ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ ವಿಶ್ವಕಪ್‌: ವಿರಾಟ್‌ ಕೊಹ್ಲಿ-ಕೇನ್‌ ವಿಲಿಯಮ್ಸನ್‌ ಯಶಸ್ಸಿನ ಹಾದಿ

By ಆರ್‌. ಕೌಶಿಕ್‌, ಲಂಡನ್‌
ICC World Cup 2019: Kohli and Kanes World Cup reunion

ಮ್ಯಾಂಚೆಸ್ಟರ್‌, ಜುಲೈ 08: ಇಬ್ಬರು ಯುವ ಆಟಗಾರು 19 ವರ್ಷದೊಳಿನ ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ತಂಡಗಳನ್ನು ಸೆಮಿಫೈನಲ್ಸ್‌ಗೆ ಮುನ್ನಡೆಸಿದ ಸಾಧನೆ ಮಾಡಿದ್ದರು. ಈ ಇಬ್ಬರು ಯುವಕರು ಹಿರಿಯರ ತಂಡಕ್ಕೆ ಏನು ಮಾಡಬಲ್ಲರು? ಈ ಪ್ರಶ್ನೆಗೆ ಸರಿಯಾಗಿ ಹನ್ನೊಂದುವರೆ ವರ್ಷಗಳ ನಂತರ ಅದೇ ಆಟಗಾರರು ಉತ್ತರ ನೀಡಿದ್ದಾರೆ. ಇದಕ್ಕೆ ಸಾಕ್ಷಿ ನಮ್ಮ ಕಣ್ಣೆದುರಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ವಿರಾಟ್‌ ಕೊಹ್ಲಿ ಮತ್ತು ಕೇನ್‌ ವಿಲಿಯಮ್ಸನ್‌ ತಮ್ಮ ವೃತ್ತಿ ಬದುಕಿನಲ್ಲಿ ಬಹುದೂರ ಸಾಗಿಬಂದಿದ್ದಾರೆ. ಈ ಇಬ್ಬರೂ ಆಟಗಾರರು ಮೊದಲ ಬಾರಿ 2007ರಲ್ಲಿ ಹೋರಾಟ ನಡೆಸಿದ್ದರು. ಇದಾದ ಒಂದು ವರ್ಷದ ನಂತರ ಕೌಲಾಲಂಪುರದಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಮರಳಿ ಪೈಪೋಟಿ ನಡೆಸಿದರು. ಇದಾದ ಬಳಿಕ ಈ ಇಬ್ಬರೂ ಆಟಗಾರರ ವೃತ್ತಿಬದುಕು ರೈಲ್ವೇ ಹಳಿಯಂತೆ ಅಕ್ಕ ಪಕ್ಕದಲ್ಲೇ ಸಾಗಿಬಂದಿದೆ ಎನ್ನಬಹುದು. ಕೇನ್‌ ವಿಲಿಯಮ್ಸನ್‌ ಅವರನ್ನು ಅತ್ಯಂತ ಚಿಕ್ಕ ವಯಸ್ಸಿನಿಂದಲೇ ಮುಂದೊಂದು ದಿನ ಈತ ನ್ಯೂಜಿಲೆಂಡ್‌ ತಂಡದ ನಾಯಕನಾಗುತ್ತಾನೆ ಎಂದೇ ನೋಡಲಾಗುತ್ತಿತ್ತು. ಅಂತೆಯೇ ಅವರು ನಡೆದು ಬಂದರು ಕೂಡ. ಆದರೆ, ಕೊಹ್ಲಿ ಅವರ ಹಾದಿ ವಿಭಿನ್ನವಾಗಿತ್ತು. ಅವರೊಬ್ಬ ಯುವ ಆಟಗಾರ ಹಾಗೂ ಸ್ವಲ್ಪ ಒರಟು ವ್ಯಕ್ತಿತ್ವದವರಾಗಿದ್ದರು. ಹೀಗಾಗಿ ಆರಂಭಿಕ ದಿನಗಳಲ್ಲಿ ಅವರನ್ನು ನಾಯಕನನ್ನಾಗಿ ಯಾರೂ ನೋಡಿರಲಿಲ್ಲ.

