ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭ್ಯಾಸ ಪಂದ್ಯದಲ್ಲಿ ಫೀಲ್ಡಿಂಗ್ ಮಾಡಿದ ಇಂಗ್ಲೆಂಡ್ ಕೋಚ್

ICC World Cup 2019 | England Assistant Coach Paul Collingwood takes Field For England

ಲಂಡನ್, ಮೇ 26: ವಿಶ್ವಕಪ್ ಕ್ರಿಕೆಟ್ ಮೇ 30ರಿಂದ ಆರಂಭವಾಗಲಿದೆ. ಸದ್ಯ ಅಭ್ಯಾಸ ಪಂದ್ಯಗಳು ಜಾರಿಯಲ್ಲಿವೆ. ಇಂಗ್ಲೆಂಡ್ ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಈ ಪಂದ್ಯದಲ್ಲಿ ಆಟಗಾರರು ಅಲಭ್ಯರಾಗಿದ್ದರಿಂದ ತಂದ ಕೋಚ್, ಮಾಜಿ ಆಟಗಾರ ಪಾಲ್ ಕಾಲಿಂಗ್ ವುಡ್ ಅವರು ಮೈದಾನಕ್ಕಿಳಿದು ಫೀಲ್ಡಿಂಗ್ ಮಾಡಿದ ಘಟನೆ ನಡೆಯಿತು.

ಗಂಭೀರ ಗಾಯದ ಸಮಸ್ಯೆ ಎದುರಿಸಿದೆ. ನಾಯಕ ಇವೋಯಿನ್ ಮಾರ್ಗನ್, ಬೆರಳಿನ ಮುರಿತಕ್ಕೆ ಒಳಗಾಗಿರುವುದು ಖಚಿತವಾಗಿದ್ದು, ವಿಶ್ವಕಪ್​ಗೆ ಅನುಮಾನ ಎನ್ನುವ ವರದಿ ಇದೆ. ಶನಿವಾರ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ತಂಡದ ಪ್ರಮುಖ ವೇಗಿಗಳಾದ ಜೋಫ್ರಾ ಆರ್ಚರ್ ಹಾಗೂ ಮಾರ್ಕ್ ವುಡ್ ಗಾಯಕ್ಕೆ ತುತ್ತಾಗಿ ಆರಂಭದಲ್ಲೇ ಪಂದ್ಯದಿಂದ ಹೊರನಡೆದರು. ಇದರಿಂದಾಗಿ ಇಂಗ್ಲೆಂಡ್​ನ ಸಹಾಯಕ ಕೋಚ್ ಹಾಗೂ ಭಾನುವಾರ 43ನೇ ವರ್ಷಕ್ಕೆ ಕಾಲಿಡಲಿರುವ ಪಾಲ್ ಕಾಲಿಂಗ್​ವುಡ್, ಅಭ್ಯಾಸ ಪಂದ್ಯದಲ್ಲಿ ಫೀಲ್ಡರ್ ಆಗಿ ಕಾರ್ಯನಿರ್ವಹಿಸಿ ಅಚ್ಚರಿ ಮೂಡಿಸಿದರು.

ಇಂಗ್ಲೆಂಡಿನ ವೇಗಿಗಳಾದ ಮಾರ್ಕ್ ವುಡ್ ಬೌಲಿಂಗ್ ಮಾಡುವ ವೇಳೆ ಗಾಯಗೊಂಡರೆ,ಜೊಫ್ರಾ ಆರ್ಚರ್ ಬೌಂಡರಿ ತಡೆಯುವ ಯತ್ನದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಇನ್ನು ತಮ್ಮ ಅಜ್ಜನ ನಿಧನದ ಕಾರಣಕ್ಕೆ ಜೋ ರೂಟ್ ಅಭ್ಯಾಸ ಪಂದ್ಯ ಆಡಿರಲಿಲ್ಲ. ಹೀಗಾಗಿ, ಜೋಸ್ ಬಟ್ಲರ್ ತಂಡವನ್ನು ಮುನ್ನಡೆಸಿದ್ದರು. ಆಟಗಾರರ ಕೊರತೆ ಎದುರಿಸಿದ್ದ ತಂಡಕ್ಕೆ ಆಸರೆಯಾದ 42 ವರ್ಷ ವಯಸ್ಸಿನ ಕೋಚ್ ಕಾಲಿಂಗ್ ವುಡ್ ಅವರು ಬದಲಿ ಆಟಗಾರರಾಗಿ ಕಣಕ್ಕಿಳಿದರು.

ಇಂಗ್ಲೆಂಡ್ ತಂಡ ಗಾಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿದ್ದು, ಇಯಾನ್ ಮಾರ್ಗನ್ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಸ್ಪಿನ್ನರ್ ಆದಿಲ್ ರಶೀದ್ ದೀರ್ಘ ಕಾಲದಿಂದ ಭುಜದ ಗಾಯಕ್ಕೆ ಒಳಗಾಗಿದ್ದಾರೆ. ಕ್ರಿಸ್ ವೋಕ್ಸ್ ಕೂಡ ಅಭ್ಯಾಸ ಪಂದ್ಯದಲ್ಲಿ ಕೇವಲ ಬ್ಯಾಟ್ಸ್​ಮನ್ ಆಗಿ ಆಡಿದ್ದರು.. ಪ್ರಸ್ತುತ ಇಂಗ್ಲೆಂಡ್ ತಂಡದಲ್ಲಿರುವ 15 ಆಟಗಾರರ ಪೈಕಿ 11 ಆಟಗಾರರು ಮಾತ್ರವೇ ಸಂಪೂರ್ಣವಾಗಿ ಫಿಟ್ ಆಗಿರುವುದು ಆತಂಕಕಾರಿಯಾಗಿದೆ.

Story first published: Sunday, May 26, 2019, 13:25 [IST]
Other articles published on May 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X