ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ಯಾಟಿಂಗ್ ಮಾಡುತ್ತಲೇ ಬಾಂಗ್ಲಾಕ್ಕೆ ಧೋನಿ ಫೀಲ್ಡಿಂಗ್ ಸಲಹೆ: ವಿಡಿಯೋ

ICC World Cup: Dhoni sets field for Bangladesh while batting-Watch

ಕಾರ್ಡಿಫ್, ಮೇ 29: ಎಂಎಸ್ ಧೋನಿ ವ್ಯಕ್ತಿತ್ವಕ್ಕೆ ಹೋಲಿಕೆಯಾಗೋ ಆಟಗಾರ ಬಹುಶಃ ಟೀಮ್ ಇಂಡಿಯಾದಲ್ಲಿ ಇಲ್ಲವೇ ಇಲ್ಲ. ತನ್ನ ಭಿನ್ನತೆಯಿಂದಲೇ ಧೋನಿ ಮೈದಾನದಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿರುತ್ತಾರೆ. ಕಾರ್ಡಿಫ್‌ನಲ್ಲಿ ಮಂಗಳವಾರ (ಮೇ 28) ನಡೆದ ಬಾಂಗ್ಲಾ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯ ಧೋನಿ ಇಂಥದ್ದೇ ವಿಚಾರಕ್ಕೆ ಪ್ರೇಕ್ಷಕರ ಮನ ಗೆದ್ದರು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಧೋನಿ ಭರ್ಜರಿ ಶತಕಕ್ಕಾಗಿ ಟೀಮ್ ಇಂಡಿಯಾದಲ್ಲಿ ಮಿಂಚಿದ್ದರು. ಆದರೆ ಧೋನಿ ಆ ಪಂದ್ಯದಲ್ಲಿ ಬ್ಯಾಟಿಂಗ್, ಕೀಪಿಂಗ್, ಫೀಲ್ಡಿಂಗ್‌ನಿಂತ ಹೆಚ್ಚಾಗಿ ಬೇರೊಂದು ವಿಚಾರಕ್ಕೆ ಪ್ರೇಕ್ಷರನ್ನು ಸೆಳೆದಿದ್ದರು. ಅದು ಬ್ಯಾಟಿಂಗ್ ಮಾಡುತ್ತಲೇ ಬಾಂಗ್ಲಾ ತಂಡಕ್ಕೆ ಫೀಲ್ಡಿಂಗ್ ಸಲಹೆ ನೀಡಿದ್ದಕ್ಕಾಗಿ.

ವಿಶ್ವಕಪ್: ರೋಹಿತ್, ಧವನ್ ಫಾರ್ಮ್ ಬಗ್ಗೆ ತುಟಿ ಬಿಚ್ಚಿದ ವಿರಾಟ್ ಕೊಹ್ಲಿ!ವಿಶ್ವಕಪ್: ರೋಹಿತ್, ಧವನ್ ಫಾರ್ಮ್ ಬಗ್ಗೆ ತುಟಿ ಬಿಚ್ಚಿದ ವಿರಾಟ್ ಕೊಹ್ಲಿ!

ಪಂದ್ಯದ 40ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಈ ಜಾಗದಲ್ಲಿ ಫೀಲ್ಡಿಂಗ್ ಸರಿಯಿಲ್ಲ, ಇಲ್ಲಿ ಫೀಲ್ಡರ್ ನಿಲ್ಲಿಸಿ ಎಂದು ಸೂಚಿಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.

ಯುದ್ಧ ಮಾಡುತ್ತಲೇ ಎದುರಾಳಿಗೆ ಯುದ್ಧ ಪಾಠ!

