ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಧೋನಿ ಬಗ್ಗೆ ನೇರ ಅಭಿಪ್ರಾಯ ಹಂಚಿಕೊಂಡ ಸ್ಟೀವ್ ವಾ

ICC World Cup 2019: Steve Waugh makes a bold statement on MS Dhoni

ಲಂಡನ್, ಜುಲೈ 13: ಐಸಿಸಿ ವಿಶ್ವಕಪ್ 2019ರಲ್ಲಿ ಪ್ರಶಸ್ತಿ ಸುತ್ತಿಗೆ ಭಾರತ ಲಗ್ಗೆಯಿಡಲು ಅತೀ ಪ್ರಮುಖ ಪಂದ್ಯವಾಗಿದ್ದ ಸೆಮಿಫೈನಲ್‌ನಲ್ಲಿ ತಂಡದ ಸೋಲಿಗೆ ಮಾಜಿ ನಾಯಕ ಎಂಎಸ್ ಧೋನಿ ಕಾರಣಾನ? ನ್ಯೂಜಿಲೆಂಡ್ ವಿರುದ್ಧದ ಆ ಪಂದ್ಯದಲ್ಲಿನ ಹಿನ್ನಡೆಗೆ ಕೆಲ ಕ್ರಿಕೆಟ್ ಅಭಿಮಾನಿಗಳು ಧೋನಿಯನ್ನು ಗುರಿಯಾಗಿಸುತ್ತಿದ್ದಾರೆ.

ಕುತೂಹಲಕಾರಿ ಅಂಕಿ-ಅಂಶಗಳು, ಸ್ಟೋರಿಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಆದರೆ ಆಸ್ಟ್ರೇಲಿಯಾ ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕ ಸ್ಟೀವ್ ವಾ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಏಕದಿನ ಪಂದ್ಯದಲ್ಲಿ ಚೇಸಿಂಗ್ ಮೂಲಕ ತಂಡ ಗೆಲ್ಲಿಸೋದು ಎಷ್ಟು ಕಷ್ಟ ಅನ್ನೋದು ನನಗೆ ಗೊತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ನಲ್ಲಿ ಧೋನಿ, ತಂಡವನ್ನು ಗೆಲ್ಲಿಸಲು ಕೊಸರಾಡಿದ್ದರು ಎಂದು ಸ್ಟೀವ್ ತಿಳಿಸಿದ್ದಾರೆ.

ಟೀಮ್‌ ಇಂಡಿಯಾದ ವೆಸ್ಟ್‌ ಇಂಡೀಸ್‌ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಧೋನಿಯೀಗ ಫಾರ್ಮ್ ಕಳೆದುಕೊಂಡಿದ್ದಾರೆ, ಅವರು ನಿವೃತ್ತಿ ಹೊಂದಲು ಇದು ಸಕಾಲ ಎಂದೆಲ್ಲ ಮಾತನಾಡಿಕೊಳ್ಳುತ್ತಿರುವ ಕೆಲವರಿಗೆ ಉತ್ತರಿಸಿರುವ ಸ್ಟೀವ್ ವಾ, 'ಧೋನಿಯ ಹೊರತಾಗಿ ಭಾರತಕ್ಕೆ ಪಂದ್ಯವನ್ನು ಗೆಲ್ಲುವ ಅವಕಾಶವೇ ಇಲ್ಲ' ಎಂದಿದ್ದಾರೆ.

ಟೀಕೆ ನ್ಯಾಯಸಮ್ಮತವಲ್ಲ

ಟೀಕೆ ನ್ಯಾಯಸಮ್ಮತವಲ್ಲ

ಕೂಲ್ ಕ್ಯಾಪ್ಟನ್ ಧೋನಿಯ ಬೆಂಬಲಕ್ಕೆ ನಿಂತಿರುವ ಸ್ಟೀವ್ ಮಾತು ಮುಂದುವರೆಸಿ, 'ಧೋನಿಯನ್ನು ಟೀಕಿಸುತ್ತಿದ್ದಾರಲ್ಲ? ಆ ಟೀಕೆಗಳು ನಿಜಕ್ಕೂ ನ್ಯಾಯ ಸಮ್ಮತವಲ್ಲ. ನ್ಯೂಜಿಲೆಂಡ್ ವಿರುದ್ಧ ಆಡಿದ್ದ ಅದೇ ಶೈಲಿಯ ಆಟವಾಡಿ ಧೋನಿ ಅನೇಕ ಸಾರಿ ಭಾರತಕ್ಕೆ ಗೆಲುವು ತಂದಿದ್ದಾರೆ' ಎಂದು ಧೋನಿಯ ಹಿಂದಿನ ಬೆಸ್ಟ್ ಫಿನಿಷಿಂಗ್ ಕ್ಷಣಗಳನ್ನು ಕಣ್ಣ ಮುಂದೆ ತರುವ ಪ್ರಯತ್ನ ಮಾಡಿದರು.

