ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಝಂಪಾ ಮೇಲೆ ಚೆಂಡು ವಿರೂಪ ಆರೋಪ: ತುಟಿ ಬಿಚ್ಚಿದ ಆ್ಯರನ್ ಫಿಂಚ್

ICC World Cup: Aaron Finch dismisses ball-tampering claims on Adam Zampa

ಲಂಡನ್, ಜೂನ್ 10: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಆದಂ ಝಂಪಾ ಚೆಂಡು ವಿರೂಪದಲ್ಲಿ ಪಾಲ್ಗೊಂಡ ಅನುಮಾನಕ್ಕೆ ಕಾರಣರಾಗಿದ್ದರು. ಆದರೆ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್, ಝಂಪಾ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಭಾನುವಾರ (ಜೂನ್ 9) ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಭಾರತ vs ಆಸ್ಟ್ರೇಲಿಯಾ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಝಂಪಾ, ಕೈಯಲ್ಲಿ ಚೆಂಡು ಹಿಡಿದು, ಪದೆ ಪದೆ ಕಿಸೆಗೆ ಕೈ ಹಾಕಿದ್ದರು. ಅವರ ಕೈಯಲ್ಲಿ ಏನೋ ವಸ್ತು ಇದ್ದಿದ್ದೂ ವಿಡಿಯೋದಲ್ಲಿ ಕಾಣಿಸಿತ್ತು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಕೂಡ.

ಚೆಂಡು ವಿರೂಪ ಮಾಡಿರುವಂತೆ ಅನುಮಾನ ಮೂಡಿಸಿದ್ದ ಆದಂ ಝಂಪಾ ಬಗ್ಗೆ ಆ್ಯರನ್ ಫಿಂಚ್ ಸ್ಪಷ್ಟನೆ ನೀಡಿದ್ದಾರೆ.

ಅದು ಹ್ಯಾಂಡ್ ವಾರ್ಮರ್

ಅದು ಹ್ಯಾಂಡ್ ವಾರ್ಮರ್

ಈ ಬಗ್ಗೆ ಕ್ರಿಕೆಟ್ ಡಾಟ್ ಕಾಮ್ ಎಯು ಜೊತೆ ಮಾತನಾಡಿದ ಫಿಂಚ್, 'ಆ ಫೋಟೋವನ್ನು ನಾನೂ ನೋಡಿದೆ. ಆದರೆ ನನಗೆ ಗೊತ್ತಿದ್ದಹಾಗೆ ಝಂಪಾ ಕೈಲಿದ್ದಿದು ಹ್ಯಾಂಡ್‌ವಾರ್ಮರ್. ಆತ ಹ್ಯಾಂಡ್ ವಾರ್ಮರನ್ನು ಏಲ್ಲಾ ಪಂದ್ಯಗಳಲ್ಲೂ ಬಳಸಿಕೊಳ್ಳುತ್ತಾನೆ' ಎಂದಿದ್ದಾರೆ.

ಅಂಥದ್ದೇನೂ ಇಲ್ಲ

ಅಂಥದ್ದೇನೂ ಇಲ್ಲ

ಮಾತು ಮುಂದುವರೆಸಿದ ಫಿಂಚ್, 'ಚೆಂಡು ವಿರೂಪದಂತ ವಿಚಾರವೇನೂ ಇಲ್ಲ ಎಂದು ನನ್ನ ಭಾವನೆ. ಈ ಬಗ್ಗೆ ಹೆಚ್ಚಿಗೆ ಮಾತನಾಡಲಾರೆ. ಆದರೆ ಝಂಪಾ ಎಲ್ಲಾ ಪಂದ್ಯಗಳಲ್ಲೂ ಹ್ಯಾಂಡ್ ವಾರ್ಮರ್ ಬಳಸಿಕೊಳ್ಳುವುದಂತೂ ನಿಜ' ಎಂದು ವಿವರಿಸಿದರು.

6 ಓವರ್‌ಗೆ 50 ರನ್

6 ಓವರ್‌ಗೆ 50 ರನ್

ಝಂಪಾ ಈ ಪಂದ್ಯದಲ್ಲಿ ಒಟ್ಟು 6 ಓವರ್‌ ಎಸೆದು 50 ರನ್ ನೀಡಿದ್ದರು. ಆದರೆ ಅವರಿಗೆ ಒಂದೂ ವಿಕೆಟ್ ಲಭಿಸಿರಲಿಲ್ಲ. ಪಂದ್ಯದಲ್ಲಿ ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 36 ರನ್ ಜಯದೊಂದಿಗೆ ವಿಶ್ವಕಪ್‌ನಲ್ಲಿ 2ನೇ ಗೆಲುವು ದಾಖಲಿಸಿತು.

ಸ್ಯಾಂಡ್ ಪೇಪರ್

ಸ್ಯಾಂಡ್ ಪೇಪರ್

ಝಂಪಾ ಮೇಲೆ ಬಾಲ್ ಟ್ಯಾಂಪರಿಂಗ್ ಅನುಮಾನ ಮೂಡಲು ಕಾರಣವಾಗಿದ್ದು, ಫಿಂಚ್ ಹೇಳಿದ್ದ ಅದೇ ಹ್ಯಾಂಡ್ ವಾರ್ಮರ್. ಝಂಪಾ ಕಿಸೆಗೆ ಕೈ ಹಾಕಿ ಪದೇ ಪದೇ ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದ ಹ್ಯಾಂಡ್ ವಾರ್ಮರ್, ಮೇಲ್ನೋಟಕ್ಕೆ ಸ್ಯಾಂಡ್ ಪೇಪರ್‌ನಂತೆ ಕಾಣಿಸಿತ್ತು. ಹೀಗಾಗಿ ಝಂಪಾ ಚೆಂಡು ವಿರೂಪಗೊಳಿಸಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ತಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಅಂದ್ಹಾಗೆ ಬಾಲ್ ಟ್ಯಾಂಪರಿಂದ ಮಾಡಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷದ ನಿಷೇಧಕ್ಕೆ ಗುರಿಯಾಗಿದ್ದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅಂದು ಸ್ಯಾಂಡ್ ಪೇಪರ್ ಬಳಸಿದ್ದರು.

Story first published: Monday, June 10, 2019, 13:28 [IST]
Other articles published on Jun 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X