ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಯುವ ಬೌಲರ್‌ಗಳಿಗೆ ಎಚ್ಚರಿಕೆ ರವಾನಿಸಿದ ಯುನಿವರ್ಸಲ್ ಬಾಸ್!

ICC World Cup 2019: Opponents know what I’m capable of - Chris Gayle

ಕಿಂಗ್ಸ್‌ಟೌನ್, ಮೇ 22: ವೆಸ್ಟ್ ಇಂಡೀಸ್‌ನ ವಿನಾಶಕಾರಿ ಬ್ಯಾಟ್ಸ್ಮನ್‌ ಕ್ರಿಸ್‌ ಗೇಲ್ ಮುಂಬರಲಿರುವ ವಿಶ್ವಕಪ್ ನಲ್ಲಿ ಮೈದಾನಕ್ಕಿಳಿಯುವುದರಲ್ಲಿದ್ದಾರೆ. ಇದು ಗೇಲ್ ಕೊನೆಯ ವಿಶ್ವಕಪ್. ಹೀಗಾಗಿ ಬೌಲರ್‌ಗಳಿಗೆ ಎಚ್ಚರಿಕೆ ರವಾನಿಸಿರುವ ಬೀಸುಗೈ ದಾಂಡಿಗ, ನನ್ನ ಸಾಮರ್ಥ್ಯ ಏನು ಅನ್ನೋದು ಬೌಲರ್‌ಗಳಿಗೆ ಗೊತ್ತು. ನಾನೆಷ್ಟು ಅಪಾಯಕಾರಿ ಬ್ಯಾಟ್ಸ್ಮನ್‌ ಅನ್ನೋದೂ ಅವರಿಗೆ ಅರಿವಿದೆ ಎಂದಿದ್ದಾರೆ.

ಕೊಹ್ಲಿಯಿಂದ ಮಾತ್ರ ವಿಶ್ವಕಪ್ ಗೆಲ್ಲಿಸಲಾಗೋಲ್ಲ: ಸಚಿನ್ ತೆಂಡೂಲ್ಕರ್ಕೊಹ್ಲಿಯಿಂದ ಮಾತ್ರ ವಿಶ್ವಕಪ್ ಗೆಲ್ಲಿಸಲಾಗೋಲ್ಲ: ಸಚಿನ್ ತೆಂಡೂಲ್ಕರ್

ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ಜೊತೆ ಮಾತನಾಡುತ್ತ ಗೇಲ್, 'ಯುವ ಆಟಗಾರರು ನನ್ನ ತಲೆಯಲ್ಲಿ ಆಗಾಗ ಬರುತ್ತಿರುತ್ತಾರೆ. ಹಿಂದಿನಸಾರಿಯಂತೆ ಈಗ ಸುಲಭವಿಲ್ಲ ಅನ್ನೋದು ಗೊತ್ತಿದೆ. ಆದರೆ ನಾನು ಸಿಡಿಯಬಲ್ಲೆ, ಅವರು ಪರಿಣಾಮ ಎದುರಿಸಬೇಕಾಗುತ್ತೆ' ಎಂದರು.

ಗೇಲ್ ಹೀಗೆ ಯುವ ಬೌಲರ್‌ಗಳಿಗೆ ಎಚ್ಚರಿಕೆ ನೀಡಿದ್ದಕ್ಕೆ ಕಾರಣವಿದೆ. ಈಗ ಸಕ್ರಿಯ ಬ್ಯಾಟ್ಸ್ಮನ್‌ಗಳಲ್ಲಿ ವಿಶ್ವಕಪ್ ದಾಖಲೆ ಉಳಿಸಿಕೊಂಡಿರುವ ಅಪರೂಪದ ಆಟಗಾರಲ್ಲಿ ಗೇಲ್ ಇದ್ದಾರೆ. ಗೇಲ್ ಹೆಸರಿನಲ್ಲಿ ವಿಶ್ವಕಪ್‌ನ ವೇಗದ ದ್ವಿಶತ (138 ಎಸೆತಗಳಿಗೆ 200 ರನ್) ಮತ್ತು ವಿಶ್ವಕಪ್ ಅತ್ಯಧಿಕ ಸಿಕ್ಸ್‌ (37 ಸಿಕ್ಸ್‌ಗಳು) ದಾಖಲೆಗಳಿವೆ.

ವಿಶ್ವಕಪ್‌: ಮ್ಯಾಕ್ಸ್‌ವೆಲ್ ಮಿಂಚೋದು ಬ್ಯಾಟಿಂಗ್‌ನಲ್ಲ ಇಲ್ಲ ಬೌಲಿಂಗ್‌ನಲ್ಲ?!ವಿಶ್ವಕಪ್‌: ಮ್ಯಾಕ್ಸ್‌ವೆಲ್ ಮಿಂಚೋದು ಬ್ಯಾಟಿಂಗ್‌ನಲ್ಲ ಇಲ್ಲ ಬೌಲಿಂಗ್‌ನಲ್ಲ?!

ತನ್ನ ಬಗ್ಗೆ ಬೌಲರ್‌ಗಳಿಗಿರುವ ಭಯದ ಬಗ್ಗೆ ನಗುತ್ತಲೇ ಮಾತನಾಡಿದ ಯುನಿವರ್ಸಲ್ ಬಾಸ್, 'ಹೋಗಿ ಕೇಳಿ ಬೇಕಾದರೆ. ಕ್ಯಾಮರಾದ ಮುಂದೆಯೇ ಅವರನ್ನು ಕೇಳಿನೋಡಿ. ಕ್ಯಾಮರಾದ ಮುಂದೆ ಅವರು ನನ್ನ ಬಗೆಗಿನ ಭಯ ತೋರಿಕೊಳ್ಳಲ್ಲ. ಅದೇ ಕ್ಯಾಮರಾದ ಹೊರತಾಗಿ ಕೇಳಿ; ಆ ಮನುಷ್ಯನೇ, ಅದೇ ಮನುಷ್ಯ ಅಂತ ನನ್ನನ್ನುದ್ದೇಶಿಸಿ ಹೇಳ್ತಾರೆ' ಎಂದು ಈ ವಿಶ್ವಕಪ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ನ ಮುನ್ಸೂಚನೆ ನೀಡಿದರು.

Story first published: Wednesday, May 22, 2019, 17:48 [IST]
Other articles published on May 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X