ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ 2019: ಪಂದ್ಯ ಸೋತರೂ, ಹೃದಯ ಗೆದ್ದ ಅಫಘಾನಿಸ್ತಾನ

By ಆರ್‌. ಕೌಶಿಕ್‌, ಲಂಡನ್‌
ICC World Cup 2019: Bravehearts from Afghanistan

ಸೌಥಂಪ್ಟನ್‌, ಜೂನ್‌ 23: ಸೋತರೂ ಕೂಡ ಅಫಘಾನಿಸ್ತಾನ ತಂಡ ಒಂದು ರೀತಿಯಲ್ಲಿ ವಿಜೇತ. ಶನಿವಾರ (ಜೂನ್‌ 22) ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ವಾಸ್ತವಿಕ ಜಯ ದಾಖಲಿಸಿ 2 ಅಂಕ ಗಳಿಸಲಿಲ್ಲ ಎಂಬುದನ್ನು ಬಿಟ್ಟರೆ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿ ಅಭಿಮಾನಿಗಳ ಮನದಲ್ಲಿ ನೈತಿಕ ಗೆಲುವನ್ನು ದಾಖಲಿಸಿತ್ತು. ಇಂಗ್ಲೆಂಡ್‌ ವಿರುದ್ಧದ ಹೀನಾಯ ಸೋಲಿನ ಬಳಿಕ ಅದ್ಭುತವಾಗಿ ಪುಟಿದೆದ್ದಿದ್ದ ಆಫ್ಘನ್‌ ತಂಡ ಬಲಿಷ್ಠ ಭಾರತದ ಎದುರು ಅವಿಸ್ಮರಣೀಯ ಗೆಲುವಿನ ಸಮೀಪಕ್ಕೆ ಕಾಲಿಟ್ಟಿತ್ತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಅದ್ಭುತ, ಅಮೋಘ, ಸೋಲರಿಯದ ಸರದಾರ, ಬಲಿಷ್ಠ, ಅನುಭವಿಗಳ ಪಡೆ ಹಾಗೂ ಪರಿಪಕ್ವ ತಂಡ ಭಾರತ. ಇಂತಹ ತಂಡದ ಎದುರು ಅಫಘಾನಿಸ್ತಾನ ತಂಡ ನಿಜಕ್ಕೂ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿತ್ತು.

ಭಾರತ ತಂಡ ದಾಖಲಿಸಿದ 224 ರನ್‌ಗಳ ಅಲ್ಪ ಮೊತ್ತವನ್ನು ಬೆನ್ನತ್ತಿದ ಅಫಘಾನಿಸ್ತಾನ 11 ರನ್‌ಗಳ ಅಂತರದಲ್ಲಿ ಸೋಲನುಭವಿಸಿತು. ಇದಕ್ಕೆ ತಂಡದ ಅನುಭವದ ಕೊರತೆ ಒಂದು ಕಾರಣವಾದರೆ, ಟೀಮ್‌ ಇಂಡಿಯಾದ ಸ್ಟಾರ್‌ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅವರ ಗುಣಮಟ್ಟದ ಬೌಲಿಂಗ್‌ ಕೂಡ ಕಾರಣವಾಗುತ್ತದೆ. ಜೊತೆಗೆ ಅಷ್ಟೇ ಅತ್ಯುತ್ತಮ ಪ್ರದರ್ಶನ ನೀಡಿದ ಮೊಹಮ್ಮದ್‌ ಶಮಿ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದರು. ಹಾರ್ದಿಕ್‌ ಪಾಂಡ್ಯ ಕೂಡ ತಮ್ಮ ಜವಾಬ್ದಾರಿ ನಿಭಾಯಿಸಿದರೆ, ಸ್ಪಿನ್‌ ಜೋಡಿ ಕುಲ್ದೀಪ್‌ ಯಾದವ್‌ ಮತ್ತು ಯುಜ್ವೇಂದ್ರ ಚಹಲ್‌ ಕೂಡ ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಅಭ್ಯಾಸ-ವಿಶ್ರಾಂತಿಯ ಪಕ್ಕಾ ಫಾರ್ಮುಲಾ ಕಂಡುಕೊಂಡ ಟೀಮ್‌ ಇಂಡಿಯಾ!ಅಭ್ಯಾಸ-ವಿಶ್ರಾಂತಿಯ ಪಕ್ಕಾ ಫಾರ್ಮುಲಾ ಕಂಡುಕೊಂಡ ಟೀಮ್‌ ಇಂಡಿಯಾ!

ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರದೇ ಇದ್ದರೂ, ಸೂಕ್ತ ಸಂದರ್ಭಗಳಲ್ಲಿ ಅತ್ಯುತ್ತಮ ಆಟವಾಡಿತು. ಆದರೆ, ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಸಂಪೂರ್ಣವಾಗಿ ಭಾರತೀಯ ಅಭಿಮಾನಿಗಳೇ ತುಂಬಿದ್ದರೂ ಅವರೆದುರು ಹೋರಾಡಿ ಕೊನೆಯಲ್ಲಿ ಸೋಲೊಪ್ಪಿಕೊಂಡ ಅಫಘಾನಿಸ್ತಾನ ಎಲ್ಲರ ಹೃದಯವನ್ನು ಗೆದ್ದಿತ್ತು.

2010ರ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡ ಮೊದಲು ಬ್ಯಾಟ್‌ ಮಾಡಿ 50 ಓವರ್‌ಗಳನ್ನು ಪೂರ್ಣಗೊಳಿಸಿ ಗಳಿಸಿದ ಅತ್ಯಂತ ಕಡಿಮೆ ಮೊತ್ತವಿದು. ನಾಲ್ಕು ದಿನಗಳ ಹಿಂದಷ್ಟೇ ಇಂಗ್ಲೆಂಡ್‌ ಎದುರು 397 ರನ್‌ಗಳನ್ನು ಬಿಟ್ಟುಕೊಟ್ಟ ತಂಡವೊಂದು ಭಾರತ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ್ದು ನಿಜಕ್ಕೂ ಅಮೋಘ ಸಾಧನೆಯೇ ಸರಿ. ತಿರುವು ಪಡೆದುಕೊಲ್ಳುವ ಎಸೆತಗಳ ಎದುರು ಅತ್ಯುತ್ತಮವಾಗಿ ಬ್ಯಾಟಿಂಗ್‌ ಮಾಡುವುದಕ್ಕೆ ಹೆಸರುವಾಸಿಯಾದ ಬ್ಯಾಟ್ಸ್‌ಮನ್‌ಗಳ ಎದುರು ನಾಲ್ವರು ಸ್ಪಿನ್ನರ್‌ಗಳನ್ನು ದಾಳಿಗಿಳಿಸಿ ಆಫ್ಘನ್‌ ಯಶಸ್ಸು ಗಳಿಸಿತು. ಸ್ಪಿನ್ನರ್‌ಗಳಾದ ಮುಜೀಬ್‌ ಉರ್‌ ರೆಹಮಾನ್‌, ಮೊಹಮ್ಮದ್‌ ನಬಿ, ರಶೀದ್‌ ಖಾನ್‌ ಹಾಗೂ ರೆಹಮತ್‌ ಶಾ ಅದ್ಭುತವಾಗಿ ಬೌಲಿಂಗ್‌ ನಡೆಸಿದರು.

ಹ್ಯಾಟ್ರಿಕ್ ಪಡೆಯಲು ಧೋನಿ ಕೊಟ್ಟ ಸಲಹೆ ಕಾರಣವಾಯ್ತು : ಶಮಿಹ್ಯಾಟ್ರಿಕ್ ಪಡೆಯಲು ಧೋನಿ ಕೊಟ್ಟ ಸಲಹೆ ಕಾರಣವಾಯ್ತು : ಶಮಿ

