ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ ಅಶ್ವಿನ್ ಹೇಳಿರುವ ಟೀಮ್ ಇಂಡಿಯಾ ವಿಶ್ವಕಪ್ ಭವಿಷ್ಯ ನಿಜವಾಗುತ್ತಾ?!

2019ರ ವಿಶ್ವಕಪ್ ಬಗ್ಗೆ ಭವಿಷ್ಯ ನುಡಿದ ಆರ್.ಅಶ್ವಿನ್ | Oneindia Kannada
ICC World Cup 2019: R Ashwin predicts on Virat Kohli and team

ನವದೆಹಲಿ, ಜೂನ್ 12: ಈ ಬಾರಿಯ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಮುಂದಾಳತ್ವದ ಭಾರತ ತಂಡ ಪಾರಮ್ಯ ಮೆರೆಯಲಿದೆ ಎಂದು ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. 2003 ಮತ್ತು 2007ರಲ್ಲಿ ಆಸ್ಟ್ರೇಲಿಯಾ ತಂಡ ಬಲಿಷ್ಠ ತಂಡವಾಗಿ ಹೊರ ಹೊಮ್ಮಿದಂತೆಯೇ ಭಾರತ ಈ ಸಾರಿ ಗೆಲುವಿನ ಹಾದಿ ಹಿಡಿಯಲಿದೆ ಎಂದು ಅಶ್ವಿನ್ ಹೇಳಿದ್ದಾರೆ.

ವಿಶ್ವಕಪ್: ಶೀಘ್ರ ತಂಡ ಸೇರಿಕೊಳ್ಳುವಂತೆ ರಿಷಬ್ ಪಂತ್‌ಗೆ ಬಿಸಿಸಿಐ ಕರೆ!ವಿಶ್ವಕಪ್: ಶೀಘ್ರ ತಂಡ ಸೇರಿಕೊಳ್ಳುವಂತೆ ರಿಷಬ್ ಪಂತ್‌ಗೆ ಬಿಸಿಸಿಐ ಕರೆ!

ವಿಶ್ವಕಪ್ ಆರಂಭಿಕ ಪಂದ್ಯದಲ್ಲೇ ಭಾರತ, ದಕ್ಷಿಣ ಆಫ್ರಿಕಾಕ್ಕೆ ಸೋಲಿನ ಆಘಾತವನ್ನು ನೀಡಿತ್ತು. ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನೂ ಕೊಹ್ಲಿ ಬಳಗ ಬಗ್ಗುಬಡಿದಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಬೌಲಿಂಗ್‌ನಲ್ಲಿ ಹೆಚ್ಚು ಮಿಂಚಿದ್ದರೆ, ಆಸೀಸ್ ವಿರುದ್ಧ ಟೀಮ್ ಇಂಡಿಯಾ ಬ್ಯಾಟಿಂಗ್‌ಗಾಗಿ ಭಾರತೀಯರ ಮನ ಗೆದ್ದಿತ್ತು.

ವಿಶ್ವಕಪ್‌: ಇಂಡೊ-ಪಾಕ್‌ ಕದನಕ್ಕೂ ಮುನ್ನ ಭಾರತವನ್ನು ಕೆಣಕಿದ ಪಾಕಿಸ್ತಾನ!ವಿಶ್ವಕಪ್‌: ಇಂಡೊ-ಪಾಕ್‌ ಕದನಕ್ಕೂ ಮುನ್ನ ಭಾರತವನ್ನು ಕೆಣಕಿದ ಪಾಕಿಸ್ತಾನ!

ಈ ವಿಶ್ವಕಪ್‌ಲ್ಲಿ ಎಲ್ಲಾ ಹತ್ತು ತಂಡಗಳೆದುರು ಪಾರಮ್ಯ ಮೆರೆಯಲು ಭಾರತ ತಂಡದಲ್ಲಿರುವ ಪ್ಲಸ್‌ಗಳಾವುವು ಎಂದುದನ್ನು ಅಶ್ವಿನ್ ಹೇಳಿಕೊಂಡಿದ್ದಾರೆ.

