ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ವಿಜಯ್ ಶಂಕರ್ ಸ್ಪೆಷಾಲಿಟಿಗೆ 4ನೇ ಕ್ರಮಾಂಕ ಹೇಳಿ ಮಾಡಿಸಿದ್ದು!?

ICC World Cup: I am an attacking batsman, ready for No. 4 slot, says Vijay Shankar

ನವದೆಹಲಿ, ಮೇ 21: ಇನ್ನು 10 ದಿನಗಳೊಳಗೆ (ಮೇ 30) ಆರಂಭಗೊಳ್ಳುತ್ತಿರುವ ಐಸಿಸಿ ವಿಶ್ವಕಪ್ 2019ರಲ್ಲಿ ಟೀಮ್ ಇಂಡಿಯಾದ 4ನೇ ಕ್ರಮಾಂಕಕ್ಕೆ ಯಾರು ಸೂಕ್ತ ಎಂಬ ಚರ್ಚೆ ಈಗಲೂ ನಡೆಯುತ್ತಲೇ ಇದೆ. ಆದರೆ ಈ ನಡುವೆ ಆಲ್ ರೌಂಡರ್ ವಿಜಯ್ ಶಂಕರ್ ನಾಲ್ಕನೇ ಕ್ರಮಾಂಕಕ್ಕೆ ಸಂಪೂರ್ಣ ಸಜ್ಜಾದಂತಿದೆ.

ವಿಶ್ವಕಪ್‌: ಸಹ ಆಟಗಾರರಿಗೆ ಎಚ್ಚರಿಕೆ ರವಾನಿಸಿದ ರಾಸ್‌ ಟೇಲರ್‌!ವಿಶ್ವಕಪ್‌: ಸಹ ಆಟಗಾರರಿಗೆ ಎಚ್ಚರಿಕೆ ರವಾನಿಸಿದ ರಾಸ್‌ ಟೇಲರ್‌!

ಭಾರತ ವಿಶ್ವಕಪ್ ತಂಡದಲ್ಲಿ ಬಹು ಪ್ರಮುಖವಾದ ನಾಲ್ಕನೇ ಕ್ರಮಾಂಕಕ್ಕೆ ಎಂಎಸ್ ಧೋನಿ, ಕೆಎಲ್ ರಾಹುಲ್, ವಿಜಯ್ ಶಂಕರ್ ಹೆಸರುಗಳಲ್ಲಿ ಒಂದನ್ನು ಕ್ರಿಕೆಟ್ ವಲಯ ಚರ್ಚಿಸುತ್ತಲೇಯಿದೆ. ಬಿಸಿಸಿಐಯು 4ನೇ ಕ್ರಮಾಂಕ ಖಾತರಿಪಡಿಸುವುದಕ್ಕೂ ಮುನ್ನವೇ ವಿಜಯ್ ಶಂಕರ್, ತಾನು ದಾಳಿಯಾತ್ಮಕ ಬ್ಯಾಟ್ಸ್ಮನ್; ಹೀಗಾಗಿ 4ನೇ ಕ್ರಮಾಂಕದಲ್ಲಿ ಆಡಲು ತಯಾರಿದ್ದೇನೆ ಎಂದು ಹೇಳಿದ್ದಾರೆ.

'ಪಂದ್ಯದಲ್ಲಿ ನಿರ್ಣಾಯಕವಾಗಿರುವ 4ನೇ ಕ್ರಮಾಂಕಕ್ಕೆ ನಾನು ಸಂಪೂರ್ಣ ತಯಾರಾಗಿದ್ದೇನೆ. ಮಾನಸಿಕವಾಗಿಯೂ ನಾನು ಈ ಸ್ಥಾನದಲ್ಲಿ ಬ್ಯಾಟ್ ಮಾಡಲು ಸಜ್ಜಾಗಿದ್ದೇನೆ. ಆದರೆ ನನ್ನನ್ನು ನಾನು ಹಾರ್ದಿಕ್ ಪಾಂಡ್ಯಗೆ ಹೋಲಿಸಿಕೊಳ್ಳಲಾರೆ' ಎಂದು ಟೈಮ್ಸ್ ಆಫ್ ಇಂಡಿಯಾದ ಜೊತೆ ಮಂಗಳವಾರ (ಮೇ 21) ಮಾತನಾಡುತ್ತ ವಿಜಯ್ ಹೇಳಿಕೊಂಡಿದ್ದಾರೆ.

ಏಕದಿನ ವಿಶ್ವಕಪ್ ಇತಿಹಾಸ ಪುಟಗಳಲ್ಲಿ ಇಂದಿಗೂ ಮುರಿಯದ ದಾಖಲೆಗಳು!ಏಕದಿನ ವಿಶ್ವಕಪ್ ಇತಿಹಾಸ ಪುಟಗಳಲ್ಲಿ ಇಂದಿಗೂ ಮುರಿಯದ ದಾಖಲೆಗಳು!

'ನಾನೊಬ್ಬ ದಾಳಿಯಾತ್ಮಕ ಶೈಲಿಯ ಬ್ಯಾಟ್ಸ್ಮನ್. ಹೀಗಾಗಿ ಬಹುಶಃ 7-8ನೇ ಓವರ್‌ ಬಳಿಕ ಬ್ಯಾಟಿಂಗ್‌ಗೆ ಇಳಿಯುವಂತಾಗಲಿ ಇಲ್ಲ 30-35 ಓವರ್‌ ಬಳಿಕ ಬ್ಯಾಟ್ ಬೀಸುವಂತಾಗಲಿ ನಾನು ಯಾವುದೇ ಸಂದರ್ಭಕ್ಕೂ ತಯಾರಿದ್ದೇನೆ' ಎಂದು ಆಯ್ಕೆ ಸಮಿತಿಯಿಂದ ತ್ರೀ ಡೈಮೆನ್ಶನಲ್ (ಮೂರು ಆಯಾಮಗಳ) ಆಟಗಾರ ಎಂದು ಕರೆಯಲ್ಪಟ್ಟಿರುವ ಶಂಕರ್ ತಿಳಿಸಿದ್ದಾರೆ.

Story first published: Tuesday, May 21, 2019, 17:50 [IST]
Other articles published on May 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X