ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ನೋಡಲೇಬೇಕಾದ ಐವರು ಆಕರ್ಷಣೀಯ ಆಟಗಾರರು

ICC World Cup 2019: Five players to watch out for

ಲಂಡನ್, ಮೇ 25: ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮೇ 30ರಿಂದ ಆರಂಭಗೊಳ್ಳುತ್ತಿರುವ 2019ರ ವಿಶ್ವಕಪ್ ಕ್ರಿಕೆಟ್, ವಿಶ್ವಕಪ್ ಇತಿಹಾಸದಲ್ಲೇ ಜಿದ್ದಾಜಿದ್ದಿಯ ಟೂರ್ನಿಯಾಗಿ ಗುರುತಿಸಿಕೊಳ್ಳಲಿದೆ ಎಂದು ಕ್ರಿಕೆಟ್ ಪಂಡಿತರಿಂದ, ಅಭಿಮಾನಿಗಳಿಂದ ಹೇಳಲ್ಪಟ್ಟಿದೆ. ಟೂರ್ನಿಯಲ್ಲಿ ಬಲಿಷ್ಠ 10 ತಂಡಗಳು ಕಾದಾಡುತ್ತಿರುವುದು ಇದಕ್ಕೆ ಕಾರಣ.

ಏಕದಿನ ವಿಶ್ವಕಪ್ ಇತಿಹಾಸ ಪುಟಗಳಲ್ಲಿ ಇಂದಿಗೂ ಮುರಿಯದ ದಾಖಲೆಗಳು!ಏಕದಿನ ವಿಶ್ವಕಪ್ ಇತಿಹಾಸ ಪುಟಗಳಲ್ಲಿ ಇಂದಿಗೂ ಮುರಿಯದ ದಾಖಲೆಗಳು!

ಏಕದಿನ ಕ್ರಿಕೆಟ್ ರ್ಯಾಂಕಿಂಗ್ ಆಧಾರದಲ್ಲಿ ಹೋದರೆ ನಂ.1 ಸ್ಥಾನದಲ್ಲಿರುವ ಇಂಗ್ಲೆಂಡ್ ಅತೀ ಬಲಿಷ್ಠ ತಂಡ. ಇತ್ತೀಚಿನ ಇಂಗ್ಲೆಂಡ್ ಪ್ರದರ್ಶನವೂ ಇದಕ್ಕೆ ಸಾಕ್ಷಿ ಒದಗಿಸಿದೆ. ಇಂಗ್ಲೆಂಡ್ ಸದ್ಯ ಭರ್ಜರಿ ಫಾರ್ಮ್‌ನಲ್ಲಿ ಇರುವುದಂತೂ ನಿಜ.

ಒಡಿಐ ವಿಶ್ವಕಪ್‌ನಲ್ಲಿ ಅಬ್ಬರಿಸಿದ 5 ಅಗ್ರಮಾನ್ಯ ಬೌಲರ್‌ಗಳಿವರು!ಒಡಿಐ ವಿಶ್ವಕಪ್‌ನಲ್ಲಿ ಅಬ್ಬರಿಸಿದ 5 ಅಗ್ರಮಾನ್ಯ ಬೌಲರ್‌ಗಳಿವರು!

ಇನ್ನು ದ್ವಿತೀಯ ಸ್ಥಾನದಲ್ಲಿರುವ ಭಾರತ, ತೃತೀಯ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ, 4ನೇ ಸ್ಥಾನದ ನ್ಯೂಜಿಲ್ಯಾಂಡ್, 5ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಇವೆಲ್ಲವೂ ಪ್ರಬಲ ಸ್ಪರ್ಧೆಯೊಡ್ಡಬಲ್ಲ ತಂಡಗಳು. ಈ ತಂಡಗಳಲ್ಲಿರುವ ಆಟಗಾರರಿಗೆ ಹೊರತಾಗಿ ಇನ್ನೊಂದಿಷ್ಟು ಆಕರ್ಷಣೀಯ ಆಟಗಾರರೂ ಇದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!

