ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019 : ರೋಹಿತ್, ಸ್ಟಾರ್ಕ್, ಕೇನ್ ಸೇರಿದಂತೆ ಪ್ರಶಸ್ತಿ ಗೆದ್ದವರು

ಬೆಂಗಳೂರು, ಜುಲೈ 15: ಲಾರ್ಡ್ಸ್ ಅಂಗಳದಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ 2019 ಅಂತಿಮ ಹಣಾಹಣಿಯಲ್ಲಿ ರನ್ ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಲಾಗದ ಇಂಗ್ಲೆಂಡ್, ರೂಲ್ಸ್ ಗಳಿಂದ ಜಯ ದಾಖಲಿಸಿ ಚೊಚ್ಚಲ ಕಪ್ ಎತ್ತಿದೆ.

7 ವಾರ, 49 ಪಂದ್ಯ, 24,050 ಎಸೆತ, 22,410ರನ್, 672 ವಿಕೆಟ್ ಗಳ ಪತನ ನಂತರ ನಿಗದಿತ 50 ಓವರ್ ಗಳಲ್ಲಿ ಪಂದ್ಯದ ಫಲಿತಾಂಶ ಟೈ ಆಗಿದ್ದರಿಂದ ವಿಶ್ವ ಚಾಂಪಿಯನ್ ಯಾರು ಎಂಬುದನ್ನು ನಿರ್ಧರಿಸಲು ಸೂಪರ್ ಓವರ್ ಆಡಬೇಕಾಯಿತು. ಸೂಪರ್ ಓವರ್ ನಲ್ಲೂ ಎರಡು ತಂಡಗಳು ಸಮಬಲ ಸಾಧಿಸಿದ್ದರಿಂದ ಐಸಿಸಿ ನಿಯಮ 6ರ ಪ್ರಕಾರ ಹೆಚ್ಚು ಬೌಂಡರಿ ಗಳಿಸಿದ್ದ ಇಂಗ್ಲೆಂಡಿಗೆ ಜಯ ಲಭಿಸಿತು.

ಈ ಗೆಲುವಿನೊಂದಿಗೆ ಇಂಗ್ಲೆಂಡ್ 4 ಮಿಲಿಯನ್ ಡಾಲರ್ (ಅಂದಾಜು 28 ಕೋಟಿ ರು ಗಳಿಸಿದೆ.

 ವಿಶ್ವಕಪ್ 2019 ಲೀಗ್ ಹಂತದ ನಂತರ ರೋಹಿತ್, ಸ್ಟಾರ್ಕ್ ಮಿಂಚಿಂಗ್ ವಿಶ್ವಕಪ್ 2019 ಲೀಗ್ ಹಂತದ ನಂತರ ರೋಹಿತ್, ಸ್ಟಾರ್ಕ್ ಮಿಂಚಿಂಗ್

ಒಟ್ಟಾರೆ, ಈ ಬಾರಿಯ ವಿಶ್ವಕಪ್ ಅಂತ್ಯ ರೋಚಕವಾಗಿತ್ತು. ಲೀಗ್ ಹಂತದ ಕೊನೆಗೆ ಭಾರತದ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಹಾಗೂ ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಅಗ್ರಸ್ಥಾನದಲ್ಲಿದ್ದರು. ಬ್ಯಾಟ್ಸ್ ಮನ್, ರನ್ ಸರಾಸರಿ, ಬೌಂಡರಿ, ಸಿಕ್ಸರ್, ತ್ವರಿತಗತಿ ಶತಕ, ಬೌಲರ್, ಮಿತವ್ಯಯಿ ಬೌಲರ್, ಹೆಚ್ಚು ಸಿಕ್ಸ್ ಹೊಡೆಸಿಕೊಂಡ ಬೌಲರ್, ಹೆಚ್ಚು ರನ್ ತೆತ್ತ ಬೌಲರ್ ಎಲ್ಲ ಅಂಕಿ ಅಂಶಗಳನ್ನು ಸಂಗ್ರಹಿಸಿ ಈ ಮುಂಚೆ ಮೈಖೇಲ್ ನಲ್ಲಿ ನೀಡಲಾಗಿತ್ತು. ಈಗ ಪ್ರಶಸ್ತಿ ಗಳಿಸಿದವರ ಪಟ್ಟಿ ನಿಮ್ಮ ಮುಂದಿಡುತ್ತಿದ್ದೇವೆ.

ಪ್ರಶಸ್ತಿ, ಬಹುಮಾನ ಮೊತ್ತ

ಪ್ರಶಸ್ತಿ, ಬಹುಮಾನ ಮೊತ್ತ

ಚಾಂಪಿಯನ್ ತಂಡ: ಇಂಗ್ಲೆಂಡ್ -ಬಹುಮಾನದ ಮೊತ್ತ- 4,000,000 ಯುಎಸ್ ಡಾಲರ್ (28 ಕೋಟಿ ರು )
ರನ್ನರ್ ಅಪ್ : ನ್ಯೂಜಿಲೆಂಡ್ -ಬಹುಮಾನದ ಮೊತ್ತ-2,000,000(14 ಕೋಟಿ ರು)
ಸೆಮಿಫೈನಲ್ ಸೋತ ತಂಡ: ಭಾರತ ಹಾಗೂ ಆಸ್ಟ್ರೇಲಿಯಾ-ತಲಾ 800,000 ಯುಎಸ್ ಡಿ (5.6 ಕೋಟಿ ರು)

ಟೂರ್ನಮೆಂಟ್ ಆಟಗಾರ

ಟೂರ್ನಮೆಂಟ್ ಆಟಗಾರ

* ಕೇನ್ ವಿಲಿಯಮ್ಸನ್ : 578 ರನ್, ಸರಾಸರಿ -82.57, 100-2, 50-2, ಗರಿಷ್ಠ-148, ಪಂದ್ಯ ಶ್ರೇಷ್ಠ -2)