ಈ ನಾಲ್ವರು ಸ್ಪಿನ್ನರ್‌ಗಳು ಜೊತೆಯಾಗಿ ಒಟ್ಟು 34 ಓವರ್‌ಗಳನ್ನು ಎಸೆದು 119 ರನ್‌ಗಳನ್ನು ಮಾತ್ರವೇ ಬಿಟ್ಟುಕೊಟ್ಟು 5 ವಿಕೆಟ್‌ಗಳನ್ನು ಕಬಳಿಸಿದರು. ಈ ಅಂಕಿಅಂಶಗಳಿಗಿಂತಲೂ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಈ ಬೌಲರ್‌ಗಳು ನಿಯಂತ್ರಣದಲ್ಲಿಟ್ಟಿದ್ದು ನಿಜಕ್ಕೂ ಗಮನಾರ್ಹ. ಎಂ.ಎಸ್‌ ಧೋನಿ ಚೆಂಡನ್ನು ಬಡಿದಟ್ಟಲು ಕಷ್ಟಪಟ್ಟರು, ಕೆ.ಎಲ್‌ ರಾಹುಲ್‌ ಮತ್ತು ವಿಜಯ್‌ ಶಂಕರ್‌ ಬಲವಂತವಾಗಿ ಎಚ್ಚರಿಕೆಯ ಆಟವನ್ನಾಡುವಂತಾಯಿತು. ಕೇದಾರ್‌ ಜಾಧವ್‌ಗು ಕೂಡ ತಮ್ಮ ವೈವಿದ್ಯಮಯ ಹೊಡೆತಗಳನ್ನು ಆಡಲು ಸಾಧ್ಯವಾಗಲಿಲ್ಲ. ಕೇವಲ ವಿರಾಟ್‌ ಕೊಹ್ಲಿ ಮಾತ್ರವೇ ತಂಡದ ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳಿಗಿಂತಲೂ ವಿಭಿನ್ನವಾಗಿ ಬ್ಯಾಟ್‌ ಬೀಸಿದರು. ಆದರೂ, ಮೊಹಮ್ಮದ್‌ ನಬಿ ಬೌಲಿಂಗ್‌ನಲ್ಲಿ ನಿರೀಕ್ಷೆಗೂ ಮೀರಿ ಪುಟಿದೆದ್ದ ಚೆಂಡನ್ನು ಕಟ್‌ ಮಾಡುವ ಪ್ರಯತ್ನದಲ್ಲಿ ವಿಕೆಟ್‌ ಕೈಚೆಲ್ಲಿದರು.

ವಿಶ್ವಕಪ್‌ ಆರಂಭಕ್ಕೂ ಮುನ್ನ ಅಫಘಾನಿಸ್ತಾನ ತಂಡದ ದೀರ್ಘಕಾಲದ ನಾಯಕ ಅಸ್ಗರ್‌ ಆಫ್ಗನ್‌ ಅವರನ್ನು ಕೆಳಗಿಳಿಸಿ ಗುಲ್ಬದಿನ್‌ ನೈಬ್‌ ಅವರನ್ನು ನೂತನ ನಾಯಕನನ್ನಾಗಿ ಮಾಡಲಾಗಿತ್ತು. ಹೀಗಾಗಿ ನೈಬ್‌ ತಮ್ಮ ನಾಯಕತ್ವದ ಆರಂಭದಲ್ಲೇ ಹಲವು ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಅದರಲ್ಲೂ ಭಾರತ ವಿರುದ್ಧದ ವೀರೋಚಿತ ಸೋಲಿನ ಬಳಿಕ ನೈಬ್‌, ಕಷ್ಟವಾದರೂ ನಗುಮುಖದಲ್ಲೇ ತಮ್ಮ ನೆಚ್ಚಿನ ತಂಡ ಮತ್ತು ನೆಚ್ಚಿನ ಆಟಗಾರರ ಕುರಿತಾಗಿ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಆಂಗ್ಲರ ವಿರುದ್ಧ ಕಿತ್ತಳೆ ಜರ್ಸಿ ತೊಟ್ಟು ಟೀಂ ಇಂಡಿಯಾ ಕಣಕ್ಕೆ?ಆಂಗ್ಲರ ವಿರುದ್ಧ ಕಿತ್ತಳೆ ಜರ್ಸಿ ತೊಟ್ಟು ಟೀಂ ಇಂಡಿಯಾ ಕಣಕ್ಕೆ?

ವಿಶ್ವಕಪ್‌ಗೂ ಮುನ್ನ ನಾಯಕನ ಬದಲಾವಣೆ ಕುರಿತಾಗಿ ತಂಡದ ಅನುಭವಿ ಆಟಗಾರರಾದ ರಶೀದ್‌ ಖಾನ್‌ ಮತ್ತು ಮೊಹಮ್ಮದ್‌ ನಬಿ ಕಟುವಾಗುಗಿ ಟೀಕಿಸಿದ್ದರು. ಇದರರ್ಥ ಅವರು ನೈಬ್‌ ವಿರೋಧಿಗಳು ಎಂದಲ್ಲ. ಬದಲಾಗಿ ವಿಶ್ವಕಪ್‌ ಹತ್ತಿರ ಇರುವ ಸಂದರ್ಭದಲ್ಲಿ ನಾಯಕತ್ವದ ಬದಲಾವಣೆ ತಂಡದ ಪ್ರದರ್ಶನ ಮೇಲೆ ಋಣಾತ್ಮಕ ಪ್ರಭಾವ ಬೀರಬಹುದು ಎಂಬುದನ್ನು ಅವರ ಕಾಳಜಿಯಾಗಿತ್ತು. ನೈಬ್‌ಗೆ ಆಟಗಾರರ ಈ ಭಾವನೆ ತಿಳಿಯದೇ ಇದ್ದರೂ ಕೂಡ, ತಂಡವನ್ನು ತಮ್ಮತ್ತ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೂ, ಫಲಿತಾಂಶ ಅಷ್ಟು ಹೇಳಿಕೊಳ್ಳುವಂಥದ್ದೇನಿಲ್ಲ. ಆದರೆ, ಶನಿವಾರ ತಮ್ಮ ನೆಚ್ಚಿನ ತಂಡದ ಎದುರು ನೀಡಿದಂತಹ ದಿಟ್ಟ ಪ್ರದರ್ಶನ ನೈಬ್‌ ಅವರ ಮುಖದಲ್ಲಿ ಸಂತಸ ತಂದೊಡ್ಡಿತ್ತು.

