ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಮಿ ಹ್ಯಾಟ್ರಿಕ್ ಬಗ್ಗೆ ಅವರ ಮಾಜಿ ಪತ್ನಿ ಹಸೀನ್ ಜಹಾನ್ ಹೇಳಿದ್ದೇನು?

By ಅವಿನಾಶ್ ಶರ್ಮಾ
ICC World Cup 2019 : ಶಮಿ ಬಗ್ಗೆ ಶಮಿ ಪತ್ನಿ ಹೇಳಿದ್ದಿಷ್ಟು..? | Oneindia Kannada

ನವದೆಹಲಿ, ಜೂನ್ 25: ಭಾರತದ ವೇಗಿ ಮೊಹಮ್ಮದ್ ಶಮಿ 2019 ವಿಶ್ವಕಪ್‌ನಲ್ಲಿ ಚೊಚ್ಚಲ ಹಾಗೂ ಭಾರತದ ಪರ ವಿಶ್ವಕಪ್‌ನಲ್ಲಿ ಎರಡನೆಯ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶನಿವಾರ ಕೊನೆಯ ಮೂರು ವಿಕೆಟ್‌ಗಳನ್ನು ಕೀಳುವ ಮೂಲಕ ಹ್ಯಾಟ್ರಿಕ್ ಸಾಧಕರ ಪಟ್ಟಿಗೆ ಸೇರಿದ್ದಾರೆ.

ಏಕದಿನದ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ನಾಲ್ಕನೆಯ ಬೌಲರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಚೇತನ್ ಶರ್ಮಾ, ಕಪಿಲ್ ದೇವ್ ಮತ್ತು ಕುಲದೀಪ್ ಯಾದವ್ ಏಕದಿನದಲ್ಲಿ ಹ್ಯಾಟ್ರಿಕ್ ಗಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಜನಿಸಿದ ಮೊಹಮ್ಮದ್ ಶಮಿ, ದೇಶಿ ಕ್ರಿಕೆಟ್‌ನಲ್ಲಿ ಬಂಗಾಳವನ್ನು ಪ್ರತಿನಿಧಿಸುತ್ತಿದ್ದಾರೆ. ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಹತ್ತನೇ ಬೌಲರ್ ಎಂಬ ಕೀರ್ತಿ ಅವರದು.

ಶಮಿ ಮೂಲಕ ಜನರಿಗೆ ನಾನು ಯಾರೆಂದು ಗೊತ್ತಾಗ್ತಿದೆ: ಚೇತನ್ ಶರ್ಮಾಶಮಿ ಮೂಲಕ ಜನರಿಗೆ ನಾನು ಯಾರೆಂದು ಗೊತ್ತಾಗ್ತಿದೆ: ಚೇತನ್ ಶರ್ಮಾ

ಶಮಿ ಅವರಿಗೆ ಬೌಲಿಂಗ್ ಪಡೆಯಲ್ಲಿ ಸಿಗುತ್ತಿರುವುದು ಸೀಮಿತ ಅವಕಾಶವಾದರೂ ಅದರಲ್ಲಿ ಅವರು ಮಿಂಚು ಹರಿಸುತ್ತಿದ್ದಾರೆ. ಪತ್ನಿ ಹಸೀನ್ ಜಹಾನ್ ಜತೆಗಿನ ವಿರಸ, ಕಾದಾಟ, ಜಗಳಗಳ ನಡುವೆಯೂ ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಪ್ರಸ್ತುತ ಶಮಿ ಮತ್ತು ಅವರ ಪತ್ನಿ ಬೇರ್ಪಟ್ಟಿದ್ದಾರೆ. ಶಮಿ ವಿರುದ್ಧ ನಿರಂತರ ಹೇಳಿಕೆಗಳನ್ನು ನೀಡುತ್ತಿದ್ದ ಜಹಾನ್, ಇದೇ ಮೊದಲ ಬಾರಿಗೆ ಅವರನ್ನು ಹೊಗಳಿದ್ದಾರೆ.

