ ಅರ್ಧ ಶತಕವಾಗಿ ದಾಖಲಾಗಿದೆ.

ಮ್ಯಾನ್ ಆಫ್ ದ ಮ್ಯಾಚ್ ಮಿಂಚು

ಮ್ಯಾನ್ ಆಫ್ ದ ಮ್ಯಾಚ್ ಮಿಂಚು

ಬೆನ್ ಸ್ಟೋಕ್ಸ್ 2019ರ ಉದ್ಘಾಟನಾ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಜಾಚಿಕೊಂಡರು. ಇದೂ ಹಲವಾರು ದಾಖಲೆಯಾಗಿ ಗಮನ ಸೆಳೆದಿದೆ. ಗುರುವಾರ ಸ್ಟೋಕ್ಸ್ ಪಡೆದ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯು ವಿಶ್ವಕಪ್‌ನಲ್ಲಿ ಆಂಗ್ಲ ಆಟಗಾರ ಪಡೆಯುತ್ತಿರುವ ನಾಲ್ಕನೇ ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ, ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಪರ ವಿಶ್ವಕಪ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುತ್ತಿರುವ 13ನೇ ಆಟಗಾರನಾಗಿ, ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುತ್ತಿರುವ ಮೊದಲ ಆಟಗಾರನಾಗಿಯೂ ಗುರುತಿಸಿಕೊಂಡಿತು.

Story first published: Friday, May 31, 2019, 10:22 [IST]
Other articles published on May 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X