ಕಿವೀಸ್‌ ವಿರುದ್ಧದ ಸೆಮಿಫೈನಲ್‌ಗೂ ಮುನ್ನ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದಿದುಕಿವೀಸ್‌ ವಿರುದ್ಧದ ಸೆಮಿಫೈನಲ್‌ಗೂ ಮುನ್ನ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದಿದು

ಆದರೆ ಕಾಲಚಕ್ರ ಮೃದು ಸ್ವಭಾವದ ಕೇನ್‌ ಮತ್ತು ಒರಟು ತನದ ಕೊಹ್ಲಿ ಇಬ್ಬರಿಗೂ ಒಳ್ಳೆಯ ದಿನಗಳನ್ನು ತಂದಿದೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅವರ ತಲೆಮಾರಿನ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಅದರಲ್ಲೂ ಕೊಹ್ಲಿಯಂತು ನಿಸ್ಸಂದೇಹವಾಗಿ ಕ್ರಿಕೆಟ್‌ನಮೂರೂ ಮಾದರಿಗಳಲ್ಲಿ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿದ್ದಾರೆ. ವಿಲಿಯಮ್ಸನ್‌, ಜೋ ರೂಟ್‌ ಮತ್ತು ಸ್ಟೀವ್‌ ಸ್ಮಿತ್‌ಗಿಂತಲೂ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ ಎಂದೇ ಹೇಳಬಹುದು. ಇನ್ನು ನಾಯಕತ್ವದ ವಿಚಾರದಲ್ಲಿ ಕೊಹ್ಲಿ ಮತ್ತು ಕೇನ್‌ ಇಬ್ಬರೂ ಮುಂದಾಳಾಗಿ ನಿಂತು ತಮ್ಮ ತಂಡಗಳನ್ನು ಮುನ್ನಡೆಸುತ್ತಿದ್ದಾರೆ. ಈ ಮೂಲಕ ತಮ್ಮಂತೇ ನಡೆಯುವಂತೆ ತಂಡದ ಸಹ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ.

ಸೆಮಿಫೈನಲ್ಸ್‌ನಲ್ಲಿ ಭಾರತ ವಿರುದ್ಧ ಕಿವೀಸ್‌ ತನ್ನ ಪ್ರಮುಖ ಅಸ್ತ್ರದ ಬಳಕೆ!ಸೆಮಿಫೈನಲ್ಸ್‌ನಲ್ಲಿ ಭಾರತ ವಿರುದ್ಧ ಕಿವೀಸ್‌ ತನ್ನ ಪ್ರಮುಖ ಅಸ್ತ್ರದ ಬಳಕೆ!

2008ರ ಕಿರಿಯರ ವಿಶ್ವಕಪ್‌ ಕಡೆಗೆ ಕೊಂಚ ತಿರುಗಿ ನೋಡಿದರೆ, ಆ ಸೆಮಿಫೈನಲ್‌ ಪಂದ್ಯದಲ್ಲಿ ವಿಲಿಯಮ್ಸನ್‌ ನಾಯಕತ್ವದ ನ್ಯೂಜಿಲೆಂಡ್‌ ತಂಡ ಮೊದಲು ಬ್ಯಾಟ್‌ ಮಾಡಿತ್ತು. ಕೇನ್‌ ಅತ್ಯಂತ ತಾಳ್ಮೆಯ ಇನಿಂಗ್ಸ್‌ ಆಡಿದರ ಪರಿಣಾಮ ಕಿವೀಸ್‌ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 208 ರನ್‌ಗಳನ್ನು ದಾಖಲಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಭಾರತ ಆರಂಭದಿಂದಲೂ ನಿಯಂತ್ರಣದಲ್ಲಿತ್ತು. ಆದರೆ, ಕೊನೆಯ ಓವರ್‌ಗಳಲ್ಲಿ 15 ರನ್‌ಗಳ ಅಂತರದಲ್ಲಿ 3 ವಿಕೆಟ್‌ಗಳನ್ನು ಕೈಚೆಲ್ಲಿದ ಪರಿಣಾಮ 3 ವಿಕೆಟ್‌ಗಳ ಜಯ ಪ್ರಾಪ್ತಿಯಾಯಿತು. ಮಳೆ ಅಡಚಣೆಯಿಂದಾಗಿ ಭಾರತಕ್ಕೆ 191 ರನ್‌ಗಳ ಗುರಿ ನೀಡಲಾಗಿತ್ತು. ಕೊಹ್ಲಿ 43 ರನ್‌ಗಳ ಕೊಡುಗೆ ನೀಡಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಜೊತೆಗೆ ಅದ್ಭುತ ನಾಯಕತ್ವದ ಮೂಲಕ ಪಂದ್ಯ ಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದರು.

