ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಭಾರತ ವಿರುದ್ಧದ ಪಂದ್ಯದಿಂದ ದಕ್ಷಿಣ ಆಫ್ರಿಕಾ ಪ್ರಮುಖ ವೇಗಿ ಔಟ್!

ICC World Cup: Lungi Ngidi suffers hamstring injury, will skip clash against India

ಲಂಡನ್, ಜೂನ್ 3: ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯಗಳಲ್ಲಿ ಸೋಲಿನ ಆಘಾತ ಅನುಭವಿಸಿರುವ ದಕ್ಷಿಣ ಆಫ್ರಿಕಾಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಬಾಂಗ್ಲಾ ವಿರುದ್ಧದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿರುವ ದಕ್ಷಿಣ ಆಫ್ರಿಕಾ ವೇಗಿ ಲುಂಗಿಸಾನಿ ಎನ್‌ಗಿಡಿ ತಂಡದಿಂದ ಹೊರ ಬಿದ್ದಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಜೂನ್ 2ರಂದು ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದಿದ್ದ ಪಂದ್ಯದ ವೇಳೆ ಲುಂಗಿ ಎನ್‌ಗಿಡಿ ಹ್ಯಾಮ್‌ಸ್ಟ್ರಿಂಗ್‌ ಇಂಜುರಿಗೆ (ಮಂಡಿರಜ್ಜು ಗಾಯ) ಓಳಗಾಗಿದ್ದರು. ಈ ಪಂದ್ಯದಲ್ಲಿ ಆಫ್ರಿಕಾ, 21 ರನ್‌ಗಳ ಸೋಲುನುಭವಿಸಿತ್ತು. ಎನ್‌ಗಿಡಿ ಚೇತರಿಕೆಗೆ ಇನ್ನೂ 10 ದಿನಗಳು ಬೇಕಾಗಿರುವುದರಿಂದ ಅವರು ಭಾರತ ವಿರುದ್ಧ ಪಂದ್ಯದಲ್ಲಿ ಪಾಲ್ಗೊಳ್ಳುವುದು ಅನುಮಾನ.

'ಲುಂಗಿ ಎನ್‌ಗಿಡಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಅವರು ಎಡಗಾಲಿನ ಗಾಯಕ್ಕೀಡಾಗಿರುವುದು ಕಂಡುಬಂದಿದೆ. ಹೀಗಾಗಿ ನಾವು ಮುಂದಿನ ಪಂದ್ಯದಲ್ಲಿ ಅವರನ್ನು ಮೈದಾನಕ್ಕಿಳಿಸದಿರಲು ನಿರ್ಧರಿಸಿದ್ದೇವೆ. ಅಂದರೆ ಒಂದು ವಾರದಿಂದ 10 ದಿನಗಳವರೆಗೆ ಎನ್‌ಗಿಡಿ ವಿಶ್ರಾಂತಿ ಪಡೆಯಲಿದ್ದಾರೆ' ಎಂದು ದಕ್ಷಿಣ ಆಫ್ರಿಕಾ ತಂಡದ ಮ್ಯಾನೇಜರ್ ಡಾ.ಮೊಹಮ್ಮದ್ ಮೂಸಾಜೀ ತಿಳಿಸಿದ್ದಾರೆ.

ವಿಶ್ವಕಪ್: ಭಾರತ-ಪಾಕ್ ಕುತೂಹಲಕಾರಿ ಕದನದ ಫಲಿತಾಂಶ ಊಹಿಸಿದ ಭಜ್ಜಿ!ವಿಶ್ವಕಪ್: ಭಾರತ-ಪಾಕ್ ಕುತೂಹಲಕಾರಿ ಕದನದ ಫಲಿತಾಂಶ ಊಹಿಸಿದ ಭಜ್ಜಿ!

ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಕೇವಲ 4 ಓವರ್‌ ಎಸೆದು ಗಾಯಕ್ಕೀಡಾದ ಎನ್‌ಗಿಡಿ ಮೈದಾನದಿಂದ ಹೊರ ಬಿದ್ದಿದ್ದರು. ಮಾಹಿತಿಯ ಪ್ರಕಾರ ಲುಂಗಿ ಸಾನಿ, ಜೂನ್ 5ರಂದು ನಡೆಯುವ ಭಾರತ ವಿರುದ್ದದ ಪಂದ್ಯದಲ್ಲಿ ಆಡುತ್ತಿಲ್ಲ. ಆದರೆ ಜೂನ್ 10ರ ವೆಸ್ಟ್ ಇಂಡೀಸ್-ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಎನ್‌ಗಿಡಿ ಆಡುವ ನಿರೀಕ್ಷೆಯಿದೆ.

Story first published: Monday, June 3, 2019, 12:33 [IST]
Other articles published on Jun 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X