ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC World Cup 2019: ಭಾರತ ಅಂತಿಮ ತಂಡ ಪ್ರಕಟಿಸಿದ ಬಿಸಿಸಿಐ

ICC World Cup 2019 Team India Squad Announced

ಮುಂಬೈ, ಏಪ್ರಿಲ್ 15: ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ 2019ರ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಗಾಗಿ ಬೋರ್ಡ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಸೋಮವಾರ (ಏಪ್ರಿಲ್ 15) ಭಾರತದ ಅಂತಿಮ ತಂಡವನ್ನು ಪ್ರಕಟಿಸಿದೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ವಿಶ್ವಕಪ್‌ಗಾಗಿ ಭಾರತ ಪ್ರಕಟಿಸಿರುವ ಈ ಅಂತಿಮ ಪಟ್ಟಿಯಲ್ಲಿ ಯುವ ಆಟಗಾರರಾದ ರಿಷಬ್ ಪಂತ್‌, ಪೃಥ್ವಿ ಶಾಗೆ ಅವಕಾಶ ನೀಡಿಲಾಗಿಲ್ಲ. ಅನುಭವಿ ಆಟಗಾರ, ಸ್ಪಿನ್ನರ್ ಆರ್ ಅಶ್ವಿನ್‌ ಕೂಡ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ವಿಜಯ್ ಶಂಕರ್, ಮೊಹಮ್ಮದ್ ಶಮಿ, ಶಿಖರ್ ಧವನ್ ಮೊದಲಾದವರಿಗೆ ಸ್ಥಾನ ಲಭಿಸಿದೆ.

'ಅಜ್ಞಾತವಾಸ' ಮುಗಿಸಿ ವಿಶ್ವಕಪ್ ತಂಡಕ್ಕೆ ಮರಳಿದ ಸ್ಮಿತ್, ವಾರ್ನರ್'ಅಜ್ಞಾತವಾಸ' ಮುಗಿಸಿ ವಿಶ್ವಕಪ್ ತಂಡಕ್ಕೆ ಮರಳಿದ ಸ್ಮಿತ್, ವಾರ್ನರ್

ಮೇ 30ರಿಂದ ಜುಲೈ 14ರ ವರೆಗೆ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಕಾದಾಡುತ್ತಿವೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡ ಸೆಣಸಾಡಲಿವೆ. ಆರಂಭಿಕ ಪಂದ್ಯ ಮೇ 30ರಂದು ಲಂಡನ್‌ನ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯಲಿದೆ.

ಆರಂಭಿಕರಾಗಿ ರೋಹಿತ್-ಧವನ್

ಆರಂಭಿಕರಾಗಿ ರೋಹಿತ್-ಧವನ್

ವಿಶ್ವಕಪ್‌ಗಾಗಿ ಪ್ರಕಟಿಸಿರುವ ಭಾರತ ತಂಡದಲ್ಲಿ ಆರಂಭಿಕರಾಗಿ ಎಂದಿನಂತೆ ರೋಹಿತ್ ಶರ್ಮಾ, ಶಿಖರ್ ಧವನ್ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಬಾರಿಯೂ ಅನುಭವಿ ಆಟಗಾರರಿಗೆ ಬಿಸಿಸಿಐ ಅವಕಾಶ ನೀಡಿರುವುದು ಕಂಡು ಬಂದಿದೆ.

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕಕ್ಕೆ ಸೂಕ್ತವೆನಿಸುವ ಆಟಗಾರರಲ್ಲಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಎಂಎಸ್ ಧೋನಿ, ವಿಜಯ್ ಶಂಕರ್, ಕೇದಾರ್ ಜಾಧವ್ ಇದ್ದಾರೆ. ರಿಶಬ್ ಪಂತ್ ಈ ಬಾರಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದರೆ ವಿಜಯ್ ಶಂಕರ್‌ಗೆ ತಂಡದಲ್ಲಿ ಸ್ಥಾನ ಲಭಿಸಿದೆ.

ಆಲ್ ರೌಂಡರ್ ವಿಭಾಗ

ಆಲ್ ರೌಂಡರ್ ವಿಭಾಗ

2019ರ ವಿಶ್ವಕಪ್‌ಗಾಗಿ ಬಿಸಿಸಿಐ ಈ ಸಾರಿ ಪ್ರಕಟಿಸಿರುವ ತಂಡ ಬಲಿಷ್ಠವಾಗಿಯೇ ಇದೆ. ತಂಡದಲ್ಲಿ ವಿಜಯ್ ಶಂಕರ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಆರ್ ರೌಂಡರ್ ವಿಭಾಗವನ್ನು ಬಲ ಗೊಳಿಸಿದ್ದಾರೆ. ಆದರೆ ಹಾರ್ದಿಕ್ ಸಹೋದರ ಕೃನಾಲ್‌ಗೆ ತಂಡಲ್ಲಿ ಸ್ಥಾನ ಲಭಿಸಿಲ್ಲ.

ಬೌಲರ್‌ಗಳ ಬಲ

ಬೌಲರ್‌ಗಳ ಬಲ

ಪ್ರಕಟಿತ 15 ಆಟಗಾರರ ಭಾರತ ತಂಡದಲ್ಲಿ ಕುಲದೀಪ್ ಯಾದವ್, ಭುವನೇಶ್ವರ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಯುಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ ಬೌಲಿಂಗ್ ವಿಭಾಗದ ಬಲವಾಗಿ ನಿಲ್ಲಲಿದ್ದಾರೆ. ಇಲ್ಲಿ ಅನುಭವಿ ಸ್ಪಿನ್ನರ್ ಆರ್‌ ಅಶ್ವಿನ್‌ಗೆ ಅವಕಾಶ ಲಭಿಸದಿರುವುದು ಅಚ್ಚರಿ ಮೂಡಿಸಿದೆ.

ವಿಶ್ವಕಪ್‌ಗಾಗಿ ಭಾರತ ತಂಡ

ವಿಶ್ವಕಪ್‌ಗಾಗಿ ಭಾರತ ತಂಡ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ವಿಜಯ್ ಶಂಕರ್, ಎಂಎಸ್ ಧೋನಿ (ವಿ.ಕೆ), ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ.

Story first published: Monday, April 15, 2019, 16:34 [IST]
Other articles published on Apr 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X