ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹ್ಯಾಟ್ರಿಕ್ ಪಡೆಯಲು ಧೋನಿ ಕೊಟ್ಟ ಸಲಹೆ ಕಾರಣವಾಯ್ತು : ಶಮಿ

ICC World Cup 2019 : ಹ್ಯಾಟ್ರಿಕ್ ಸಾಧನೆ ಮಾಡಿದ ಶಮಿ ಹೇಳಿದ್ದು ಹೀಗೆ..! | Oneindia Kannada
ICC World Cup 2019: Mohammed Shami reveals MS Dhonis role behind his hat-trick against Afghanistan

ಸೌತಾಂಪ್ಟನ್, ಜೂನ್ 23: ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ಶನಿವಾರ (ಜೂನ್ 22) ನಡೆದ ಪಂದ್ಯದಲ್ಲಿ ಭಾರತ ರೋಚಕ ಗೆಲುವಿನ ಜೊತೆಗೆ ಅಪರೂಪದ ದಾಖಲೆಗಳನ್ನು ನಿರ್ಮಿಸಿತು. ವೇಗಿ ಮೊಹಮ್ಮದ್ ಶಮಿ ಅವರು 2019ರ ವಿಶ್ವಕಪ್ ನ ಮೊದಲ ಹ್ಯಾಟ್ರಿಕ್ ಪಡೆದರು.

ಭಾರತ ನೀಡಿದ್ದ 225 ರನ್ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ತಂಡವು ಗೆಲುವು ಹೊಸ್ತಿಲಲ್ಲಿ ಎಡವಿತು. ಮೊಹಮ್ಮದ್ ಶಮಿ ಅವರು ಸತತವಾಗಿ ಮೂರು ವಿಕೆಟ್ ಕಿತ್ತು, ಅಫ್ಘನ್ನರ ಕನಸಿಗೆ ಕೊಳ್ಳಿ ಇಟ್ಟರು.

ಕೊನೆ ಓವರ್ ನಲ್ಲಿ ಏನಾಯಿತು?: ಕೊನೆಯ ಓವರ್‌ಗೆ ಅಫ್ಘಾನ್‌ ಗೆಲುವಿಗೆ 16 ರನ್‌ಗಳ ಅವಶ್ಯಕತೆಯಿತ್ತು. ಆದರೆ, ವೇಗಿ ಮೊಹಮ್ಮದ್ ಶಮಿ ಅಂತಿಮ ಓವರ್‌ನಲ್ಲಿ ಹ್ಯಾಟ್ರಕ್ ವಿಕೆಟ್ ಪಡೆದು ಎದುರಾಳಿಯನ್ನು 213/10 ರನ್‌ಗೆ ಕಟ್ಟಿಹಾಕಿದರು.

ಆಫ್ಘಾನಿಸ್ತಾನಕ್ಕೆ ಗೆಲುವಿನ ಆಸೆ ಚಿಗುರಿಸಿದ್ದ ಮೊಹಮ್ಮದ್ ನಬಿ ಅವರು ಬೌಂಡರಿ ಬಾರಿಸಿ, ಗೆಲುವಿನ ಗುರಿಯತ್ತ ಸ್ಕೋರ್ ಕೊಂಡೊಯ್ಯುವ ಕುರುಹು ತೋರಿದ್ದರು. ಈ ಸಂದರ್ಭದಲ್ಲಿ ವಿಕೆಟ್ ಕೀಪರ್, ಮಾಜಿ ನಾಯಕ ಎಂಎಸ್ ಧೋನಿ ಅವರು ನೀಡಿದ ಸಲಹೆಯನ್ನು ಪಾಲಿಸಿದ್ದರಿಂದ ಶಮಿಗೆ ಮೂರು ವಿಕೆಟ್ ಸಿಕ್ಕಿತು.

ವಿಶ್ವಕಪ್ 2019: ಭಾರತ ಪರ ಇತಿಹಾಸ ನಿರ್ಮಿಸಿದ ವೇಗಿ ಮೊಹಮ್ಮದ್ ಶಮಿ! ವಿಶ್ವಕಪ್ 2019: ಭಾರತ ಪರ ಇತಿಹಾಸ ನಿರ್ಮಿಸಿದ ವೇಗಿ ಮೊಹಮ್ಮದ್ ಶಮಿ!

ಹಾರ್ದಿಕ್ ಪಾಂಡ್ಯಗೆ ನಬಿ ಕ್ಯಾಚಿತ್ತು ಪೆವಿಲಿಯನ್ ಸೇರಿದರೂ ಇನ್ನೆರಡು ವಿಕೆಟ್ ಕೀಳುವುದು ಸುಲಭವಾಗಿರಲಿಲ್ಲ. ಆದರೆ, ಧೋನಿ ನೀಡಿದ ಸಲಹೆ ಸರಳವಾಗಿತ್ತು. ಹ್ಯಾಟ್ರಿಕ್ ಪಡೆಯುವ ಅವಕಾಶ ಸಿಕ್ಕಿದೆ, ಯಾರ್ಕರ್ ಲೆಂಗ್ತ್ ಬಾಲ್ ಮುಂದುವರೆಸು, ಯಾವುದೆ ಬದಲಾವಣೆ ಬೇಡ ಎಂದು ಚುಟುಕಾಗಿ ಧೋನಿ ಸಲಹೆ ನೀಡಿದರು. ಅದರಂತೆ, ಅಫ್ತಾಬ್ ಆಲಂ, ಮುಜೀಬ್ ಉರ್ ರೆಹಮಾನ್ ವಿಕೆಟ್ ಪಡೆದೆ ಎಂದು ಶಮಿ ಹೇಳಿಕೊಂಡಿದ್ದಾರೆ.

ಗಾಯಗೊಂಡ ಭುವನೇಶ್ವರ್ ಕುಮಾರ್ ಅವರ ಬದಲಿಗೆ ತಂಡ ಸೇರಿದ ಶಮಿ ಅವರು ಹ್ಯಾಟ್ರಿಕ್ ಸೇರಿದಂತೆ 4/40 ಪಡೆದು ಮಿಂಚಿದರು. ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದೇ ಅದೃಷ್ಟ, ಜೊತೆಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಬೇಕು, ಹ್ಯಾಟ್ರಿಕ್ ಸಿಕ್ಕಿರುವುದು ಅತ್ಯಂತ ಸಂತಸದ ಕ್ಷಣ ಎಂದು ಶಮಿ ಹೇಳಿದ್ದಾರೆ.

ಮೊಹಮ್ಮದ್ ಶಮಿ 40 ರನ್‌ಗೆ 4, ಜಸ್‌ಪ್ರೀತ್ ಬೂಮ್ರಾ 39 ರನ್‌ಗೆ 2, ಯುಜುವೇಂದ್ರ ಚಾಹಲ್ 36 ರನ್‌ಗೆ 2, ಹಾರ್ದಿಕ್ ಪಾಂಡ್ಯ 52 ರನ್‌ಗೆ 2 ವಿಕೆಟ್ ಪಡೆದು ಗಮನ ಸೆಳೆದರು. ಜಸ್‌ಪ್ರೀತ್ ಬೂಮ್ರಾ ಪಂದ್ಯಶ್ರೇಷ್ಠರೆನಿಸಿದರು.

Story first published: Sunday, June 23, 2019, 16:21 [IST]
Other articles published on Jun 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X