ಬಲಿಷ್ಠ ತಂಡವಾಗಿ ಮುನ್ನುಗ್ಗಲಿದೆ

ಬಲಿಷ್ಠ ತಂಡವಾಗಿ ಮುನ್ನುಗ್ಗಲಿದೆ

ತಮಿಳುನಾಡಿನಲ್ಲಿ ತನ್ನ ಜೆನ್ ನೆಕ್ಸ್ಟ್ ಕ್ರಿಕೆಟ್ ಇನ್‌ಸ್ಟಿಸ್ಟ್ಯೂಟ್ ನಲ್ಲಿ ಅಶ್ವಿನ್ ಫೌಂಡೇಶನ್ ಉದ್ಘಾಟಿಸಿದ ಬಳಿಕ ಮಾತನಾಡಿದ ಆರ್ ಅಶ್ವಿನ್, '2003 ಮತ್ತು 2007ರಲ್ಲಿ ಆಸ್ಟ್ರೇಲಿಯಾ ತಂಡ ಪಾರಮ್ಯ ಮೆರೆದಂತೆಯೇ ಈ ಬಾರಿ ಟೀಮ್ ಇಂಡಿಯಾ ಬಲಿಷ್ಠ ತಂಡವಾಗಿ ಮುನ್ನುಗ್ಗಲಿದೆ' ಎಂದರು.

ಆಸ್ಟ್ರೇಲಿಯಾಕ್ಕೆ ಹ್ಯಾಟ್ರಿಕ್ ಗೆಲುವು

ಆಸ್ಟ್ರೇಲಿಯಾಕ್ಕೆ ಹ್ಯಾಟ್ರಿಕ್ ಗೆಲುವು

ಸತತ ಮೂರುಬಾರಿ ವಿಶ್ವಕಪ್ ಟ್ರೋಫಿ ಎತ್ತಿದ ಹೆಗ್ಗಳಿಕೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ್ದು. 1999, 2003 ಮತ್ತು 2007ರಲ್ಲಿ ಕಾಂಗರೂ ಬಳಗ ವಿಶ್ವಕಪ್ ಕಪ್ ಜಯಿಸಿತ್ತು. ಅದರಲ್ಲೂ 2003ರಲ್ಲಿ ಸೌತ್ ಆಫ್ರಿಕಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮತ್ತು 2007ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದಿದ್ದ ಆವೃತ್ತಿಯಲ್ಲಿ ಆಸೀಸ್ ತಂಡ ಟೂರ್ನಿಯ ಹೆಚ್ಚು ಪ್ರಬಲ ತಂಡವಾಗಿ ಕಾಣಿಸಿಕೊಂಡಿತ್ತು. ಈ ಎರಡು ವರ್ಷಗಳು ರನ್ನರ್ ಪ್ರಶಸ್ತಿ ಕ್ರಮವಾಗಿ ಭಾರತ ಮತ್ತು ಶ್ರೀಲಂಕಾದ ಪಾಲಾಗಿದ್ದವು.

ಚಾಹಲ್ ಉತ್ತಮ ಪ್ರದರ್ಶನ

ಚಾಹಲ್ ಉತ್ತಮ ಪ್ರದರ್ಶನ

ಭಾರತ ತಂಡದ ಬಗ್ಗೆ ಮಾತು ಮುಂದುವರೆಸಿದ ಅಶ್ವಿನ್, 'ಇವತ್ತಿನವರೆಗೂ ಯುಜುವೆಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಚಾಹಲ್ ಬೌಲಿಂಗ್ ಹೆಚ್ಚು ಮಿಂಚುತ್ತಿದೆ. ಆದರೆ ಆಫ್‌ ಸ್ಪಿನ್ನರ್‌ಗಳು ಈ ಹೊತ್ತಿನಲ್ಲಿ ಹೆಚ್ಚು ಪ್ರಭಾವಶಾಲಿಗಳಲ್ಲ ಎಂಬುದು ನನ್ನನಿಸಿಕೆ' ಎಂದರು.

ಜೂನ್ 23ರಂದು ಇಂಗ್ಲೆಂಡ್‌ಗೆ

ಜೂನ್ 23ರಂದು ಇಂಗ್ಲೆಂಡ್‌ಗೆ

32ರ ಹರೆಯದ ಅಶ್ವಿನ್ ಅವರು ಜೂನ್ 23ರಂದು ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಇಂಗ್ಲೆಂಡ್‌ನ ಕೌಂಟಿ ತಂಡ ನಾಟಿಂಗ್‌ಹ್ಯಾಮ್‌ಶೈರ್ ಪರ ಆಡಲಿದ್ದಾರೆ. 'ಜೂನ್ 23ರಂದು ಇಂಗ್ಲೆಂಡ್‌ಗೆ ಹೊರಡಲಿದ್ದೇನೆ. ಇಂಗ್ಲೆಂಡ್ ಕೌಂಟಿ ತಂಡ ನಾಟಿಂಗ್‌ಹ್ಯಾಮ್‌ಶೈರ್ ಪರವಾಗಿ ಆಡುತ್ತಿದ್ದೇನೆ. ಅಲ್ಲೇನಾದೀತು ನೋಡೋಣ' ಎಂದು ಅಶ್ವಿನ್ ಹೇಳಿದರು.

Story first published: Wednesday, June 12, 2019, 12:19 [IST]
Other articles published on Jun 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X