ವಿಶ್ವಕಪ್ ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತರು 1992 ರಿಂದ 2019 ರ ತನಕ
* 1992-ಮಾರ್ಟಿನ್ ಕ್ರೋವ್
* 1996-ಸನತ್ ಜಯಸೂರ್ಯ
* 1999-ಲ್ಯಾನ್ಸ್ ಕ್ಲುಸೆನರ್
* 2003-ಸಚಿನ್ ತೆಂಡೂಲ್ಕರ್
* 2007-ಗ್ಲೆನ್ ಮೆಗ್ರಾ
* 2011-ಯುವರಾಜ್ ಸಿಂಗ್
* 2015-ಮಿಚೆಲ್ ಸ್ಟಾರ್ಕ್
* 2019- ಕೇನ್ ವಿಲಿಯಮ್ಸನ್

ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ವಿಜೇತರು

ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ವಿಜೇತರು

ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್, ಜುಲೈ 14, 2019ರ ಪಂದ್ಯ- ಪಂದ್ಯಶ್ರೇಷ್ಠ ಬೆನ್ ಸ್ಟೋಕ್ಸ್ (ಅಜೇಯ 84)

ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ವಿಜೇತರು:
1975-ಕ್ಲೈವ್ ಲಾಯ್ಡ್
1979-ವಿವ್ ರಿಚರ್ಡ್ಸ್
1983-ಮೊಹಿಂದರ್ ಅಮರನಾಥ್
1987-ಡೇವಿಡ್ ಬೂನ್
1992-ವಾಸೀಂ ಅಕ್ರಂ
1996-ಅರವಿಂದ ಡಿ ಸಿಲ್ವಾ
1999-ಶೇನ್ ವಾರ್ನ್
2003-ರಿಕಿ ಪಾಂಟಿಂಗ್
2007-ಆಡಂ ಗಿಲ್ ಕ್ರಿಸ್ಟ್
2011-ಎಂಎಸ್ ಧೋನಿ
2015-ಜೇಮ್ಸ್ ಫಾಲ್ಕನರ್
2019-ಬೆನ್ ಸ್ಟೋಕ್ಸ್

ಬ್ಯಾಟಿಂಗ್ ದಾಖಲೆ

ಬ್ಯಾಟಿಂಗ್ ದಾಖಲೆ

ಅತಿ ಹೆಚ್ಚು ರನ್ ಗಳಿಕೆ-ರೋಹಿತ್ ಶರ್ಮ(648 ರನ್)
ಒಟ್ಟು ಶತಕ : 31
300 ಪ್ಲಸ್ ರನ್ ಗಳಿಕೆ: 26 ಬಾರಿ
ಅತಿ ಹೆಚ್ಚು ವೈಯಕ್ತಿಕ ರನ್ ಗಳಿಕೆ : 166 ರನ್ (ವಾರ್ನರ್)
ಅತಿ ಹೆಚ್ಚು ತಂಡದ ಮೊತ್ತ: ಇಂಗ್ಲೆಂಡ್ 397/6
ಅತಿ ಹೆಚ್ಚು ಸಿಕ್ಸರ್ : 22 ಇಯಾನ್ ಮಾರ್ಗನ್
ಅತಿ ಹೆಚ್ಚು ಬೌಂಡರಿ : 67 ರೋಹಿತ್ ಹಾಗೂ ಜಾನಿ ಬೈರ್ಸ್ಟೋ
ಉತ್ತಮ ಸರಾಸರಿ : 86.57 ಶಕೀಲ್ ಅಲ್ ಹಸಣ್
ಅತಿ ಹೆಚ್ಚು ಶತಕ : ರೋಹಿತ್ ಶರ್ಮ 5
ಅತಿ ಹೆಚ್ಚು ಸರಣಿ ಅರ್ಧಶತಕ : ವಿರಾಟ್ ಕೊಹ್ಲಿ ಹಾಗೂ ಶಕೀಲ್ ಅಲ್ ಹಸನ್ 5
ಹೆಚ್ಚು ಅರ್ಧ ಶತಕ : 7 ಶಕೀಬ್ ಅಲ್ ಹಸನ್
ಅತಿ ಹೆಚ್ಚು ಚೆಂಡು ಎದುರಿಸಿದ ಆಟಗಾರ: 771 ವಿಲಿಯಮ್ಸನ್

ವಿಶ್ವಕಪ್ ಬೌಲಿಂಗ್ ದಾಖಲೆ

ವಿಶ್ವಕಪ್ ಬೌಲಿಂಗ್ ದಾಖಲೆ

* ಅತಿ ಹೆಚ್ಚು ವಿಕೆಟ್ ಪಡೆದವರು : ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) 27 ವಿಕೆಟ್.
* ಪಂದ್ಯವೊಂದರಲ್ಲಿ ಶ್ರೇಷ್ಠ ಬೌಲಿಂಗ್ : ಶಹೀನ್ ಅಫ್ರಿದಿ -6/39.
* ಉತ್ತಮ ಬೌಲಿಂಗ್ ಸರಾಸರಿ(ಕನಿಷ್ಠ 4 ಪಂದ್ಯಗಳು)
-ಮೊಹಮ್ಮದ್ ಶಮಿ -13.79
* ಅತಿ ಹೆಚ್ಚು ಮೇಡನ್ ಓವರ್ -ಜಸ್ ಪ್ರೀತ್ ಬೂಮ್ರಾ -9

Story first published: Monday, July 15, 2019, 19:51 [IST]
Other articles published on Jul 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X