ಭಾರತ ಟ್ರೋಫಿ ಗೆಲ್ಲಲಿದೆ

ಭಾರತ ಟ್ರೋಫಿ ಗೆಲ್ಲಲಿದೆ

ಹಿಂದಿ ದಿನಪತ್ರಿಕೆ 'ಅಮರ್ ಉಜಾಲಾ'ದೊಂದಿಗೆ ಮಾತನಾಡಿದ ಶಮಿ ಪತ್ನಿ ಹಸೀನ್ ಜಹಾನ್, ದೇಶಕ್ಕಾಗಿ ಆಡುವುದು ಪ್ರತಿ ಆಟಗಾರನಿಗೂ ಹೆಮ್ಮೆಯ ಸಂಗತಿ. ಪಂದ್ಯದಲ್ಲಿ ಇನ್ನೂ ಚೆನ್ನಾಗಿ ಆಡಿದರೆ ನಿಜಕ್ಕೂ ಅದ್ಭುತವೆನಿಸುತ್ತದೆ ಎಂದಿದ್ದಾರೆ.

ಆದರೆ, ಅವರು ಶಮಿ ಹೆಸರನ್ನು ನೇರವಾಗಿ ಎಲ್ಲಿಯೂ ಉಲ್ಲೇಖಿಸಲಿಲ್ಲ. ಅತ್ಯುತ್ತಮ ಮಟ್ಟದಲ್ಲಿ ಪ್ರದರ್ಶನ ನೀಡುವುದು ಆಟಗಾರರಿಗೆ ಅತ್ಯಂತ ಹೆಮ್ಮೆಯ ಸಂಗತಿ. ವಿಶ್ವಕಪ್‌ ಗೆಲ್ಲಲು ಭಾರತ ಇದೇ ರೀತಿಯ ಉತ್ತಮವಾದ ಫಾರ್ಮ್‌ಅನ್ನು ಉಳಿಸಿಕೊಳ್ಳಬೇಕು. ಭಾರತ ತಂಡ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ನಕಲ್ ಬಾಲ್ ಎಂದರೇನು? ಇದನ್ನು ಆವಿಷ್ಕರಿಸಿದ್ದು ಭಾರತೀಯ ಬೌಲರ್ ಗೊತ್ತೇ?

ಶಮಿ ಪೂರ್ವಜರ ಮನೆಯಲ್ಲಿ ಸಂಭ್ರಮ

ಶಮಿ ಪೂರ್ವಜರ ಮನೆಯಲ್ಲಿ ಸಂಭ್ರಮ

ಶಮಿ ಅವರ ಅಮೋಘ ಸಾಧನೆಯಿಂದ ಅವರ ಪೂರ್ವಿಕರ ಮನೆಯಲ್ಲಿ ಸಂಭ್ರಮ ತುಂಬಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನ ಅಮ್ರೋಹಾದಲ್ಲಿ ಇರುವ ಅವರ ಪೂರ್ವಜರ ಮನೆಯಲ್ಲಿ ಅವರ ಹಿರಿಯಣ್ಣ ಮತ್ತು ಅವರ ಸಂಬಂಧಿಕರು ಅಫ್ಘಾನಿಸ್ತಾನ ವಿರುದ್ಧದ ಭಾರತದ ಗೆಲುವನ್ನು ಸಂಭ್ರಮಿಸಿದ್ದಾರೆ. ಈ ಗೆಲುವಿನಲ್ಲಿ ತಮ್ಮ ಹುಡುಗ ನಿರ್ಣಾಯಕ ಪಾತ್ರ ವಹಿಸಿದ್ದಕ್ಕೆ ಅವರ ಸಂಭ್ರಮ ದುಪ್ಪಟ್ಟಾಗಿದೆ.