ಸಂದರ್ಭಕ್ಕೆ ತಕ್ಕ ಆಟ

ಸಂದರ್ಭಕ್ಕೆ ತಕ್ಕ ಆಟ

'ಧೋನಿ ಸಂದರ್ಭಕ್ಕೆ ತಕ್ಕಂತೆ ಆಡುವ ಪರಿಯಿದೆಯಲ್ಲ? ಅದು ತಂಡಕ್ಕೆ ಗೆಲುವಿನ ಅವಕಾಶ ತಂದುಕೊಡುತ್ತದೆ. ಧೋನಿ ಹೊರತಾಗಿ ಟೀಮ್ ಇಂಡಿಯಾಕ್ಕೆ ಪಂದ್ಯ ಗೆಲ್ಲುವ ಅವಕಾಶವೇ ಕಡಿಮೆ' ಎಂದು ವಾ ತನ್ನ ನೇರ ಅಭಿಪ್ರಾಯ ಹಂಚಿಕೊಂಡಿದ್ದಾರೆ. 1999ರ ವಿಶ್ವಕಪ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಆಸೀಸ್ ತಂಡವನ್ನು ಸ್ಟೀವ್ ವಾ ಮುನ್ನಡೆಸಿದ್ದರು.

ಭಾರತ ಗೆಲ್ಲುವುದರಲ್ಲಿತ್ತು

ಭಾರತ ಗೆಲ್ಲುವುದರಲ್ಲಿತ್ತು

'ಖಂಡಿತವಾಗಿಯೂ ನೀವು ಪ್ರತೀ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ. ಕಿವೀಸ್ ವಿರುದ್ಧದ ಪಂದ್ಯದಲ್ಲಿ ತಂಡಕ್ಕಾಗಿ ಎರಡನೇ ರನ್ ತರುವ ವೇಳೆ ಧೋನಿ ಸ್ವಲ್ಪದರಲ್ಲಿ ಔಟಾದರು. ಒಂದು ವೇಳೆ ಧೋನಿ ಆಗ ರನ್ ಔಟ್ ಆಗದಿದ್ದರೆ ಟೀಮ್ ಇಂಡಿಯಾ ಆ ಪಂದ್ಯವನ್ನು ಗೆಲ್ಲುವುದರಲ್ಲಿತ್ತು' ಎಂದು ವಾ ಭಾರತದ ಇನ್ನಿಂಗ್ಸ್ ಕ್ಷಣಗಳನ್ನು ಸ್ಮರಿಸಿಕೊಂಡರು.

ಧೋನಿ-ಜಡೇಜಾ ಹೋರಾಟ ವ್ಯರ್ಥ

ಧೋನಿ-ಜಡೇಜಾ ಹೋರಾಟ ವ್ಯರ್ಥ

ಮಳೆಯ ಕಾರಣ ಜುಲೈ 9 ಮತ್ತು 10ರಂದು ನಡೆದಿದ್ದ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ 240 ರನ್ ಗುರಿ ನೀಡಿತ್ತು. ಭಾರತದ ಇನ್ನಿಂಗ್ಸ್ ವೇಳೆ ಎದುರಾಳಿ ತಂಡದ ಬೌಲರ್‌ಗಳಾದ ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್ ಕಾಡಿದ್ದರಿಂದ ಭಾರತ 221 ರನ್ನಿಗೆ ಶರಣಾಗಿತ್ತು. ಧೋನಿ, ರವೀಂದ್ರ ಜಡೇಜಾ ಗೆಲುವಿನ ನೆಲೆಯಲ್ಲಿ ಮಾಡಿದ ಹೋರಾಟ ವ್ಯರ್ಥವಾಗಿತ್ತು. ಭಾರತ 18 ರನ್‌ಗಳಿಂದ ಪರಾಭವಗೊಂಡಿತ್ತು.

Story first published: Saturday, July 13, 2019, 12:55 [IST]
Other articles published on Jul 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X