ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿಯದ್ದು ಭಾರೀ ಜಿದ್ದಾ-ಜಿದ್ದಿಯ ವಿಶ್ವಕಪ್: ನಾಯಕ ವಿರಾಟ್ ಕೊಹ್ಲಿ

ICC World Cup 2019: This will be the most challenging World cup

ನವದೆಹಲಿ, ಮೇ 22: ರೌಂಡ್ ರಾಬಿನ್ ಮಾದರಿಯಲ್ಲಿ ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿರುವ ಈ ಬಾರಿಯ ವಿಶ್ವಕಪ್ ಅತ್ಯಂತ ಕಠಿಣ ಸವಾಲಿನ ವಿಶ್ವಕಪ್ ಅನ್ನಿಸಲಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಮೊದಲ ಎಸೆತದಿಂದಲೂ ಎಚ್ಚರದಿಂದ ಆಡಿದ್ದಲ್ಲಿ ತಂಡ ಗೆಲ್ಲಲು ಸಾಧ್ಯವಿದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಏಕದಿನ ವಿಶ್ವಕಪ್ ಇತಿಹಾಸ ಪುಟಗಳಲ್ಲಿ ಇಂದಿಗೂ ಮುರಿಯದ ದಾಖಲೆಗಳು!ಏಕದಿನ ವಿಶ್ವಕಪ್ ಇತಿಹಾಸ ಪುಟಗಳಲ್ಲಿ ಇಂದಿಗೂ ಮುರಿಯದ ದಾಖಲೆಗಳು!

'ನನಗನ್ನಿಸಿದಂತೆ ನಾನು ಈವರೆಗೆ ಭಾಗವಹಿಸಿದ್ದರಲ್ಲೇ ಅತ್ಯಂತ ಕಠಿಣ ವಿಶ್ವಕಪ್ ಇದು ಅನ್ನಿಸಲಿದೆ. ಅಫ್ಘಾನಿಸ್ತಾನ ತಂಡವನ್ನೇ ನೀವು ತೆಗೆದುಕೊಂಡರೆ, 2015ರ ಅಫ್ಘಾನಿಸ್ತಾನ ತಂಡಕ್ಕೂ ಈಗಿನ ಅಫ್ಘಾನ್ ತಂಡಕ್ಕೂ ತುಂಬಾ ವ್ಯತ್ಯಾಸವಿದೆ' ಎಂದು ಪ್ರತಿಷ್ಠಿತ ಟೂರ್ನಿ ಸಲುವಾಗಿ ಇಂಗ್ಲೆಂಡ್‌ಗೆ ಹೊರಡುವ ಮುನ್ನ ಮಾತನಾಡುತ್ತ ಕೊಹ್ಲಿ ನುಡಿದರು.

ಭಾರತ್ ಪೇ 11 ಶಾಪ್ ಕೀಪರ್ ಗಳಿಗೆ ಇಂಗ್ಲೆಂಡ್ ಪ್ರವಾಸ ಬಹುಮಾನಭಾರತ್ ಪೇ 11 ಶಾಪ್ ಕೀಪರ್ ಗಳಿಗೆ ಇಂಗ್ಲೆಂಡ್ ಪ್ರವಾಸ ಬಹುಮಾನ

ಕೊಹ್ಲಿ ಈವರೆಗೆ 2 ವಿಶ್ವಕಪ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಮೇ 30ರಿಂದ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಆರಂಭಗೊಳ್ಳುತ್ತಿರುವ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೂ ಮುನ್ನ ಎಲ್ಲಾ ತಂಡಗಳೂ ಪರಸ್ಪರ ಒಂದು ಸಾರಿ ಮುಖಾಮುಖಿಯಾಗುತ್ತಿವೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್‌ನಂತ ತಂಡಗಳು ಭಾರತಕ್ಕೆ ಕಠಿಣ ಸವಾಲೊಡ್ಡುವ ನಿರೀಕ್ಷೆಯಿದೆ.

'ಮುಖ್ಯ ವಿಚಾರವೆಂದರೆ ಗೆಲ್ಲಲೇ ಬೇಕಾದ ಪ್ರಮುಖ ಪಂದ್ಯವಿದ್ದಾಗಲೂ ಅದರ ಮುನ್ನಾದಿನವೇ ಏನಾಗಬಹುದು ಯೋಚಿಸೋಕ್ಕಾಗಲ್ಲ. ಬದಲಿಗೆ ಅಲ್ಲಿ ಸವಾಲು ಸ್ವೀಕರಿಸಬೇಕು. ನಮ್ಮನಮ್ಮ ಉತ್ತಮ ಪ್ರದರ್ಶನ ನೀಡಬೇಕು. ನಾವಂತೂ ಶೇ.100ರಷ್ಟು ಗೆಲುವಿನ ವಿಶ್ವಾಸದೊಂದಿಗೆ ಮೈದಾನಕ್ಕಿಳಿಯುತ್ತಿದ್ದೇವೆ' ಎಂದು ಕೊಹ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಸ್ಮಿತ್-ವಾರ್ನರ್‌ಗಾಗಿ ಅಭಿಮಾನಿಗಳಲ್ಲಿ ಮನಮುಟ್ಟಿ ಮನವಿ ಮಾಡಿದ ಅಲಿಸ್ಮಿತ್-ವಾರ್ನರ್‌ಗಾಗಿ ಅಭಿಮಾನಿಗಳಲ್ಲಿ ಮನಮುಟ್ಟಿ ಮನವಿ ಮಾಡಿದ ಅಲಿ

ಕ್ರೀಡೆಯಲ್ಲಂತೂ ಗೆಲ್ಲೋನಿಗಿಂತ ಸೋತೋನೆ ಆಟದ ಅಮೂಲ್ಯ ಪಾಠಗಳನ್ನು ಹೆಚ್ಚು ಕಲಿತುಕೊಳ್ಳೋದು, ಗೆಲುವಿನ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳೋದು. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನ ಆರಂಭಿಕ ಆರು ಪಂದ್ಯಗಳಲ್ಲಿ ಆರ್‌ಸಿಬಿ ಸೋತು ಮುಖಭಂಗ ಅನುಭವಿಸಿದ್ದರಿಂದ, ವಿಶ್ವಕಪ್‌ನಲ್ಲಿ ನಾಯಕ ಕೊಹ್ಲಿ ಆರಂಭದಿಂದಲೂ ತಂಡದ ಪರ ಎಚ್ಚರಿಕೆ ಆಟ ಪ್ರದರ್ಶಿಸೋದನ್ನು ನಿರೀಕ್ಷಿಸಬಹುದಾಗಿದೆ.

Story first published: Wednesday, May 22, 2019, 11:01 [IST]
Other articles published on May 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X