ವಿಶ್ವಕಪ್‌ನಲ್ಲಿ ರೋಹಿತ್‌ ಉದ್ದೇಶವೇನೆಂಬುದನ್ನು ಬಿಚ್ಚಿಟ್ಟ ಕೋಚ್‌!ವಿಶ್ವಕಪ್‌ನಲ್ಲಿ ರೋಹಿತ್‌ ಉದ್ದೇಶವೇನೆಂಬುದನ್ನು ಬಿಚ್ಚಿಟ್ಟ ಕೋಚ್‌!

ಆ ಕಾಲದಲ್ಲಿ ಮಧ್ಯಮ ವೇಗದ ಬೌಲಿಂಗ್‌ ಕೂಡ ಮಾಡುತ್ತಿದ್ದ ವಿರಾಟ್‌, ತಮ್ಮ 7 ಓವರ್‌ಗಳ ಸ್ಪೆಲ್‌ನಲ್ಲಿ 1 ಮೇಡಿನ್‌ ಒಳಗೊಂಡಂತೆ 27 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಕಬಳಿಸಿದ್ದರು. ತಮ್ಮ ಬೌಲಿಂಗ್‌ನಲ್ಲಿ ಕಿವೀಸ್‌ ನಾಯಕ ವಿಲಿಯಮ್ಸನ್‌ ಅವರ ವಿಕೆಟ್ ಕೂಡ ಕೊಹ್ಲಿ ಪಡೆದಿದ್ದರು. ಇದೀಗ ಓಲ್ಡ್‌ಟ್ರಾಫರ್ಡ್‌ ಅಂಗಣದಲ್ಲಿ ಮಂಗಳವಾರ ನಡೆಯಲಿರುವ ಇಂಡೊ-ಕಿವೀಸ್‌ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ಟೀಮ್‌ ಇಂಡಿಯಾದ ನಾಯಕನ ಮುಂದಿಟ್ಟಾಗ ಅವರೇ ಅಚ್ಚರಿಗೆ ಒಳಗಾದರು.

ಇಂಡೊ-ಕಿವೀಸ್‌ ಸೆಮಿಫೈನಲ್‌ಗೆ ಮಳೆ ಅಡ್ಡಿ ಪಡಿಸಿದರೆ ಏನಾಗುತ್ತದೆ?ಇಂಡೊ-ಕಿವೀಸ್‌ ಸೆಮಿಫೈನಲ್‌ಗೆ ಮಳೆ ಅಡ್ಡಿ ಪಡಿಸಿದರೆ ಏನಾಗುತ್ತದೆ?

"ಕೇನ್‌ ವಿಲಿಯಮ್ಸನ್‌ ಅವರನ್ನು ಔಟ್‌ ಮಾಡಿದ್ನಾ? ನಿಜವಾಗಲೂ? ಎಂದು ನಗುತ್ತಲೇ ಮಾತನಾಡಲು ಆರಂಭಿಸಿದ ಕೊಹ್ಲಿ, "ಆ ರೀತಿ ಮತ್ತೊಮ್ಮೆಯಾಗುತ್ತದೆ ಎಂಬುದು ಸಾಧ್ಯವಿಲ್ಲ ಎಂದು ನನಗನಿಸುತ್ತದೆ,'' ಎಂದರು. ಇದೇ ವೇಳೆ ಟೀಮ್‌ ಇಂಡಿಯಾದ ಬೌಲಿಂಗ್‌ ಕುರಿತಾಗಿ ಚರ್ಚೆ ಆರಂಭವಾಗಿ ಭಾರತ ತಂಡದಲ್ಲಿ ಕೇವಲ 5 ಬೌಲರ್‌ಗಳನ್ನು ಮಾತ್ರವೇ ಆಡಿಸುವ ಸಂಕಷ್ಟ ತೆಗೆದುಕೊಂಡಿರುವುದೇಕೆ? ಎಂದು ಕೊಹ್ಲಿ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಕೊಹ್ಲಿ ಅವರ ಹಾಸ್ಯಪ್ರಜ್ಞೆಯೇ ಉತ್ತರವಾಯಿತು. "ಈಗಷ್ಟೇ ಕೇನ್‌ ವಿಕೆಟ್‌ ಪಡೆದೆ ಎಂದು ನನಗೆ ಹೇಳಿದ್ದರಲ್ಲ. ಆರನೇ ಬೌಲರ್‌ ಆಗಿ ನಾನೇ ಬೌಲಿಂಗ್‌ ಮಾಡಬಲ್ಲೆ. ನಾನು ಬಹಳ ಪರಿಣಾಮಕಾರಿ! ಪಿಚ್‌ ಮೇಲೆ ಜಾರಿ ಬೀಳದೇ ಇದ್ದರಷ್ಟೇ ಸಾಕು," ಎಂದು ನಕ್ಕರು.