ಈ ಬಾರಿಯ ವಿಶ್ವಕಪ್ ಟೂರ್ನಿ ವೇಳೆ ನೀವು ಆಟ ವೀಕ್ಷಿಸೋದನ್ನು ಮಿಸ್ ಮಾಡಿಕೊಳ್ಳಬಾರದ ಐದು ಆಟಗಾರರ ಸಂಕ್ಷಿಪ್ತ ವಿವರ ಇಲ್ಲಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಬಾರಿ ವಿಶ್ವಕಪ್ ಟೂರ್ನಿಯ ಅತೀ ಆಕರ್ಷಣೀಯ ಆಟಗಾರ ಎನಿಸಲಿದ್ದಾರೆ. ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ಬಳಿಕ ಅನೇಕ ದಾಖಲೆಗಳು ಕೊಹ್ಲಿ ಹೆಸರಿನಲ್ಲಿದೆ. ಏಕದಿನದಲ್ಲಿ ಸಚಿನ್ ಬಳಿಕ (49 ಶತಕಗಳು) ಕೊಹ್ಲಿ (41 ಶತಕಗಳು) ಅತ್ಯಧಿಕ ಶತಕಗಳ ದಾಖಲೆ ಹೊಂದಿದ್ದಾರೆ. ಅತ್ಯಧಿಕ ಬ್ಯಾಟಿಂಗ್ ಎವರೇಜ್ ಗೂ (60ರ ಹತ್ತಿರ) ಕೊಹ್ಲಿ ಗುರುತಿಸಿಕೊಂಡಿದ್ದಾರೆ.

ಕ್ರಿಸ್ ಗೇಲ್

ಕ್ರಿಸ್ ಗೇಲ್

ಏಕದಿನ ರ್ಯಾಂಕಿಂಗ್‌ನಲ್ಲಿ ವೆಸ್ಟ್ ಇಂಡೀಸ್ ತಂಡ 8ನೇ ಸ್ಥಾನದಲ್ಲಿದೆ. ಈ ಬಾರಿ ಅಂಥ ಅಪಾಯ ತಂಡವಾಗಿ ವಿಂಡೀಸ್ ಕಾಣಿಸಿಕೊಂಡಿಲ್ಲ. ಹಾಗಂತ ಮೂಗು ಮುರಿಯಂಗಿಲ್ಲ ನೋಡಿ. ಯಾಕೆಂದರೆ ಈ ಹಿಂದೆ ಎರಡು ಸಾರಿ (1974, 1979) ವಿಶ್ವಕಪ್‌ ಜಯಿಸಿದ ಹೆಗ್ಗಳಿಕೆ ಕೆರಿಬಿಯನ್ನರಿಗಿದೆ. ಅಲ್ಲದೆ ಈ ವಿಶ್ವಕಪ್ ಬಳಿಕ ಸ್ಫೋಟಕ ಬ್ಯಾಟ್ಸ್ಮನ್‌ , ಯುನಿವರ್ಸಲ್ ಬಾಸ್ ಕ್ರಿಸ್‌ ಗೇಲ್ ಅಂತಾರಾಷ್ಟ್ರೀಯ ಏಕದಿನಕ್ಕೆ ವಿದಾಯ ನೀಡುವುದರಲ್ಲಿದ್ದಾರೆ. ಹೀಗಾಗಿ ನಾವು ಗೇಲ್ ಆಟ ಕಣ್ತುಂಬಿಕೊಳ್ಳಬೇಕಲ್ಲವೆ. ಅಂದ್ಹಾಗೇ ವಿಶ್ವಕಪ್‌ನಲ್ಲಿ ಅತಿ ವೇಗದ ದ್ವಿಶತಕ ದಾಖಲೆ ಗೇಲ್ ಹೆಸರಿನಲ್ಲಿದೆ (138 ಎಸೆತ, 200 ರನ್).

ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್

ಚೆಂಡು ವಿರೂಪಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷದ ನಿಷೇಧ ಶಿಕ್ಷೆ ಅನುಭವಿಸಿದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಇಬ್ಬರೂ ಈ ಬಾರಿ ಆಸೀಸ್ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಬ್ಯಾಟಿಂಗ್ ರಸ ದೌತಣ ನೀಡಿದ್ದಾರಾದರೂ ಏಕದಿನ ಕ್ರಿಕೆಟ್‌ನಲ್ಲಿ ಸ್ಮಿತ್ ಕೊಂಚ ಮೇಲುಗೈ ಹೊಂದಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಸ್ಮಿತ್ ಉತ್ತಮ ಪ್ರದರ್ಶನವನ್ನೂ ನೀಡಿದ್ದರಿಂದ ವಿಶ್ವಕಪ್‌ನಲ್ಲಿ ಸ್ಮಿತ್ ಬ್ಯಾಟಿಂಗ್ ಗಮನ ಸೆಳೆಯುವುದನ್ನು ನೀರೀಕ್ಷಿಸಬಹುದು.

ಜೋಫ್ರಾ ಆರ್ಚರ್

ಜೋಫ್ರಾ ಆರ್ಚರ್

ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪ್ರತಿನಿಧಿಸಿ ಮಾರಕ ಬೌಲಿಂಗ್‌ಗೆ ಗಮನ ಸೆಳೆದಿದ್ದ ಇಂಗ್ಲೆಂಡ್ ಯುವ ವೇಗಿ ಜೋಫ್ರಾ ಆರ್ಚರ್ ವಿಶ್ವಕಪ್‌ನಲ್ಲಿ ಹೊಸ ಮುಖ. ಇಂಗ್ಲೆಂಡ್ ಏಕದಿನ ರಾಷ್ಟ್ರೀಯ ತಂಡವನ್ನು ಆರ್ಚರ್ ಸೇರಿದ್ದೇ ಇತ್ತೀಚೆಗೆ. ಆದರೆ ಜೋಫ್ರಾ ಸಾಧನೆ ಅವರಿಗೆ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿದೆ. ಹೀಗಾಗಿ ಈ ಬಾರಿ ವಿಶ್ವಕಪ್‌ನಲ್ಲಿ ಆರ್ಚರ್ ಮಿಂಚು ಹರಿಸಲಿದ್ದಾರೆ.

ರಶೀದ್ ಖಾನ್

ರಶೀದ್ ಖಾನ್

ಅಫ್ಘಾನಿಸ್ತಾನದ ಆಲ್ ರೌಂಡರ್ ರಶೀದ್ ಖಾನ್ ಆಟವನ್ನು ನೀವು ಈ ಸಾರಿ ವಿಶ್ವಕಪ್‌ನಲ್ಲಿ ನೋಡಲೇ ಬೇಕು. ಯಾಕೆಂದರೆ ಖಾನ್, ಬ್ಯಾಟಿಂಗ್‌ಗಾಗಿ ಅಂಥ ಆಕರ್ಷಣೆಯಾಗಿ ಕಾಣದಿದ್ದರೂ ಬೌಲಿಂಗ್‌ಗಾಗಿ ಹೆಚ್ಚು ಮಿನುಗಲಿದ್ದಾರೆ. ಆಲ್ ರೌಂಡರ್ ಯಾದಿಯಲ್ಲಿ ರಶೀದ್ 2ನೇ ಸ್ಥಾನದಲ್ಲಿದ್ದಾರೆ ಎಂದಾದರೆ ಈ ಬಾರಿ ಖಾನ್ ಭರ್ಜರಿ ಆಟ ನಿರೀಕ್ಷಿತ.

Story first published: Saturday, May 25, 2019, 19:40 [IST]
Other articles published on May 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X