ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಆಸೀಸ್ ವಿರುದ್ಧ ಜಿದ್ದಾಜಿದ್ದಿ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ XI

ICC World Cup 2019 : ಆಸ್ಟ್ರೇಲಿಯಾ ವಿರುದ್ಧ ರೋಹಿತ್, ಧವನ್ ಭರ್ಜರಿ ಆಟ..? | Oneindia Kannada
ICC World Cup 2019: India probable XI against Australia at the Oval

ಲಂಡನ್, ಜೂನ್ 9: ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವಿನ ಅನೇಕ ಪಂದ್ಯಗಳು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿವೆ. ಮತ್ತೊಂದು ರೋಚಕ, ಕುತೂಹಲಕಾರಿ ಪಂದ್ಯಕ್ಕೆ ಸಾಕ್ಷಿ ಹೇಳಲು ಬಲಿಷ್ಠ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿವೆ. ಜೂನ್ 9ರ ಭಾನುವಾರ ಈ ಪಂದ್ಯ ಲಂಡನ್‌ನಲ್ಲಿ ನಡೆಯುತ್ತಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಈವರೆಗಿನ ಇತ್ತಂಡಗಳ ವಿಶ್ವಕಪ್ ಮುಖಾಮುಖಿಯನ್ನು ಗಮನಿಸಿದರೆ ಕಾಂಗರೂ ಬಳಗ ಹೆಚ್ಚಿನ ಪಂದ್ಯಗಳಲ್ಲಿ ಮೇಲುಗೈ ಸಾಧಿಸಿವೆ. ಈ ಮೊದಲು ಒಟ್ಟು 11 ಸಾರಿ ಭಾರತ-ಆಸೀಸ್ ತಂಡಗಳು ಕಾದಾಡಿದ್ದವು. ಇದರಲ್ಲಿ ಭಾರತ 3 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಆಸ್ಟ್ರೇಲಿಯಾ 8 ಪಂದ್ಯಗಳನ್ನು ಜಯಿಸಿದೆ.

ಭಾರತ vs ಆಸ್ಟ್ರೇಲಿಯಾ ಪಂದ್ಯ, ಜೂನ್ 9, Live ಸ್ಕೋರ್‌ಕಾರ್ಡ್

1
43657

ಅಂಕಿ ಅಂಶದಲ್ಲಿ ಇಂಡೋ -ಆಸೀಸ್ ಸಮರ, ರನ್ ಗಳಿಕೆಯಲ್ಲಿ ಸಚಿನ್ ಬೆಸ್ಟ್!ಅಂಕಿ ಅಂಶದಲ್ಲಿ ಇಂಡೋ -ಆಸೀಸ್ ಸಮರ, ರನ್ ಗಳಿಕೆಯಲ್ಲಿ ಸಚಿನ್ ಬೆಸ್ಟ್!

ಸಾಕಷ್ಟು ಕುತೂಹಲ ಮೂಡಿಸಿರುವ ಭಾರತ vs ಆಸ್ಟ್ರೇಲಿಯಾ ತಂಡಗಳ ಜಿದ್ದಾಜಿದ್ದಿ ಪಂದ್ಯಕ್ಕಾಗಿ ಭಾರತದ 11 ಜನರ ಆಟಗಾರರ ತಂಡದಲ್ಲಿ ಕಾಣಿಸಿಕೊಳ್ಳಲಿರುವ ಸಂಭಾವ್ಯ ಆಟಗಾರರ ವಿವರ ಇಂತಿದೆ.

1. ರೋಹಿತ್ ಶರ್ಮಾ

1. ರೋಹಿತ್ ಶರ್ಮಾ

ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಆರಂಭಿಕ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಅಮೋಘ ಶತಕ (122 ರನ್) ನೆರವಿನಿಂದ ಭಾರತ 6 ವಿಕೆಟ್‌ಗಳ ಗೆಲುವನ್ನಾಚರಿಸಿತ್ತು. ಆಸೀಸ್ ವಿರುದ್ಧದ ಪಂದ್ಯದಲ್ಲೂ ರೋಹಿತ್ ನಂ.1 ಬ್ಯಾಟಿಂಗ್ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2. ಶಿಖರ್ ಧವನ್

2. ಶಿಖರ್ ಧವನ್

ರೋಹಿತ್ ಶರ್ಮಾಗೆ ಶಿಖರ್ ಧವನ್ ಸಾಥ್ ನೀಡಿದರೆ ಭಾರತ ತಂಡ ಅಂದಿನ ಪಂದ್ಯವನ್ನು ಗೆದ್ದಂತೆಯೇ. ಧವನ್ ಯಾಕೋ ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಕೇವಲ 8 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಧವನ್‌ಗೆ ಉತ್ತಮ ಪ್ರದರ್ಶನ ನೀಡಲು ಅಪೂರ್ವ ಅವಕಾಶ. ಅದನ್ನು ಧವನ್ ಬಳಸಿಕೊಳ್ಳುವ ಸಾಧ್ಯತೆಯೂ ಇದೆ.