ODI rankings: ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನಂ.1 ಸ್ಥಾನಕ್ಕೆ ಕುತ್ತು!ODI rankings: ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನಂ.1 ಸ್ಥಾನಕ್ಕೆ ಕುತ್ತು!

ಸ್ಟೀವ್ ಸ್ಮಿತ್‌ ರನ್‌ಗಳಿಕೆಯಲ್ಲಿ ವಿರಾಟ್‌ ಕೊಹ್ಲಿಗೆ ಪೈಪೋಟಿ ನೀಡುತ್ತಿರುವ ಆಟಗಾರ. ಹೀಗಿದ್ದರೂ ಕಳೆದ ತಿಂಗಳೂ ಓವಲ್‌ನಲ್ಲಿ ನಡೆದ ಪಂದ್ಯದ ವೇಳೆ ಭಾರತೀಯ ಅಭಿಮಾನಿಗಳು ಸ್ಮಿತ್‌ಗೆ ಬೂ.. ಗುಟ್ಟಿದ ಸಲುವಾಗಿ ಕೊಹ್ಲಿ ಅವರೇ ಸ್ಮಿತ್‌ ಬಳಿ ಕ್ಷಮೆ ಕೋರಿದ್ದರು. ಕೊಹ್ಲಿ, ವಿಲಿಯಮ್ಸನ್‌ ಜೊತೆಗೂ ಗೌರವಯುತ ಬಾಂಧವ್ಯ ಹೊಂದಿದ್ದಾರೆ. "ಇದೊಂದು ನಿಜಕ್ಕೂ ಅದ್ಭುತ ನೆನಪು. ಇಬ್ಬರಿಗೂ ಈ ರೀತಿ ಮತ್ತೊಮ್ಮೆಯಾಗುತ್ತದೆ ಎಂಬುದನ್ನು ತಿಳಿದು ಒಳ್ಳೆಯ ಅನುಭವ ಸಿಗಲಿದೆ,'' ಎಂದು ಇತಿಹಾಸ ಮರುಕಳಿಸುತ್ತದೆ ಎಂಬುದರ ಕುರಿತಾಗಿ ಕೊಹ್ಲಿ ಮಾತನಾಡಿದರು. "ನಾನಾಗಲೀ ಅಥವಾ ಅವರಾಗಲೀ ಇಂಥದ್ದೊಂದು ಸನ್ನಿವೇಶ ಮರಳಿ ಬರುತ್ತದೆ ಎಂದು ಕನಸು ಮನಸಿನಲ್ಲೂ ಆಲೋಚಿಸರಲಿಕ್ಕಿಲ್ಲ,'' ಎಂದು ಹೇಳಿದರು.

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಸೆಮಿಫೈನಲ್ಸ್‌ ಪಂದ್ಯ ಎಲ್ಲಿ? ಯಾವಾಗ?ಏಕದಿನ ಕ್ರಿಕೆಟ್‌ ವಿಶ್ವಕಪ್‌ ಸೆಮಿಫೈನಲ್ಸ್‌ ಪಂದ್ಯ ಎಲ್ಲಿ? ಯಾವಾಗ?

