ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಮಧ್ಯಮ ವೇಗಿ ಅಲ್ಲವಂತೆ!

ICC World Cup 2019: Im not a medium pacer, says Andre Russell

ನಾಟಿಂಗ್‌ಹ್ಯಾಮ್‌, ಜೂನ್‌ 02: ವೆಸ್ಟ್‌ ಇಂಡೀಸ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಆಂಡ್ರೆ ರಸೆಲ್‌, ತಾವು ಮಧ್ಯಮ ವೇಗದ ಬೌಲರ್‌ ಖಂಡಿತಾ ಅಲ್ಲ ಎಂದು ಹೇಳಿಕೊಂಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಕಳೆದ ಶುಕ್ರವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಪರ ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸಿದ ರಸೆಲ್‌, ಮೂರು ಓವರ್‌ ಬೌಲ್‌ ಮಾಡಿ ಕೇವಲ 4 ರನ್‌ಗಳನ್ನು ನೀಡುವ ಮೂಲಕ 2 ವಿಕೆಟ್‌ ಉರುಳಿಸಿದ್ದರು. ಅಲ್ಲದೆ ಒಂದು ಮೇಡಿನ್‌ ಓವರ್‌ ಕೂಡ ಎಸೆದು ತಮ್ಮ ಬೌಲಿಂಗ್‌ ಪರಾಕ್ರಮ ಮೆರೆದಿದ್ದರು. ಆದರೆ, ಪಂದ್ಯದ ವೇಳೆ ಗಾಯದ ಸಮಸ್ಯೆ ಎದುರಿಸಿರುವ ರಸೆಲ್‌, ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಪಂದ್ಯದ ಹೊತ್ತಿಗೆ ಚೇತರಿಸುವ ವಿಶ್ವಾಸದಲ್ಲಿದ್ದಾರೆ.

ವಿಶ್ವಕಪ್‌: ಇಂಡೊ-ಪಾಕ್‌ ಪಂದ್ಯದ ಬಗ್ಗೆ ರೈನಾ ಹೇಳಿದ್ದೇನು ಗೊತ್ತಾ?ವಿಶ್ವಕಪ್‌: ಇಂಡೊ-ಪಾಕ್‌ ಪಂದ್ಯದ ಬಗ್ಗೆ ರೈನಾ ಹೇಳಿದ್ದೇನು ಗೊತ್ತಾ?

"ಕಳೆದ ಎರಡು ತಿಂಗಳಿಂದ ನನಗೆ ಮಂಡಿ ನೋವು ಕಾಡುತ್ತಿದೆ. ಹೀಗಾಗಿ ಬಾಂಗ್ಲಾ ತಂಡದ 9 ವಿಕೆಟ್‌ಗಳು ಉರುಳಿದ ಸಂದರ್ಭದಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಪೆವಿಲಿಯನ್‌ ಸೇರಿದೆ. ಮುಂದಿನ ಪಂದ್ಯದಕ್ಕೆ ಇನ್ನೂ 5 ದಿನಗಳಿದ್ದು, ಫಿಸಿಯೋ ನೆರವಿನಿಂದ ಮುಂದಿನ ಪಂದ್ಯದ ಹೊತ್ತಿಗೆ ಫಿಟ್‌ ಆಗಲಿದ್ದೇನೆ,'' ಎಂದು ರಸೆಲ್‌ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನ ದಾಖಲಿಸಿರುವ ಕಡಿಮೆ ಮೊತ್ತದ ದಾಖಲೆಗಳಿವು!ವಿಶ್ವಕಪ್‌ನಲ್ಲಿ ಪಾಕಿಸ್ತಾನ ದಾಖಲಿಸಿರುವ ಕಡಿಮೆ ಮೊತ್ತದ ದಾಖಲೆಗಳಿವು!