3. ವಿರಾಟ್ ಕೊಹ್ಲಿ

3. ವಿರಾಟ್ ಕೊಹ್ಲಿ

3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿನ ಪಂದ್ಯ ಅಂದರೆ ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿಯೂ ಅಂಥ ಪ್ರದರ್ಶನ ನೀಡಿರಲಿಲ್ಲ. ಆದರೆ ಆಸೀಸ್ ವಿರುದ್ಧದ ಈ ಪಂದ್ಯದಲ್ಲಿ ಕೊಹ್ಲಿಗೆ ದಾಖಲೆಗಳಿಗೂ ಅವಕಾಶವಿದೆ. ಸಾಲದ್ದಕ್ಕೆ ಇತ್ತಂಡಗಳ ಕಾದಾಟ ಪ್ರತಿಷ್ಠೆಯದ್ದಾಗಿರುವುದರಿಂದ ಕೊಹ್ಲಿ ಮಿಂಚುವುದನ್ನು ನಿರೀಕ್ಷಿಸಲಾಗಿದೆ.

4. ಕೆಎಲ್ ರಾಹುಲ್

4. ಕೆಎಲ್ ರಾಹುಲ್

ಕನ್ನಡಿಗ ಕೆಎಲ್ ರಾಹುಲ್ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕಕ್ಕೆ ನೆಲೆನಿಂತಾಗಿದೆ. ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ರಾಹುಲ್ ಉತ್ತಮ ಬ್ಯಾಟಿಂಗ್ ತೋರಿಸಿದ್ದರು. ಆದರೆ ವಿಶಕಪ್ ಮೊದಲ ಪಂದ್ಯದಲ್ಲಿ ಕೇವಲ 26 ರನ್ ಕೊಡುಗೆ ಮಾತ್ರ ರಾಹುಲ್ ಅವರಿಂದ ಲಭಿಸಿತ್ತು.

5. ಎಂಎಸ್ ಧೋನಿ

5. ಎಂಎಸ್ ಧೋನಿ

ಗ್ಲೌಸ್ ವಿಚಾರಕ್ಕೆ ಎಂಎಸ್ ಧೋನಿ ಇತ್ತೀಚೆಗೆ ಸಾಕಷ್ಟು ಸುದ್ದಿಯಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಭಾರತೀಯ ಸೇನೆಯ ಮುದ್ರೆಯಿರುವ ಗ್ಲೌಸ್ ಧರಿಸಿದ್ದರು. ಇದಕ್ಕೆ ಐಸಿಸಿ ಕ್ಯಾತೆ ತೆಗೆದಿತ್ತು. ಇಂಥ ಗ್ಲೌಸ್ ಧರಿಸುವಂತಿಲ್ಲ ಎಂದೂ ಹೇಳಿತ್ತು. ಹೀಗಾಗಿ ಆಸೀಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಎಂದಿನ ಗ್ಲೌಸ್ ಧರಿಸಲಿದ್ದಾರೆ.

6. ಕೇದಾರ್ ಜಾಧವ್

6. ಕೇದಾರ್ ಜಾಧವ್

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಲ್ ರೌಂಡರ್ ಕೇದಾರ್ ಜಾಧವ್ ಆಡಿರಲಿಲ್ಲ. ಕಾರಣ ಈ ಪಂದ್ಯಕ್ಕೂ ಮೊದಲು ಜಾಧವ್ ಸಂಪೂರ್ಣ ಚೇತರಿಸಿಕೊಂಡಂತಿರಿಲ್ಲ. ಆಸ್ಟ್ರೇಲಿಯಾ-ಭಾರತ ಪಂದ್ಯ ಹೆಚ್ಚು ಸಾವಲಿನ ಪಂದ್ಯವಾಗಲಿರುವುದಾಗಿ ನಿರೀಕ್ಷಿಸಲಾಗಿರುವುದರಿಂದ ಭಾನುವಾರದ ಪಂದ್ಯದಲ್ಲಿ ಜಾಧವ್ 6 ಕ್ರಮಾಂಕದಲ್ಲಿ ಕಾಣಸಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ.

7. ಹಾರ್ದಿಕ್ ಪಾಂಡ್ಯ

7. ಹಾರ್ದಿಕ್ ಪಾಂಡ್ಯ

ಭಾರತ ಕ್ರಿಕೆಟ್ ತಂಡದಲ್ಲಿ ಸದ್ಯಕ್ಕೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೆಚ್ಚು ವ್ಯಾಲ್ಯುಯೇಬಲ್, ಗೇಮ್ ಚೇಂಜರ್ ಆಟಗಾರನಾಗಿ ಗುರುತಿಸಿಕೊಂದಿಡಿದ್ದಾರೆ. ಪಾಂಡ್ಯ 7ನೇ ಕ್ರಮಾಂಕದಲ್ಲಿ ಬ್ಯಾಟ್ ಎತ್ತಿಕೊಳ್ಳಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಪಾಂಡ್ಯ ಅಜೇಯ 15 ರನ್ ಬಾರಿಸಿದ್ದರು.