39ನೇ ಓವರ್‌ ಮುಗಿದು 40ನೇ ಓವರ್‌ನ ಮೊದಲ ಎಸೆತ ಎಸೆಯೋಕೂ ಮುನ್ನ ಬೌಲರ್ ಸಬ್ಬೀರ್ ರಹ್ಮಾನ್ ಅವರನ್ನು ಸ್ಟ್ರೈಕ್‌ನಲ್ಲಿದ್ದ ಧೋನಿ ನಿಲ್ಲಿಸಿದ್ದರು. ಕ್ವ್ಯಾರ್-ಲೆಗ್ ಫೀಲ್ಡರ್ ತನ್ನ ಎಡಭಾಗಕ್ಕೆ ಬಂದು ನಿಲ್ಲಲಿ. ಆಗ ಫೀಲ್ಡಿಂಗ್ ಸರಿ ಹೋಗತ್ತೆ ಎಂದು ಸಲಹೆ ನೀಡಿದ್ದರು.

ಧೋನಿ-ರಾಹುಲ್ ಅಬ್ಬರ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ಎಂಎಸ್ ಧೋನಿ ಮತ್ತು ಕೆಎಲ್ ರಾಹುಲ್ ಅವರ ಶತಕದ ಬೆಂಬಲ ದೊರೆಯಿತು. ಧೋನಿ 78 ಎಸೆತಗಳಿಗೆ 113 ರನ್, ರಾಹುಲ್ 99 ಎಸೆತಗಳಿಗೆ 108 ರನ್ ಬಾರಿಸಿದ್ದರಿಂದ ಭಾರತ, ಬಾಂಗ್ಲಾ ವಿರುದ್ಧ 95 ರನ್‌ಗಳ ಜಯ ದಾಖಲಿಸಿತು.

ಧೋನಿ ಆಜ್ಞೆ ಪಾಲಿಸಿದ ಸಬ್ಬೀರ್

ಬ್ಯಾಟಿಂಗ್ ಮಾಡುತ್ತಿದ್ದ ಧೋನಿ, ಎದುರಾಳಿ ಬಾಂಗ್ಲಾ ತಂಡಕ್ಕೆ ಫೀಲ್ಡಿಂಗ್ ಸಲಹೆ ನೀಡಿದರು ಅಂದೆವಲ್ಲ? ಬಾಂಗ್ಲಾ ತಂಡ ಧೋನಿ ಆಜ್ಞೆಯನ್ನು ಪಾಲಿಸಿತ್ತು ಕೂಡ. ಧೋನಿ ಸಲಹೆ ನೀಡುತ್ತಲೇ ಶಬ್ಬೀರ್, ತನ್ನ ತಂಡದ ನಾಯಕ ಮುಶ್ರಾಫೆ ಮೊರ್ತಾಝ ಒಪ್ಪಿಗೆಯನ್ನೂ ಪಡೆಯದೆ ಪೀಲ್ಡರ್‌ಗೆ ಧೋನಿ ಆಜ್ಞೆ ಪಾಲಿಸಲು ಸೂಚಿಸಿದ್ದು ಪಂದ್ಯದ ವೇಳೆ ಕಾಣಸಿಕ್ಕಿತ್ತು.

ಧೋನಿ ಎಲ್ಲರಿಗೂ ಮಾರ್ಗದರ್ಶಕ

ಭಾರತ vs ಬಾಂಗ್ಲಾ ಅಭ್ಯಾಸ ಪಂದ್ಯದಲ್ಲಿ ಧೋನಿ, ಬಾಂಗ್ಲಾಕ್ಕೆ ಫೀಲ್ಡಿಂಗ್ ಸಲಹೆ ನೀಡಿದ್ದನ್ನು ಗಮನಿಸಿದ ಕ್ರಿಕೆಟ್ ಅಭಿಮಾನಿಗಳು ಹಲವಾರು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. 'ಧೋನಿ ಎದುರಾಳಿಗೂ ಸಲಹೆ ನೀಡುತ್ತಾರೆ. ಅವರು ಎಲ್ಲರಿಗೂ ಮಾರ್ಗದರ್ಶಕ' ಎಂದು ಕ್ರಿಕೆಟ್ ಪ್ರಿಯರು ಟ್ವೀಟ್ ಮಾಡಿದ್ದಾರೆ.

Story first published: Wednesday, May 29, 2019, 16:31 [IST]
Other articles published on May 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X