ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಿಶ್ವಕಪ್ 2019: ಚಾಂಪಿಯನ್ ತಂಡಕ್ಕೆ ಭರ್ಜರಿ ನಗದು ಬಹುಮಾನ!

ICC World Cup 2019: Prize money on offer, past winners and format

ನವದೆಹಲಿ, ಮೇ 17: ವಿಶ್ವ ಮಟ್ಟದ ಅದ್ದೂರಿ ಕ್ರಿಕೆಟ್ ಹಬ್ಬವಾದ (ಪುರುಷರ) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮುವ ತಂಡ 4 ಮಿಲಿಯನ್ ಡಾಲರ್ (ಸುಮಾರು 28 ಕೋ.ರೂ) ನಗದು ಪುರಸ್ಕಾರ ಮತ್ತು ಟ್ರೋಫಿಯನ್ನು ಪಡೆದುಕೊಳ್ಳಲಿದೆ.

World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!

ಜುಲೈ 16ರಂದು ಲಾರ್ಡ್ಸ್ ಮೈದಾನದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ. ಎಲ್ಲಾ ನಗದು ಪುರಸ್ಕಾರಗಳು ಸೇರಿ ಒಟ್ಟಿಗೆ ಟೂರ್ನಿಯಲ್ಲಿ 10 ಮಿಲಿಯನ್ ಡಾಲರ್‌ನಷ್ಟು ಬಹುಮಾನವಿದೆ.

ವಿಶ್ವಕಪ್‌ನಲ್ಲಿ 4ನೇ ಕ್ರಮಾಂಕಕ್ಕೆ ಕೆಎಲ್ ರಾಹುಲ್ ಸೂಕ್ತ: ವೆಂಗ್‌ಸರ್ಕಾರ್ವಿಶ್ವಕಪ್‌ನಲ್ಲಿ 4ನೇ ಕ್ರಮಾಂಕಕ್ಕೆ ಕೆಎಲ್ ರಾಹುಲ್ ಸೂಕ್ತ: ವೆಂಗ್‌ಸರ್ಕಾರ್

ಮೇ 30ರಿಂದ ಇಂಗ್ಲೆಂಡ್‌ನ ವೇಲ್ಸ್‌ ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ನೀಡಲಾಗುವ ನಗದು ಪುರಸ್ಕಾರಗಳ ಮಾಹಿತಿ ಇಲ್ಲಿದೆ.

ರನ್ನರ್ಸ್‌ಗೂ ದೊಡ್ಡ ಮೊತ್ತ

ರನ್ನರ್ಸ್‌ಗೂ ದೊಡ್ಡ ಮೊತ್ತ

ವಿನ್ನರ್ಸ್ ತಂಡ 4 ಮಿಲಿಯನ್ ಡಾಲರ್ ನಷ್ಟು ನಗದು ಪ್ರಶಸ್ತಿ ಗೆದ್ದರೆ ರನ್ನರ್ಸ್ ತಂಡವೂ ದೊಡ್ಡ ಮೊತ್ತ ಬಹುಮಾನ ಪಡೆದುಕೊಳ್ಳಲಿದೆ. ಚಾಂಪಿಯನ್ ತಂಡದ ಅರ್ಧದಷ್ಟು ಅಂದರೆ 2 ಮಿಲಿಯನ್ ಡಾಲರ್ (14,03,21,000 ಕೋ.ರೂ ರೂ.) ನಗದು ಪುರಸ್ಕಾರ ರನ್ನರ್ಸ್ ಪಾಲಾಗಲಿದೆ.

ಸೆಮಿಫೈನಲ್ ಸೋತರೂ ಹಣ

ಸೆಮಿಫೈನಲ್ ಸೋತರೂ ಹಣ

46 ದಿನಗಳ ಕಾಲ ಒಟ್ಟು 11 ತಾಣಗಳಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಫೈನಲ್‌ನಲ್ಲಿ ಸೋತ ತಂಡವೂ $ 800,000 (5,61,38,000 ರೂ.) ಪಡೆದುಕೊಳ್ಳಲಿದೆ. ಅಂತೂ ಟೂರ್ನಿಯಲ್ಲಿ ಗೆಲ್ಲುವ ತಂಡಗಳು ವಿಶ್ವದ ಬಲಿಷ್ಠ ಕ್ರಿಕೆಟ್ ತಂಡಗಳೆಂಬ ಹೆಗ್ಗಳಿಕೆ ಪಾತ್ರವಾಗುವುದಲ್ಲದೆ, ದೊಡ್ಡ ಮಟ್ಟದ ನಗದನ್ನೂ ಗೆದ್ದುಕೊಳ್ಳಲಿವೆ.

ಲೀಗ್ ನಲ್ಲಿ ಗೆದ್ದವರಿಗೆ ನಗದು

ಲೀಗ್ ನಲ್ಲಿ ಗೆದ್ದವರಿಗೆ ನಗದು

ಇನ್ನು ಲೀಗ್ ಹಂತದಲ್ಲಿ ಗೆಲ್ಲುವ ತಂಡಗಳು ತಲಾ 40,000 ಡಾಲರ್ (2,80,562 ರೂ.) ಗೆದ್ದುಕೊಂಡರೆ, ಲೀಗ್ ಬಳಿಕದ ಪಂದ್ಯಗಳಲ್ಲಿನ ವಿಜೇತರು ತಲಾ 100,000 ಡಾಲರ್ (70,13,800 ರೂ.) ನಗದು ಪ್ರಶಸ್ತಿ ಜಯಿಸಲಿದ್ದಾರೆ. ಗೆಲ್ಲುವ ಕುದುರೆಗೆ ಟೂರ್ನಿ ಹಣದ ಹೊಳೆಯನ್ನೇ ಹರಿಸಲಿದೆ.

ಹಿಂದೆ ಗೆದ್ದು ಬೀಗಿದ ತಂಡಗಳು

ಹಿಂದೆ ಗೆದ್ದು ಬೀಗಿದ ತಂಡಗಳು

ಈ ಹಿಂದೆ ಇಂಗ್ಲೆಂಡ್ ಮತ್ತು ವೇಲ್ಸ್ 1975, 1979, 1983 ಮತ್ತು 1999ರಲ್ಲಿ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಿತ್ತು. ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡ 1987, 1999, 2003, 2007 ಮತ್ತು 2015ರಲ್ಲಿ ಪ್ರಶಸ್ತಿ ಜಯಿಸಿ ವಿಶ್ವಕಪ್‌ನಲ್ಲಿನ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಇನ್ನು ಮೊದಲೆರಡು ಆವೃತ್ತಿಗಳನ್ನು ಅಂದರೆ 1975 ಮತ್ತು 1979ರಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ ಆಗಿತ್ತು. 1983 ಮತ್ತು 2011ರಲ್ಲಿ ಭಾರತ, 1992ರಲ್ಲಿ ಪಾಕಿಸ್ತಾನ, 1996ರಲ್ಲಿ ಶ್ರೀಲಂಕಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

Story first published: Friday, May 17, 2019, 16:24 [IST]
Other articles published on May 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X