ಪಂದ್ಯದ ಕೊನೆಯಲ್ಲಿ ಮೊದಲು ಉದ್ವಿಗ್ನತೆ ಉಂಟಾಗಿತ್ತು. ಆದರೆ, ಶಮಿ ಗೇಮ್ ಚೇಂಜರ್ ಆಗಿ ಅದನ್ನು ಸಲೀಸಾಗಿ ಬದಲಿಸಿದರು. ಆರಂಭದ ಕೆಲವು ಪಂದ್ಯಗಳಲ್ಲಿ ಶಮಿಗೆ ಅವಕಾಶ ಸಿಗದಿದ್ದಾಗ ಬೇಸರವಾಗಿತ್ತು. ಆದರೆ, ಮೈದಾನಕ್ಕೆ ಬಂದಿದ್ದನ್ನು ತಮ್ಮ ಶೈಲಿಯಲ್ಲಿ ಘೋಷಿಸಿರುವ ರೀತಿ ಅತೀಮ ಹೆಮ್ಮೆ ತಂದಿದೆ ಎಂದು ಶಮಿ ಅವರ ಸಹೋದರ ಹೇಳಿದ್ದಾರೆ.

ಕೌಟುಂಬಿಕ ದೌರ್ಜನ್ಯ ಆರೋಪ

ಕೌಟುಂಬಿಕ ದೌರ್ಜನ್ಯ ಆರೋಪ

ಈ ವರ್ಷದ ಆರಂಭದಲ್ಲಿ ಶಮಿ ಅವರ ಪತ್ನಿ ಹಸೀನ್ ಜಹಾನ್ ಅವರು ವಿವಾಹೇತರ ಅನೈತಿಕ ಸಂಬಂಧಗಳನ್ನು ಹೊಂದಿದ್ದಾರೆ ಎಂದು ಶಮಿ ವಿರುದ್ಧ ಆರೋಪಿಸಿದ್ದರು. ಬಳಿಕ ಶಮಿ ಅವರ ಕುಟುಂಬದವರು ತಮಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದೂ ಆರೋಪಿಸಿದ್ದರು.

ಅಷ್ಟಕ್ಕೆ ಸುಮ್ಮನಾಗದ ಅವರು, ಶಮಿ ಹಾಗೂ ಅವರ ಕುಟುಂಬವನ್ನು ನ್ಯಾಯಾಲಯಕ್ಕೆ ಎಳೆದಿದ್ದರು. ಅವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಜೋಸ್ ಬಟ್ಲರ್, ಕ್ರಿಕೆಟ್ ಜಗತ್ತಿನ ಹೊಸ ಧೋನಿ ಎಂದ ಆಸ್ಟ್ರೇಲಿಯಾ ಕೋಚ್

ಮ್ಯಾಚ್ ಫಿಕ್ಸಿಂಗ್ ಆರೋಪ

ಮ್ಯಾಚ್ ಫಿಕ್ಸಿಂಗ್ ಆರೋಪ

ಶಮಿ ವಿರುದ್ಧ ಕಿರುಕುಳ, ದೌರ್ಜನ್ಯ ಆರೋಪ ಮಾಡಿದ್ದ ಹಸೀನ್ ಜಹಾನ್, ಶಮಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಲಂಡನ್ ಮತ್ತು ಯುಎಇಯ ಬುಕಿಗಳೊಂದಿಗೆ ಶಮಿ ಸಂಪರ್ಕ ಹೊಂದಿದ್ದಾರೆ ಎಂದೂ ಆರೋಪಿಸಿದ್ದರು. ಈ ಬಗ್ಗೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ ತನಿಖೆ ನಡೆಸಿತ್ತು. ಶಮಿ ವಿರುದ್ಧದ ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿ ಅವರು ಭಾರತವನ್ನು ಪ್ರತಿನಿಧಿಸಲು ಮತ್ತೆ ಅವಕಾಶ ನೀಡಿತ್ತು.

Story first published: Tuesday, June 25, 2019, 13:47 [IST]
Other articles published on Jun 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X