ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತಕ್ಕಾಗಿ ವಿಶೇಷ ವಾರ್ಮ್ ಅಪ್ ಕೌಶಲ ವಿವರಿಸಿದ ಚಾಹಲ್: ವಿಡಿಯೋ

ICC World Cup: Chahal explains unique practice drill for Team India

ಲಂಡನ್, ಮೇ 24: ಲಂಡನ್ ತಲುಪಿರುವ ಭಾರತ ಕ್ರಿಕೆಟ್ ತಂಡ ಐಸಿಸಿ ವಿಶ್ವಕಪ್‌ಗಾಗಿ ಗುರುವಾರ (ಮೇ 23) ಓವಲ್‌ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಅಭ್ಯಾಸ ನಡೆಸಿತು. ಫುಟ್ಬಾಲ್ ಜೊತೆ ಸಾಮಾನ್ಯ ವಾರ್ಮ್ ಅಪ್ ನಡೆಸಿದ ಬಳಿಕ ಟೀಮ್ ಇಂಡಿಯಾ ವಿಶೇಷ ವಾರ್ಮ್ ಅಪ್ ಕೌಶಲದಲ್ಲಿ ತೊಡಗಿತು.

ಬುಮ್ರಾ ಬೌಲಿಂಗ್‌ನಲ್ಲಿ ರನ್‌ ಗಳಿಸುವ ತಂತ್ರ ಬಿಚ್ಚಿಟ್ಟ ಬ್ರಿಯಾನ್‌ ಲಾರಾಬುಮ್ರಾ ಬೌಲಿಂಗ್‌ನಲ್ಲಿ ರನ್‌ ಗಳಿಸುವ ತಂತ್ರ ಬಿಚ್ಚಿಟ್ಟ ಬ್ರಿಯಾನ್‌ ಲಾರಾ

ಸಾಮಾನ್ಯ ವಾರ್ಮ್ ಅಪ್‌ಗಿಂತಲೂ ಕೊಂಚ ಭಿನ್ನವಾದ, ಫನ್ನಿ ರೀತಿಯ ವಾರ್ಮ್ ಅಪ್ ಕೌಶಲವಿದು. ಪ್ರತೀ ಕ್ರಿಕೆಟ್ ಆಟಗಾರರಲ್ಲೂ ಒಂದೊಂದು ಬಿಗ್‌ಗಳಿರುತ್ತವೆ (ಬಿಬ್ ಅಂದರೆ ಅಭ್ಯಾಸದ ವೇಳೆ ಆಟಗಾರರು ಧರಿಸೋ ಬನಿಯಾನ್ ರೀತಿಯ ಬಟ್ಟೆ). ಅವನ್ನು ಒಬ್ಬರಿಂದೊಬ್ಬರು ಕಸಿದುಕೊಳ್ಳೋ ಆಟವಿದು.

ಬಿಬ್ ಕ್ಯಾಚಿಂಗ್ ಆಟದ ನಿಯಮವನ್ನು ಸ್ಪಿನ್ನರ್ ಯುಜುವೇಂದ್ರ ಚಾಹಲ್ ವಿವರಿಸಿದ್ದಾರೆ. ಓವಲ್‌ನಲ್ಲಿ ಗುರುವಾರ ಟೀಮ್ ಇಂಡಿಯಾ ನಡೆಸಿದ ಈ ಮೊದಲ ಅಭ್ಯಾಸದ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ.

ಆಲ್ ರೌಂಡರ್‌ಗಳ ಆಟ ಭಾರತದ ವಿಶ್ವಕಪ್ ಭವಿಷ್ಯ ನಿರ್ಧರಿಸಲಿದೆಯಾ?!ಆಲ್ ರೌಂಡರ್‌ಗಳ ಆಟ ಭಾರತದ ವಿಶ್ವಕಪ್ ಭವಿಷ್ಯ ನಿರ್ಧರಿಸಲಿದೆಯಾ?!

2019ರ ವಿಶ್ವಕಪ್ ಪಂದ್ಯಾಟ ಮೇ 30ರಿಂದ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣಸಾಡುತ್ತಿವೆ. ಟೂರ್ನಿ ಆರಂಭಕ್ಕೂ ಮುನ್ನ ವಾರ್ಮ್ ಅಪ್ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಬಳಗ ನ್ಯೂಜಿಲ್ಯಾಂಡ್ ಜೊತೆ ಮೇ 25ರಂದು ಮೈದಾನಕ್ಕಿಳಿಯಲಿದೆ.

Story first published: Friday, May 24, 2019, 15:27 [IST]
Other articles published on May 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X