ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆರ್ಚರ್ ಸೇರಿಕೊಂಡರೆ ಇಂಗ್ಲೆಂಡ್ ವಿಶ್ವಕಪ್ ತಂಡವನ್ನು ತಡೆಯೋರಿಲ್ಲ!'

ಆರ್ಚರ್ ಗೆ ಸಿಗುತ್ತಾ ತಂಡದಲ್ಲಿ ಸ್ಥಾನ..? | Oneindia Kannada
ICC World Cup 2019: England will be ‘better team’ with Archer, says Plunkett

ಲಂಡನ್, ಮೇ 9: ಜೋಫ್ರಾ ಆರ್ಚರ್ ಇಂಗ್ಲೆಂಡ್ ವಿಶ್ವಕಪ್ ತಂಡ ಸೇರಿಕೊಂಡುಬಿಟ್ಟರೆ ತಂಡ ಇನ್ನೂ ಬಲಿಷ್ಠ ಅನ್ನಿಸಿಕೊಳ್ಳಲಿದೆ ಎಂದು ಇಂಗ್ಲೆಂಡ್ ಕ್ರಿಕೆಟರ್ ಲಿಯಾಮ್ ಪ್ಲಂಕೆಟ್ ಅಭಿಪ್ರಾಯಪಟ್ಟಿದ್ದಾರೆ. ಆರ್ಚರ್ ಇತ್ತೀಚೆಗೆ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದಾರಾದರೂ ಇಂಗ್ಲೆಂಡ್ ವಿಶ್ವಕಪ್ ತಂಡದಲ್ಲಿ ಅವರ ಹೆಸರಿಲ್ಲ.

ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಮೂರು ವಿಶ್ವಕಪ್‌ಗಳಲ್ಲಿ ಅಝರುದ್ದೀನ್‌ ಸಾಧನೆಯೇನು?ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಮೂರು ವಿಶ್ವಕಪ್‌ಗಳಲ್ಲಿ ಅಝರುದ್ದೀನ್‌ ಸಾಧನೆಯೇನು?

ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಮೇ 3ರಂದು ನಡೆದಿದ್ದ ಇಂಗ್ಲೆಂಡ್ vs ಐರ್ಲೆಂಡ್ ಏಕಮಾತ್ರ ಏಕದಿನ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸದ್ಯ ಇಂಗ್ಲೆಂಡ್‌ನ ಕಾರ್ಡಿಫ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ vs ಪಾಕಿಸ್ತಾನ ಕ್ರಿಕೆಟ್ ಸರಣಿಯಲ್ಲಿ ಆರ್ಚರ್ ಇಂಗ್ಲೆಂಡ್ ಪ್ರತಿನಿಧಿಸುತ್ತಿದ್ದಾರೆ.

ದೇಸಿ ಕ್ರಿಕೆಟಿಗರ ಪತ್ನಿ/ಗರ್ಲ್‌ಫ್ರೆಂಡ್ಸ್ ಭಾರತ-ಪಾಕ್ ವಿಶ್ವಕಪ್ ವೀಕ್ಷಿಸುವಂತಿಲ್ಲ!ದೇಸಿ ಕ್ರಿಕೆಟಿಗರ ಪತ್ನಿ/ಗರ್ಲ್‌ಫ್ರೆಂಡ್ಸ್ ಭಾರತ-ಪಾಕ್ ವಿಶ್ವಕಪ್ ವೀಕ್ಷಿಸುವಂತಿಲ್ಲ!

ಜೋಫ್ರಾ ಆರ್ಚರ್ ಇತ್ತೀಚಿನ ಪ್ರದರ್ಶನ ನೋಡಿದರೆ ಪ್ಲಂಕೆಟ್ ಮಾತಿನಲ್ಲಿ ಅರ್ಥವಿದೆ ಎನಿಸುತ್ತದೆ. ಆರ್ಚರ್ ಯಾಕೆ ಈಗ ಗಮನ ಸೆಳೆಯುತ್ತಿದ್ದಾರೆ ಎಂಬುದಕ್ಕೆ ಇಲ್ಲೊಂದಿಷ್ಟು ಅಂಶಗಳಿವೆ.

