ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಭಾರತದೆದುರು ಪಂದ್ಯವನ್ನಾಡಲು ಕಾತರರಾಗಿದ್ದಾರೆ ಅಲೆಕ್ಸ್ ಕ್ಯಾರಿ

ICC World Cup 2019 : ಧೋನಿಯನ್ನು ಫಾಲೋ ಮಾಡುತ್ತಿದ್ದೇನೆ ಎಂದ ಆಸಿಸ್ ಕ್ರಿಕೆಟಿಗ..? | Oneindia Kannada
ICC World Cup: Australia wicket-keeper Alex Carey looking to learn from ‘calm’ Dhoni

ಲಂಡನ್, ಜೂನ್ 7: ಚೊಚ್ಚಲ ವಿಶ್ವಕಪ್‌ನಲ್ಲಿ ಆಡುತ್ತಿರುವುದರಿಂದ ವೆಸ್ಟ್ ಇಂಡೀಸ್ ಎದುರು ಸಹಜವಾಗೇ ಕೊಂಚ ಮಜುಗರ ಅನ್ನಿಸಿತ್ತು. ಆದರೆ ಈಗ ಭಾರತಕ್ಕೆ ಸವಾಲೆಸೆಯಲು ಯಾವುದೇ ಅಂಜಿಕೆಯಿಲ್ಲ. ಭಾರತದೆದುರು ಆಡಲು ಕಾತರನಾಗಿದ್ದೇನೆ ಎಂದು ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.

ಭಾರತ vs ಪಾಕಿಸ್ತಾನ, ಪಾಕಿಸ್ತಾನ vs ಶ್ರೀಲಂಕಾ ಕುತೂಹಲಕಾರಿ ಇತಿಹಾಸ!ಭಾರತ vs ಪಾಕಿಸ್ತಾನ, ಪಾಕಿಸ್ತಾನ vs ಶ್ರೀಲಂಕಾ ಕುತೂಹಲಕಾರಿ ಇತಿಹಾಸ!

ನಾಟಿಂಗ್ಹ್ಯಾಮ್ ನಲ್ಲಿ ಗುರುವಾರ (ಜೂನ್ 6) ನಡೆದಿದ್ದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕ್ಯಾರಿ 55 ಎಸೆತಗಳಿಗೆ 45 ರನ್, ನೇಥನ್ ಕೌಲ್ಟರ್-ನೈಲ್ 60 ಎಸೆತಗಳಿಗೆ 92 ರನ್ ಪೇರಿಸಿದ್ದರಿಂದ ಆಸೀಸ್ ಸೋಲೋ ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಪಂದ್ಯದ ಬಳಿಕ ಕ್ಯಾರಿ ಆತ್ಮವಿಶ್ವಾಸದ ಮಾತುಗಳನ್ನಾಡಿದರು.

'ಭಾರತ vs ಆಸ್ಟ್ರೇಲಿಯಾ ಪಂದ್ಯದಲ್ಲಿ ಧೋನಿಯನ್ನು ಗಮನಿಸಿದ್ದೇನೆ. ಅವರು ತುಂಬಾ ಶಾಂತವಾಗಿರುತ್ತಾರೆ. ಈ ಶಾಂತತೆಯೊಂದಿಗೆ ಧೋನಿ ಆಟವನ್ನು ಮುಗಿಸಲು ಅವಕಾಶ ಮಾಡಿಕೊಡುತ್ತಾರೆ. ಧೋನಿಯ ಶಾಂತ ಸ್ವಭಾವವನ್ನು ನಾನೂ ಕಲಿಯುತ್ತಿದ್ದೇನೆ' ಎಂದು ಐಸಿಸಿ ಅಧಿಕೃತ ವೆಬ್‌ಸೈಟ್‌ವೊಂದರ ಜೊತೆ ಮಾತನಾಡುತ್ತ ಅಲೆಕ್ಸ್ ಹೇಳಿದ್ದಾರೆ.

ಅಶಿಸ್ತು ಪ್ರದರ್ಶಿಸಿದ ಲೆಗ್‌ ಸ್ಪಿನ್ನರ್‌ ಝಾಂಪಗೆ ಎಚ್ಚರಿಸಿದ ಐಸಿಸಿ!ಅಶಿಸ್ತು ಪ್ರದರ್ಶಿಸಿದ ಲೆಗ್‌ ಸ್ಪಿನ್ನರ್‌ ಝಾಂಪಗೆ ಎಚ್ಚರಿಸಿದ ಐಸಿಸಿ!

ಈ ವಿಶ್ವಕಪ್‌ನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಅಂದರೆ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಸೀಸ್ ಜಯ ದಾಖಲಿಸಿ ಗೆಲುವಿನ ಹುಮ್ಮಸ್ಸಿನಲ್ಲಿದೆ. ಜೂನ್ 9ರ ಭಾನುವಾರ ಭಾರತ ಮತ್ತು ಆಸೀಸ್ ತಂಡಗಳು 14ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

Story first published: Friday, June 7, 2019, 19:00 [IST]
Other articles published on Jun 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X