ಇದೇ ವೇಳೆ ಕೊಹ್ಲಿ ತಾವು ವಿಲಿಯಮ್ಸನ್‌ ಅವರನ್ನು ಮೊದಲ ಬಾರಿ ಎದುರಾದ ಕ್ಷಣವನ್ನು ನೆನೆದರು, "2007ರಲ್ಲಿ ಅನಿಸುತ್ತದೆ ನಾವು ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಿದ್ದವು. ನಮ್ಮ 19 ವರ್ಷದೊಳಗಿನ ಟೆಸ್ಟ್‌ ಪಂದ್ಯವನ್ನಾಡುತ್ತಿತ್ತು. ನಮ್ಮ ತಂಡದ ಅತ್ಯುತ್ತಮ ವೇಗದ ಬೌಲರ್‌ ಎದುರು ವಿಲಿಯಮ್ಸನ್‌ ಒಂದು ಶಾಟ್‌ ಹೊಡೆದಿದ್ದರು. ಬ್ಯಾಕ್‌ ಫುಟ್‌ನಲ್ಲಿ ಅವರು ಹೊಡೆದ ಹೊಡೆತವನ್ನು ಸ್ಲಿಪ್‌ನಲ್ಲಿದ್ದ ನಾನು ಗಮನಿಸಿದ್ದೆ. ಅಂಥದ್ದೊಂದು ಹೊಡೆತವನ್ನು ಹಿಂದೆಂದೂ ನಾನು ಕಂಡಿರಲಿಲ್ಲ. ಅವರು ವಿಶೇಷ ಆಟಗಾರ. ಅಂದು 19 ವರ್ಷದೊಳಗಿನ ಟೆಸ್ಟ್‌ ಪಂದ್ಯವಾಗಲಿ ಇಂದು ವಿಶ್ವಕಪ್‌ ಪಂದ್ಯವಾಗಿ ವಿಲಿಯಮ್ಸನ್‌ ನ್ಯೂಜಿಲೆಂಡ್‌ ತಂಡದ ಅತ್ಯಂತ ಮೌಲ್ಯಯುತ ಆಟಗಾರ,'' ಎಂದು ಕಿವೀಸ್‌ ನಾಯಕನ ಕುರಿತಾಗಿ ಕೊಹ್ಲಿ ಮೆಚ್ಚುಗೆಯ ಮಾತುಗಳನ್ನಾಡಿದರು.

ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್ಸ್‌ಗೆ ಬ್ಯಾಟಿಂಗ್‌ ಬಲ ಹೆಚ್ಚಿಸಿದ ಆಸೀಸ್‌!ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್ಸ್‌ಗೆ ಬ್ಯಾಟಿಂಗ್‌ ಬಲ ಹೆಚ್ಚಿಸಿದ ಆಸೀಸ್‌!

"ಅವರು ದೀರ್ಘ ಕಾಲದವರೆಗೆ ಮುನ್ನುಗ್ಗಿ ಆಡಬಲ್ಲ ಆಟಗಾರ ಎಂಬುದನ್ನು ತಿಳಿದಿದ್ದೆ. ಇದೀಗ ಅವರು ಪ್ರಬುದ್ಧ ಆಟಗಾರ, ನ್ಯೂಜಿಲೆಂಡ್‌ ಪರ ಆಡಿದ ಪ್ರತಿಯೊಂದು ಪಂದ್ಯದಲ್ಲೂ ಅವರು ಪಂದ್ಯದ ನಿಯಂತ್ರಣವನ್ನು ತಮ್ಮೊಟ್ಟಿಗೆ ಇಟ್ಟುಕೊಂಡಿರುತ್ತಾರೆ. ಜೊತೆಗೆ ಆತ ಅತ್ಯುತ್ತಮ ವ್ಯಕ್ತಿ ಕೂಡ. ನಮ್ಮಿಬ್ಬರ ನಡುವೆ ಉತ್ತಮ ಗೆಳೆತನವಿದೆ,'' ಎಂದರು.

ಇವೆಲ್ಲದರ ಅರ್ಥ ಕೊಹ್ಲಿ ಸುಮ್ಮನೆ ಕುಳಿತು ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳು ತಮ್ಮ ತಂಡದ ಬೌಲರ್‌ಗಳನ್ನು ಬೆಂಡೆತ್ತುವುದನ್ನು ನೋಡಿ ಕುಳಿತಿರುತ್ತಾರೆ ಎಂದರ್ಥವಲ್ಲ. ಏಕೆಂದರೆ ಇವೆಲ್ಲದರ ಹೊರತಾಗಿಗೂ ಪಂದ್ಯ ಗೆದ್ದು ಫೈನಲ್‌ಗೆ ಮುನ್ನಡೆಯಬೇಕೆಂಬ ಪ್ರಜ್ಞೆ ಅವರಲ್ಲಿದೆ.

(ಕಳೆದ ಮೂರು ದಶಕಗಳಿಂದ ಕ್ರಿಕೆಟ್‌ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಆರ್‌. ಕೌಶಿಕ್‌ ಅವರು ಈವರೆಗೆ 7 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳನ್ನು ವರದಿ ಮಾಡಿದ್ದಾರೆ. ಕ್ರಿಕಟ್‌ ಆಟವನ್ನು ಅತ್ಯಂತ ಹತ್ತಿರದಿಂದ ಬಲ್ಲವರಾಗಿದ್ದಾರೆ)

1
43689

Story first published: Monday, July 8, 2019, 23:52 [IST]
Other articles published on Jul 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X