ಕ್ಲಬ್ ಕ್ರಿಕೆಟ್ ಆಟಗಾರ

ಕ್ಲಬ್ ಕ್ರಿಕೆಟ್ ಆಟಗಾರ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿರಿಸುವುದಕ್ಕೂ ಮುನ್ನ ಜೋಫ್ರಾ ಆರ್ಚರ್ ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್‌ಗಾಗಿ ಆಡುತ್ತಿದ್ದರು. ಪಾಕಿಸ್ತಾನ ವಿರುದ್ಧ ಸರಣಿಯ ಏಕಮಾತ್ರ ಟಿ20 ಪಂದ್ಯದಲ್ಲಿ ಜೋಫ್ರಾ 29 ರನ್‌ಗೆ 2 ವಿಕೆಟ್ ಕೆಡವಿದ್ದರು. ಅದಕ್ಕೂ ಹಿಂದೆ ಐರ್ಲೆಂಡ್ ವಿರುದ್ಧದ ಪಾದಾರ್ಪಣೆ ಪಂದ್ಯದಲ್ಲೂ ಆರ್ಚರ್‌ಗೆ ಚೊಚ್ಚಲ ಏಕದಿನ ವಿಕೆಟ್ ಲಭಿಸಿತ್ತು.

ಎರಡನೇ ಪಂದ್ಯದಲ್ಲೂ ವಿಕೆಟ್

ಎರಡನೇ ಪಂದ್ಯದಲ್ಲೂ ವಿಕೆಟ್

ಪಾಕ್-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲೂ ಎರಡನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ್ದ ಆರ್ಚರ್ ಮತ್ತು ಪ್ಲಂಕೆಟ್ ತಲಾ 1 ವಿಕೆಟ್ ಮುರಿದಿದ್ದರು. ಈ ಪಂದ್ಯದಲ್ಲಿ ಪಾಕಿಸ್ತಾನ 19 ಓವರ್‌ ವರೆಗೆ ಆಡಿತ್ತು. ನಂತರ ಮಳೆಯ ಕಾರಣ ಪಂದ್ಯವನ್ನು ಫಲಿತಾಂಶವಿಲ್ಲವೆಂದು ಘೋಷಿಲಾಯ್ತು.

ರಾಜಸ್ಥಾನ್ ರಾಯಲ್ಸ್‌ನಲ್ಲಿದ್ದ ಆಲ್ ರೌಂಡರ್

ರಾಜಸ್ಥಾನ್ ರಾಯಲ್ಸ್‌ನಲ್ಲಿದ್ದ ಆಲ್ ರೌಂಡರ್

ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಜೊತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಪ್ಲಂಕೆಟ್ ಮಾತನಾಡುತ್ತ, 'ಆತ (ಆರ್ಚರ್) ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಕೆಟ್ ಪಡೆದಿದ್ದಾರೆ. ಜೋಫ್ರಾ ಬ್ಯಾಟಿಂಗ್ ಕೂಡ ಮಾಡುವುದರಿಂದ ವಿಶ್ವಕಪ್‌ನಲ್ಲಿ ಅವರಿಂದ ತಂಡಕ್ಕೆ ಅನುಕೂಲವಾಗಲಿದೆ' ಎಂದರು. ಆಲ್ ರೌಂಡರ್ ಆರ್ಚರ್ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು.

ವಿಶ್ವಕಪ್‌ಗಾಗಿ ಇಂಗ್ಲೆಂಡ್ ತಂಡ

ವಿಶ್ವಕಪ್‌ಗಾಗಿ ಇಂಗ್ಲೆಂಡ್ ತಂಡ

ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ತಂಡದಿಂದ ಹೊರ ಬಿದ್ದಿರುವುದರಿಂದ ಆರ್ಚರ್‌ಗೆ ಸ್ಥಾನ ಲಭಿಸುವ ಸಾಧ್ಯತೆಯೂ ಇದೆ. ಸದ್ಯ ಇಂಗ್ಲೆಂಡ್ (14 ಜನರ) ತಂಡದಲ್ಲಿ ಇಯಾನ್ ಮಾರ್ಗನ್, ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಜೋ ಡೆನ್ಲಿ, ಕ್ರಿಸ್ ವೋಕ್ಸ್, ಟಾಮ್ ಕರನ್, ಡೇವಿಡ್ ವಿಲ್ಲೆ, ಜಾನಿ ಬೇರ್ಸ್ಟೋವ್, ಜೋಸ್ ಬಟ್ಲರ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್ ಮತ್ತು ಮಾರ್ಕ್ ವುಡ್ ಇದ್ದಾರೆ.

Story first published: Thursday, May 9, 2019, 18:05 [IST]
Other articles published on May 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X