ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಕೇಸರಿ ಜೆರ್ಸಿಯೊಂದಿಗೆ ಮೈದಾನಕ್ಕಿಳಿಯಲಿದೆ ಟೀಮ್ ಇಂಡಿಯಾ!

ICC World Cup 2019 : ಬದಲಾಯ್ತು ಟೀಂ ಇಂಡಿಯಾ ಜೆರ್ಸಿ..? | Oneindia Kannada
ICC World Cup 2019: Virat Kohli and his men to sport orange jerseys

ನವದೆಹಲಿ, ಜೂನ್ 4: ಈ ಬಾರಿಯ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ಕೇಸರಿ ಬಣ್ಣದ ಜೆರ್ಸಿ ಧರಿಸಿ ಪಂದ್ಯವನ್ನಾಡಲಿದೆ ಎಂಬ ಸುದ್ದಿ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿತ್ತು. ಕ್ರಿಕೆಟ್ ಪ್ರೇಮಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸುದ್ದಿ ಹಬ್ಬಿಸಿದ್ದರು. ಆದರೆ ಟೀಮ್ ಇಂಡಿಯಾ ಈ ವಿಶ್ವಕಪ್‌ನಲ್ಲಿ ಕೇಸರಿ ಬಣ್ಣದ ಜೆರ್ಸಿ ಧರಿಸಿ ಮೈದಾನಕ್ಕಿಳಿಯುವ ವಿಚಾರ ಅಧಿಕೃತವಾಗಿ ಘೋಷಿಸಲ್ಪಟ್ಟಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಇಂಡೋ ಏಷ್ಯನ್ ನ್ಯೂಸ್ ಸರ್ವೀಸಸ್ (ಐಎಎನ್‌ಎಸ್) ಇತ್ತೀಚಿನ ಸುದ್ದಿಯಲ್ಲಿ ಈ ವಿಚಾರವನ್ನು ತಿಳಿಸಿದೆ. ಐಎಎನ್‌ಎಸ್ ಪ್ರಕಟಿಸಿರುವ ಸುದ್ದಿಯ ಪ್ರಕಾರ ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಧರಿಸಲಿರುವ ಬದಲಿ ಜೆರ್ಸಿ ಗಾಢ ಕೇಸರಿ ಬಣ್ಣದಿಂದ ಕೂಡಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿನ ಪ್ರಿಂಟ್‌ ಗಾಢ ನೀಲಿ ಬಣ್ಣದಲ್ಲಿ ಇರಲಿವೆ.

ಭಾರತ ತಂಡ ಈ ನೂತನ ಜೆರ್ಸಿಯನ್ನು ವಿಶ್ವಕಪ್‌ನ ಎರಡು ಪಂದ್ಯಗಳಿಗೆ ಮಾತ್ರ ಧರಿಸಲಿದೆ. ಜೂನ್ 22ರಂದು ಅಫ್ಘಾನಿಸ್ತಾನ ವಿರುದ್ಧ ಮತ್ತು ಜೂನ್ 30ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಬಳಗ ಕೇಸರಿ ಬಣ್ಣದ ಜೆರ್ಸಿಯೊಂದಿಗೆ ಮಿಂಚಲಿದೆ. ಜುಲೈ 6ರಂದು ಶ್ರೀಲಂಕಾ ಸವಾಲು ಸ್ವೀಕರಿಸುವ ಭಾರತ, ಆ ದಿನದಿಂದ ಮತ್ತೆಲ್ಲಾ ಪಂದ್ಯಗಳಿಗೂ ಮಾಮೂಲಿ ನೀಲಿ ಜೆರ್ಸಿ ತೊಡಲಿದೆ.

ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ತೊಡಲಿರುವ ಹೊಸ ಜರ್ಸಿ ಹೇಗಿದೆ ಗೊತ್ತಾವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ತೊಡಲಿರುವ ಹೊಸ ಜರ್ಸಿ ಹೇಗಿದೆ ಗೊತ್ತಾ

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಹೊಸ ನಿಯಮದ ಪ್ರಕಾರ ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಎರಡು ರೀತಿಯ ಜೆರ್ಸಿ ಧರಿಸಲೇಬೇಕು. ಹೀಗಾಗಿ ಎಲ್ಲಾ 9 ತಂಡಗಳು ಬದಲಿ ಜೆರ್ಸಿಗಳೊಂದಿಗೆ ಮೈದಾನಕ್ಕಿಳಿಯಲಿವೆ. ಪಾಕಿಸ್ತಾನ ತಂಡ ಮಾತ್ರ ಎಂದಿನ ಸಾಂಪ್ರದಾಯಿಕ ಜೆರ್ಸಿಯನ್ನೇ ಟೂರ್ನಿಯುದ್ಧಕ್ಕೂ ಧರಿಸಲು ಅನುಮತಿ ಪಡೆದುಕೊಂಡಿದೆ.

Story first published: Tuesday, June 4, 2019, 12:26 [IST]
Other articles published on Jun 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X