ವಿಂಡೀಸ್‌ನ ದೈತ್ಯ ಪ್ರತಿಭೆ ರಸೆಲ್‌, ಬ್ಯಾಟಿಂಗ್‌ನಲ್ಲಿ ಎಷ್ಟು ಪ್ರಭಾವ ಬೀರಬಲ್ಲರೊ ಬೌಲಿಂಗ್‌ನಲ್ಲೂ ಅಷ್ಟೇ ಭರ್ಜರಿ ಪ್ರದರ್ಶನ ನೀಡಬಲ್ಲರು. ಇದಕ್ಕೆ ಪ್ರಸಕ್ತ ಸಾಲಿನ ಐಪಿಎಲ್‌ ಟೂರ್ನಿಯೇ ಸಾಕ್ಷಿ.

ವಿಶ್ವಕಪ್‌: 'ದಿ ಯೂನಿವರ್ಸ್‌ ಬಾಸ್‌' ಮುಡಿಗೆ ಅಪರೂಪದ ವಿಶ್ವದಾಖಲೆವಿಶ್ವಕಪ್‌: 'ದಿ ಯೂನಿವರ್ಸ್‌ ಬಾಸ್‌' ಮುಡಿಗೆ ಅಪರೂಪದ ವಿಶ್ವದಾಖಲೆ

ಅಂದಹಾಗೆ ರಸೆಲ್‌ ತಾವು ಖಂಡಿತವಾಗಿಯೂ ಮಧ್ಯಮ ವೇಗದ ಬೌಲರ್‌ ಅಲ್ಲ ಎಂದು ಇದೇ ವೇಳೆ ಹೇಳಿಕೊಂಡಿದ್ದಾರೆ. "ಜನ ನನ್ನನ್ನು ಒಬ್ಬ ಮಧ್ಯಮ ವೇಗದ ಬೌಲರ್‌ ಎಂದು ನೋಡುತ್ತಾರೆ.ಆದರೆ ಅವರು ನನ್ನ ಸಾಮರ್ಥ್ಯವನ್ನು ಸರಿಯಾಗಿ ತಿಳಿದಿಲ್ಲ. ನಾನೋಬ್ಬ ಬಲಿಷ್ಠ ಹೊಡೆತಗಾರ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ನಾನೋಬ್ಬ ವೇಗದ ಬೌಲರ್‌ ಕೂಡ,'' ಎಂದು ರಸೆಲ್‌ ಹೇಳಿಕೊಂಡಿದ್ದಾರೆ.

ವಿಶ್ವಕಪ್ 2019: ವಿಂಡೀಸ್ ವಿರುದ್ಧ ಅನಗತ್ಯ ದಾಖಲೆ ಬರೆದ ಪಾಕಿಸ್ತಾನವಿಶ್ವಕಪ್ 2019: ವಿಂಡೀಸ್ ವಿರುದ್ಧ ಅನಗತ್ಯ ದಾಖಲೆ ಬರೆದ ಪಾಕಿಸ್ತಾನ

"ಟೆಲಿವಿಷನ್ನಲ್ಲಿ ನನ್ನ ಹೆಸರು ಬಂದಾಗಲೆಲ್ಲಾ ಮಧ್ಯಮ ವೇಗಿ ಎಂದೇ ತೋರಿಸಲಾಗುತ್ತದೆ. ಆದರೆ, 145 ಕಿ.ಮೀ ಸರಾಸರಿಯಲ್ಲಿ ಬೌಲಿಂಗ್‌ ಮಾಡುವ ಸಾಮರ್ಥ್ಯ ನನ್ನಲ್ಲಿದೆ ಎಂಬುದನ್ನು ನಾನು ಸಾಬೀತು ಪಡಿಸಿದ್ದೇನೆ,'' ಎಂದು ತಮ್ಮನ್ನು ಮಧ್ಯಮ ವೇಗಿ ಎಂದು ಪರಿಗಣಿಸುವುದರ ಕುರಿತಾಗಿ ರಸೆಲ್‌ ಬೇಸರ ವ್ಯಕ್ತ ಪಡಿಸಿದ್ದಾರೆ.

Story first published: Sunday, June 2, 2019, 18:45 [IST]
Other articles published on Jun 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X