ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಸಚಿನ್ ಪ್ರಕಾರ ಧೋನಿಗೆ ಈ ಬ್ಯಾಟಿಂಗ್ ಕ್ರಮಾಂಕ ಸೂಕ್ತವಂತೆ

ICC World Cup: Dhoni best suited at No 5 for India, says Tendulkar

ಮುಂಬೈ, ಮೇ 23: ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡ ಅನುಭವಿ ಬ್ಯಾಟ್ಸ್ಮನನ್ನು ಮಧ್ಯಮ ಕ್ರಮಾಂಕದಲ್ಲಿ ಕಳುಹಿಸಬೇಕು. ಹೀಗಾಗಿ ಎಂಎಸ್ ಧೋನಿ 5ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಹೆಚ್ಚು ಸೂಕ್ತ ಎಂದು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್‌ ಹೇಳಿದ್ದಾರೆ.

ಐಸಿಸಿ ಕ್ರಿಕೆಟ್ ವಿಶ್ವಕಪ್‌ 2019: ಲಂಡನ್ ತಲುಪಿದ ವಿರಾಟ್ ಕೊಹ್ಲಿ ಬಳಗಐಸಿಸಿ ಕ್ರಿಕೆಟ್ ವಿಶ್ವಕಪ್‌ 2019: ಲಂಡನ್ ತಲುಪಿದ ವಿರಾಟ್ ಕೊಹ್ಲಿ ಬಳಗ

ಟೀಮ್ ಇಂಡಿಯಾದ ಆರಂಭಿಕ ಆಟಗಾರರ ಸ್ಥಾನದಲ್ಲಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದರೆ, ನಾಯಕ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ವಿಜಯ್ ಶಂಕರ್‌, ಧೋನಿ 5ನೇ ಕ್ರಮಾಂಕದಲ್ಲೇ ಕಾಣಿಸಿಕೊಂಡಿದ್ದಾರೆ.

ಎರಡನೇ ಬಾರಿಗೆ ಭಾರತ ಏಕದಿನ ವಿಶ್ವಕಪ್ ಗೆದ್ದಾಗ ತಂಡ ಮುನ್ನಡೆಸಿದ್ದ ಧೋನಿ, 341 ಏಕದಿನ ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಧೋನಿಯೇ ಮುಂಚೂನಿಯಲ್ಲಿರುವ ಅನುಭವಿ ಆಟಗಾರ. ಬಹುಶಃ ಇದು ಧೋನಿಯ ಕೊನೆಯ ವಿಶ್ವಕಪ್ ಆಗಲೂಬಹುದು.

ಬಹುಕಾಲದ ಗೆಳತಿ ಪ್ರೀತಿರಾಜ್ ರನ್ನು ವರಿಸಿದ ಹನುಮ ವಿಹಾರಿಬಹುಕಾಲದ ಗೆಳತಿ ಪ್ರೀತಿರಾಜ್ ರನ್ನು ವರಿಸಿದ ಹನುಮ ವಿಹಾರಿ

ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆ ಮಾತನಾಡುತ್ತ ತೆಂಡೂಲ್ಕರ್‌ 'ನನ್ನ ವೈಯಕ್ತಿಕ ಅಭಿಪ್ರಾಯದಂತೆ ಧೋನಿ ಐದನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಹೆಚ್ಚು ಸೂಕ್ತ' ಎಂದು ಅಭಿಪ್ರಾಯಿಸಿದ್ದಾರೆ. 2011ರಲ್ಲಿ ಸಚಿನ್ ಚೊಚ್ಚಲ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಲು ಅವಕಾಶ ಲಭಿಸಿತ್ತು. ಈ ವೇಳೆ ಧೋನಿ ತಂಡದ ನಾಯಕರಾಗಿದ್ದರು.

Story first published: Thursday, May 23, 2019, 11:14 [IST]
Other articles published on May 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X