ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಿಶ್ವಕಪ್ 2019: ಮತ್ತಷ್ಟು ದಾಖಲೆ ಬರೆಯಲು ವಿರಾಟ್ ಕೊಹ್ಲಿ ಸಜ್ಜು

ICC World Cup 2019: Virat Kohli on the cusp of multiple WC records

ಬರ್ಮಿಂಗ್‌ಹ್ಯಾಮ್, ಜೂನ್ 30: ವಿಶ್ವಕಪ್ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಎಜ್ ಬಾಸ್ಟನ್‌ನಲ್ಲಿ ಭಾನುವಾರ (ಜೂನ್ 30) ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದಿಷ್ಟು ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಗೆ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ದಾಖಲೆ ಸರಿದೂಗಿಸಲು ಅವಕಾಶವಿದೆ. ಆಸೀಸ್ ಮಾಜಿ ನಾಯಕ ಸ್ಮಿತ್ ವಿಶ್ವಕಪ್‌ನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸತತ ಅರ್ಧಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.

ಭಾರತ vs ಇಂಗ್ಲೆಂಡ್‌, ಜೂನ್ 30, Live ಸ್ಕೋರ್‌ಕಾರ್ಡ್

1
43681

ಐಸಿಸಿ ವಿಶ್ವಕಪ್‌ 2019ರ ಆರಂಭದಲ್ಲಿ ಕೊಂಚ ನಿರಾಶೆ ಅನುಭವಿಸಿದ ಕೊಹ್ಲಿ ಅನಂತರ ಸತತ ನಾಲ್ಕು ಇನ್ನಿಂಗ್ಸ್‌ಗಳಲ್ಲೂ ಅರ್ಧಶತಕದಾಟ ಆಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧ 72, ಅಫ್ಘಾನಿಸ್ತಾನ ಎದುರು 67, ಪಾಕಿಸ್ತಾನ ವಿರುದ್ಧ 77, ಆಸ್ಟ್ರೇಲಿಯಾ ವಿರುದ್ಧ 82 ರನ್ ಬಾರಿಸಿದ್ದರು.

ಆಸೀಸ್‌ ವಿರುದ್ಧದ ಸೋಲಿಗೆ ಕಾರಣ ಕೊಟ್ಟ ಕೇನ್‌ ವಿಲಿಯಮ್ಸನ್‌!ಆಸೀಸ್‌ ವಿರುದ್ಧದ ಸೋಲಿಗೆ ಕಾರಣ ಕೊಟ್ಟ ಕೇನ್‌ ವಿಲಿಯಮ್ಸನ್‌!

ಕೊಹ್ಲಿ ಸದ್ಯ ಈ ವಿಶ್ವಕಪ್‌ನಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ. ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್ಮನ್ ಆ್ಯರನ್ ಫಿಂಚ್ ಮತ್ತು ಬಾಂಗ್ಲಾದೇಶ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಕೂಡ ಸತತ 4 ಅರ್ಧ ಶತಕಗಳ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತ ಬೆಂಬಲಿಸಲು ಪಾಕ್ ಅಭಿಮಾನಿಗಳಿಗೆ ಅಖ್ತರ್ ಕರೆ!ಇಂಗ್ಲೆಂಡ್ ವಿರುದ್ಧ ಭಾರತ ಬೆಂಬಲಿಸಲು ಪಾಕ್ ಅಭಿಮಾನಿಗಳಿಗೆ ಅಖ್ತರ್ ಕರೆ!

ಒಂದು ವೇಳೆ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾದರೆ ಸ್ಟೀವ್ ಸ್ಮಿತ್ ಬಳಿಕ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಸತತ 5 ಅರ್ಧಶತಕಗಳನ್ನು ದಾಖಲಿಸಿದ ಎರಡನೇ ಆಟಗಾರಾಗಿ ಗುರುತಿಸಿಕೊಳ್ಳಲಿದ್ದಾರೆ.

ಕಿತ್ತಳೆ ಜರ್ಸಿ- ಇದೇನು ಪೆಟ್ರೋಲ್ ಪಂಪ್ ವಾಲ ಯೂನಿಫಾರ್ಮಾ?ಕಿತ್ತಳೆ ಜರ್ಸಿ- ಇದೇನು ಪೆಟ್ರೋಲ್ ಪಂಪ್ ವಾಲ ಯೂನಿಫಾರ್ಮಾ?

ಅಲ್ಲದೆ ವಿಶ್ವಕಪ್‌ನಲ್ಲಿ ಸತತ ಐದು 50+ ರನ್ ದಾಖಲಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಲಿದ್ದಾರೆ. ವಿಶ್ವಕಪ್‌ನಲ್ಲಿ ತಂಡದ ನಾಯಕತ್ವ ವಹಿಸಿ ಸತತ 4 ಸಾರಿ 50+ ರನ್ ಬಾರಿಸಿದ ದಾಖಲೆ ಭಾರತ ಅಝರುದ್ದೀನ್ ಹೆಸರಿನಲ್ಲಿದೆ. 1992ರಲ್ಲಿ ಅಝರ್ ಈ ಸಾಧನೆ ಮಾಡಿದ್ದರು.

Story first published: Sunday, June 30, 2019, 16:27 [IST]
Other articles published on Jun 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X