ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ವೆಂಗ್‌ಸರ್ಕಾರ್ ಪ್ರಕಾರ ಭಾರತದ ಪಾಲಿಗೆ ಅಪಾಯಕಾರಿ ತಂಡವಿದು!

ICC World Cup: Dilip Vengsarkar identifies side which can trouble team India

ನವದೆಹಲಿ, ಜೂನ್ 22: ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪಾರಮ್ಯ ಮೆರೆಯುತ್ತಿದೆ. ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳ ಸಾಲಿನಲ್ಲೂ ವಿರಾಟ್ ಕೊಹ್ಲಿ ಬಳಗ ಗುರುತಿಸಿಕೊಂಡಿದೆ. ಆದರೆ ಭಾರತದ ಟ್ರೋಫಿ ಕನಸಿಗೆ ಅಡ್ಡಗಾಲು ಹಾಕಬಲ್ಲ ತಂಡವೊಂದಿದೆ. ಅದು ಇಂಗ್ಲೆಂಡ್ ದಿಲೀಪ್ ವೆಂಗ್ ಸರ್ಕಾರ್ ಹೇಳಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ದಿಲೀಪ್ ವೆಂಗ್ ಸರ್ಕಾರ್, ಆತಿಥೇಯ ಇಂಗ್ಲೆಂಡ್, ಭಾರತದ ಪಾಲಿಗೆ ಅತೀ ಅಪಾಯಕಾರಿ ತಂಡ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ತಂಡದೆದುರು ಭಾರತ ತುಂಬಾ ಜಾಗರೂಕತೆಯಿಂದ ಆಡಬೇಕು ಎಂದು ಸಲಹೆಯನ್ನೂ ನೀಡಿದ್ದಾರೆ.

ಭಾರತ vs ಅಫ್ಘಾನಿಸ್ತಾನ, ಜೂನ್ 22, Live ಸ್ಕೋರ್‌ಕಾರ್ಡ್

1
43671

ಕ್ರಿಕ್‌ಟ್ರ್ಯಾಕರ್ ಜೊತೆ ಮಾತನಾಡುತ್ತ ವೆಂಗ್‌ಸರ್ಕಾರ್, 'ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಹೀಗೆ ಇಂಗ್ಲೆಂಡ್ ಎಲ್ಲದರಲ್ಲೂ ಬಲಿಷ್ಠವಾಗಿದೆ. ಭಾರತದ ಪಾಲಿಗೆ ಅತೀ ಸವಾಲೊಡ್ಡಲಿರುವ ತಂಡವೆಂದರೆ ಅದು ಅತಿಥೇಯ ಇಂಗ್ಲೆಂಡ್' ಎಂದಿದ್ದಾರೆ. ಜೂನ್ 30ರಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾದಾಡಲಿವೆ.

ವಿಶ್ವಕಪ್ 2019: ಹೊಸ ಮೈಲಿಗಲ್ಲು ಸ್ಥಾಪಿಸಿದ ಲಂಕಾ ವೇಗಿ ಲಸಿತ್ ಮಾಲಿಂಗವಿಶ್ವಕಪ್ 2019: ಹೊಸ ಮೈಲಿಗಲ್ಲು ಸ್ಥಾಪಿಸಿದ ಲಂಕಾ ವೇಗಿ ಲಸಿತ್ ಮಾಲಿಂಗ

ವಿಶ್ವಕಪ್‌ನಲ್ಲಿ ಈವರೆಗೆ ಆಡಿರುವ ಯಾವ ಪಂದ್ಯಗಳನ್ನೂ ಭಾರತ ಸೋತಿಲ್ಲ. ಟೂರ್ನಿಯಲ್ಲಿ ಅಜೇಯ ತಂಡಗಳಾಗಿ ನ್ಯೂಜಿಲೆಂಡ್ ಮತ್ತು ಭಾರತ ಮಾತ್ರ ಗುರುತಿಸಿಕೊಂಡಿವೆ. ಭಾರತ ಆಡಿರುವ 4ರಲ್ಲಿ 3 ಗೆಲುವು, 1 ಪಂದ್ಯವನ್ನು ರದ್ದಾಗಿಸಿಕೊಂಡಿದೆ. ತಂಡಕ್ಕೆ ಗಾಯದ ಅಡಚಣೆ ಇದೆಯಾದರೂ ದಿಲೀಪ್ ಮುನ್ನೆಚ್ಚರಿಕೆಯಂತೆ ಆಡಿದರೆ ಇಂಗ್ಲೆಂಡ್ ವಿರುದ್ಧವೂ ಭಾರತ ಗೆಲ್ಲುವ ನಿರೀಕ್ಷೆಯಿದೆ.

Story first published: Saturday, June 22, 2019, 17:28 [IST]
Other articles published on Jun 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X