ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಬಾಂಗ್ಲಾ ಪರ ಅಪರೂಪದ ದಾಖಲೆ ಬರೆದ ಶಕೀಬ್ ಅಲ್ ಹಸನ್

ICC World Cup 2019: Shakib Al Hasan scripts unique World Cup history

ಸೌತಾಂಪ್ಟನ್, ಜೂನ್ 24: ಬಾಂಗ್ಲಾ ಬ್ಯಾಟ್ಸ್ಮನ್ ಸಕೀಬ್ ಅಲ್ ಹಸನ್ ಈ ಬಾರಿಯ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಸೋಮವಾರ (ಜೂನ್ 24) ನಡೆದ ಪಂದ್ಯದಲ್ಲಿ ಶಕೀಬ್ ಅವರು ಬಾಂಗ್ಲಾ ಪರ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ನಡೆದ ಪಂದ್ಯದಲ್ಲಿ ಅಲ್ ಹಸನ್ 69 ಎಸೆತಗಳಿಗೆ 51 ರನ್ ಗಳಿಸಿ ಮುಜೀಬ್ ಉರ್ ರಹ್ಮಾನ್‌ಗೆ ವಿಕೆಟ್ ಒಪ್ಪಿಸಿದರು. ಶಕೀಬ್ ಬಾರಿಸಿದ 51 ರನ್ ಅವರನ್ನು ವಿಶ್ವಕಪ್‌ನಲ್ಲಿ ಬಾಂಗ್ಲಾ ಪರ 1000 ರನ್ ಬಾರಿಸಿದ ಮೊದಲ ಕ್ರಿಕೆಟಿಗ ಸಾಲಿನಲ್ಲಿ ತಂದು ನಿಲ್ಲಿಸಿದೆ.

ಬಾಂಗ್ಲಾದೇಶ vs ಅಫ್ಘಾನಿಸ್ತಾನ, ಜೂನ್ 24, Live ಸ್ಕೋರ್‌ಕಾರ್ಡ್

1
43674

ಐಸಿಸಿ ವಿಶ್ವಕಪ್ 2019ರಲ್ಲಿ ಈಗಾಗಲೇ ಎರಡು ಶತಕಗಳನ್ನು ಬಾರಿಸಿರುವ ಶಕೀಬ್, ವಿಶ್ವಕಪ್‌ನಲ್ಲಿ 1000 ರನ್ ಬಾರಿಸಿದ 19ನೇ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ 35 ರನ್ ಬಾರಿಸಿದಾಗಲೇ ಹಸನ್ ಈ ಮೈಲಿಗಲ್ಲು ಸ್ಥಾಪಿಸಿದ್ದರು.

ಶಮಿ ಮೂಲಕ ಜನರಿಗೆ ನಾನು ಯಾರೆಂದು ಗೊತ್ತಾಗ್ತಿದೆ: ಚೇತನ್ ಶರ್ಮಾಶಮಿ ಮೂಲಕ ಜನರಿಗೆ ನಾನು ಯಾರೆಂದು ಗೊತ್ತಾಗ್ತಿದೆ: ಚೇತನ್ ಶರ್ಮಾ

ಟೂರ್ನಿಯಲ್ಲಿ ಬಾಂಗ್ಲಾ ಪರ 6 ಇನ್ನಿಂಗ್ಸ್‌ಗಳಲ್ಲಿ ಒಟ್ಟು 476 ರನ್ ಕೊಡುಗೆ ನೀಡಿರುವ ಶಕೀಬ್, ತಂಡದ ಸೆಮಿಫೈನಲ್ ಆಸೆಯನ್ನು ಜೀವಂತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 32ರ ಹರೆಯದ ಹಸನ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 121 ರನ್, ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 124 ರನ್ ಬಾರಿಸಿ ಬಾಂಗ್ಲಾ ಪರ ಹೋರಾಟ ನಡೆಸಿದ್ದರು.

ಕ್ರಿಕೆಟ್‌: ವೆಸ್ಟ್‌ ಇಂಡೀಸ್‌ ಪ್ರವಾಸ, ಕೊಹ್ಲಿ ಮತ್ತು ಬುಮ್ರಾಗೆ ವಿಶ್ರಾಂತಿಕ್ರಿಕೆಟ್‌: ವೆಸ್ಟ್‌ ಇಂಡೀಸ್‌ ಪ್ರವಾಸ, ಕೊಹ್ಲಿ ಮತ್ತು ಬುಮ್ರಾಗೆ ವಿಶ್ರಾಂತಿ

ಈ ವಿಶ್ವಕಪ್‌ನಲ್ಲಿ ಅತ್ಯಧಿಕ ಒಟ್ಟು ರನ್ ಪಟ್ಟಿಯಲ್ಲಿ 476 ರನ್‌ಗಳೊಂದಿಗೆ ಶಕೀಬ್ ಮೊದಲ ಸ್ಥಾನ ಆವರಿಸಿಕೊಂಡಿದ್ದಾರೆ. 99.17 ಸ್ಟ್ರೈಕ್ ರೇಟ್, 95.20 ಸರಾಸರಿಯಲ್ಲಿ ಅಲ್ ಹಸನ್ ಅಗ್ರ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (447 ರನ್), 3ನೇ ಸ್ಥಾನದಲ್ಲಿ ಇಂಗ್ಲೆಂಡ್‌ನ ಜೋ ರೂಟ್ (424 ರನ್) ಇದ್ದಾರೆ.

Story first published: Monday, June 24, 2019, 18:46 [IST]
Other articles published on Jun 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X