"ಒಂದು ಹಂತದಲ್ಲಿ ನಾವು ಗೆಲ್ಲುತ್ತೇವೆ ಎಂದೆನಿಸಿತ್ತು. ಅದರಲ್ಲೂ ಸುಲಭವಾಗಿ. ಆದರೆ, ಅಂತ್ಯದಲ್ಲಿ ನಮ್ಮ ಭಾವನೆಗಳು ಹೊರಬಂದವು. ಭಾರತದಂತಹ ಬಲಿಷ್ಠ ತಂಡವನ್ನು ಸೋಲಿಸುವ ಉತ್ತಮ ಅವಕಾಶವನ್ನು ಕೈಚೆಲ್ಲಿರುವುದಕ್ಕೆ ಬೇಸರವಾಗಿದೆ. ಅದರಲ್ಲೂ ವಿಶ್ವಕಪ್‌ ಟೂರ್ನಿಯಲ್ಲಿ. ಇದು ಸಾಧ್ಯವಾಗಿದ್ದರೆ ನಮ್ಮ ತಂಡದ ಬಹುದೊಡ್ಡ ಸಾಧನೆಯಾಗಿರುತ್ತಿತ್ತು,'' ಎಂದು ನೈಬ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪಾಕ್‌ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣಕೊಟ್ಟ ಹಫೀಝ್‌!ಪಾಕ್‌ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣಕೊಟ್ಟ ಹಫೀಝ್‌!

"ಬಲಿಷ್ಠ ತಂಡಗಳು ಎದುರಾಳಿಗೆ ಗೆಲ್ಲುವ ಅವಕಾಶವನ್ನು ಕಿಂಚಿತ್ತೂ ಬಿಟ್ಟುಕೊಡುವುದಿಲ್ಲ. ಆದರೆ, ನಮಗೆ ಸಿಕ್ಕಿದ್ದ ಅವಕಾಶ ಬಳಿಸಿಕೊಂಡು ಗೆಲ್ಲುವಲ್ಲಿ ನಾವು ವಿಫಲರಾದೆವು. ಭಾರತ ಅತ್ಯುತ್ತಮ ತಂಡ. ನನ್ನ ಅಚ್ಚು ಮೆಚ್ಚಿನ ತಂಡ ಕೂಡ. ಭಾರತ ತಂಡದ ಆಟವನ್ನು ನೋಡುವಾಗ ನಾನು ಭಾರತವನ್ನು ಬೆಂಬಲಿಸುತ್ತೇನೆ. ಹಾಗೆಯೇ ವಿರಾಟ್‌ ಕೊಹ್ಲಿ ನನ್ನ ಅಚ್ಚುಮೆಚ್ಚಿನ ಆಟಗಾರ. ಇಂದು ಅವರ ಎದುರು ಆಡಿದ್ದೇನೆ,'' ಎಂದು ಹೇಳಿದರು.

ಅಫಘಾನಿಸ್ತಾನ ತಂಡ ಈ ಬಾರಿ ಭಾರತ ವಿರುದ್ಧದ ಪಂದ್ಯದಲ್ಲಿ ಸೋತ ತಂಡದ ಸಾಲಿನಲ್ಲಿ ನಿಂತಿರಬಹುದು, ಆದರೆ, ಮುಂದಿನ ದಿನಗಳಲ್ಲಿ ಆಫ್ಘನ್‌ ಪಡೆ ಮತ್ತಷ್ಟು ಅನುಭವ ಪಡೆಯಲಿದ್ದು, ಎದುರಾಳಿ ತಂಡಗಳಿಗೆ ಮತ್ತಷ್ಟು ಅಪಾಯಕಾರಿ ಸಾಬೀತಾಗುವುದಂತೂ ಖಂಡಿತ.

Story first published: Sunday, June 23, 2019, 22:27 [IST]
Other articles published on Jun 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X