8. ಭುವನೇಶ್ವರ್ ಕುಮಾರ್

8. ಭುವನೇಶ್ವರ್ ಕುಮಾರ್

ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ 44 ರನ್‌ಗೆ 2 ವಿಕೆಟ್ ಪಡೆದು ಬೌಲಿಂಗ್ ವಿಭಾಗದ ಬಲವಾಗಿ ಕಾಣಿಸಿಕೊಂಡಿದ್ದ ವೇಗಿ ಭುವನೇಶ್ವರ್ ಕುಮಾರ್ ಆ್ಯರನ್ ಫಿಂಚ್ ಬಳಗದೆದುರಿನ ಪಂದ್ಯದಲ್ಲಿ ಕಾಣಿಸಿಕೊಳಲ್ಳುವುದನ್ನು ನಿರೀಕ್ಷಿಸಲಾಗಿದೆ. ಭುವಿ 8ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

9. ಯುಜುವೇಂದ್ರ ಚಾಹಲ್

9. ಯುಜುವೇಂದ್ರ ಚಾಹಲ್

ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಭಾರತ ಶುಭಾರಂಭ ಕಾಣುವಲ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕೊಡುಗೆ ಮಹತ್ವದ್ದಾಗಿತ್ತು. ಚಾಹಲ್ ಈ ಪಂದ್ಯದಲ್ಲಿ 51 ರನ್‌ಗೆ ಭರ್ಜರಿ 4 ವಿಕೆಟ್‌ಗಳನ್ನು ಉರುಳಿಸಿದ್ದರು. ಆಸೀಸ್ ನಾಯಕ ಫಾ ಡು ಪ್ಲೆಸಿಸ್, ರಾಸ್ಸೀ ವಾನ್ ಡೆರ್ ಡಸೆನ್, ಡೇವಿಡ್ ಮಿಲ್ಲರ್ ಮತ್ತು ಆಂಡಿಲೆ ಫೆಹ್ಲುಕ್ವೇವೊ ವಿಕೆಟ್‌ಗಳು ಚಾಹಲ್‌ಗೆ ಲಭಿಸಿದ್ದವು.

10. ಕುಲದೀಪ್ ಯಾದವ್

10. ಕುಲದೀಪ್ ಯಾದವ್

ಭಾರತ ತಂಡದಲ್ಲಿ ಸ್ಪಿನ್ನರ್‌ಗಳ ಸಾಲಿನಲ್ಲಿ ಚಾಹಲ್ ಮತ್ತು ಕುಲದೀಪ್ ಇತ್ತೀಚೆಗೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕುಲದೀಪ್ ಈ ಪಂದ್ಯದಲ್ಲೂ 10ನೇ ಕ್ರಮಾಂದಲ್ಲಿ ಕಾಣಿಸಕೊಳ್ಳುವುದನ್ನು ನಿರೀಕ್ಷಿಸಲಾಗಿದೆ. ಹಿಂದಿನ ಪಂದ್ಯದಲ್ಲಿ ಯಾದವ್‌ಗೆ ಒಂದು ವಿಕೆಟ್ ಲಭಿಸಿತ್ತು.

11. ಜಸ್‌ಪ್ರೀತ್‌ ಬೂಮ್ರಾ

11. ಜಸ್‌ಪ್ರೀತ್‌ ಬೂಮ್ರಾ

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹೆಚ್ಚು ಬೌಲಿಂಗ್ ವಿಭಾಗದಲ್ಲಿ ಗಮನ ಸೆಳೆದಿದ್ದರು ಯುಜುವೇಂದ್ರ ಚಾಹಲ್ ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ ಹೆಚ್ಚು. 35 ರನ್ನಿಗೆ ಭುಮ್ರಾ 2 ವಿಕೆಟ್ ಉರುಳಿಸಿ ತಂಡಕ್ಕೆ ನೆರವಾಗಿದ್ದರು. ಈ ಬಾರಿ ವಿಜಯ್ ಶಂಕರ್ ಅಥವಾ ರವೀಂದ್ರ ಜಡೇಜಾ ಅವರನ್ನು 11 ಜನರ ತಂಡದಲ್ಲಿ ಪರಿಗಣಿಸುವ ಸಾಧ್ಯತೆ ಕಡಿಮೆಯಿದೆ.

Story first published: Sunday, June 9, 2019, 15:14 [IST]
Other articles published on Jun 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X