ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವ ಆಟಗಾರನ ಹೆಸರಿಸಿದ ಮೈಕಲ್ ಕ್ಲಾರ್ಕ್!

ICC World Cup 2019 : ಈತ ಇದ್ರೆ ಮಾತ್ರ ಭಾರತಕ್ಕೆ ಆನೆ ಬಲ..? | Oneindia Kannada
ICC World Cup: Michael Clarke identifies player who can win title for Team India

ಲಂಡನ್ ಜೂನ್ 25: ಟೀಮ್ ಇಂಡಿಯಾದಲ್ಲಿರುವ ವೇಗಿ ಜಸ್‌ ಪ್ರೀತ್ ಬೂಮ್ರಾ ಅದ್ಭುತ ಕೌಶಲಗಳನ್ನು ಹೊಂದಿದ್ದಾರೆ. ಹೀಗಾಗಿ ಬೂಮ್ರಾ ಈ ಸಾರಿ ಭಾರತ ತಂಡಕ್ಕೆ ವಿಶ್ವಕಪ್ ಟ್ರೋಫಿ ಗೆದ್ದುಕೊಡಬಲ್ಲರು. ಇನ್ನೊಂದು ಬದಿಯಲ್ಲಿ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಕೂಡ ಕಾಂಗರೂ ಪಡೆಗೆ ಕಪ್ ಗೆದ್ದುಕೊಡುವ ಸಾಮರ್ಥ್ಯ ಉಳ್ಳವರು ಎಂದು 2015ರ ಆಸೀಸ್ ವಿಶ್ವಕಪ್ ವಿಜೇತ ತಂಡದ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಪಿಟಿಐ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತ ಕ್ಲಾರ್ಕ್, ವಿಶ್ವಕಪ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗಲಿರುವ ನೆಚ್ಚಿನ ತಂಡಗಳೆಂಬುದನ್ನು ವಿವರಿಸಿದರು. ಜೊತೆಗೆ ಆತಿಥೇಯ ಇಂಗ್ಲೆಂಡ್‌ಗೆ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಕಡಿಮೆ ಎಂಬುದನ್ನೂ ಕ್ಲಾರ್ಕ್ ಸ್ಪಷ್ಟವಾಗಿ ಹೇಳಿದ್ದಾರೆ.

ವಿಶ್ವಕಪ್: ಬಾಂಗ್ಲಾ ಪರ ಅಪರೂಪದ ದಾಖಲೆ ಬರೆದ ಶಕೀಬ್ ಅಲ್ ಹಸನ್ವಿಶ್ವಕಪ್: ಬಾಂಗ್ಲಾ ಪರ ಅಪರೂಪದ ದಾಖಲೆ ಬರೆದ ಶಕೀಬ್ ಅಲ್ ಹಸನ್

ಈ ಬಗ್ಗೆ ಮಾತನಾಡುತ್ತ ಮೈಕಲ್ ಕ್ಲಾರ್ಕ್, 'ಭಾರತಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವ ಶಕ್ತಿ ಬೂಮ್ರಾಗಲ್ಲದೆ ಇನ್ಯಾರಿಗೂ ಇಲ್ಲ ಎಂದು ನನಗನ್ನಿಸುತ್ತಿದೆ. ಆತ ಫಿಟ್ ಮತ್ತು ಹೆಲ್ದಿಯಾಗಿದ್ದಾರೆ. ವಿಶ್ವಕಪ್‌ನಲ್ಲಿ ಟೀಮ್ ಇಂಡೀಯಾದ ಯಶಸ್ಸಿನಲ್ಲಿ ಬೂಮ್ರಾ ದೊಡ್ಡ ಪಾತ್ರ ವಹಿಸಲಿದ್ದಾರೆ ಎಂಬುದು ನನ್ನ ಭಾವನೆ' ಎಂದರು.

ವಿಶ್ವಕಪ್ 2019: ವೆಸ್ಟ್ ಇಂಡೀಸ್‌ಗೆ ಆಘಾತ, ರಸೆಲ್ ವಿಶ್ವಕಪ್‌ನಿಂದ ಹೊರಕ್ಕೆ!ವಿಶ್ವಕಪ್ 2019: ವೆಸ್ಟ್ ಇಂಡೀಸ್‌ಗೆ ಆಘಾತ, ರಸೆಲ್ ವಿಶ್ವಕಪ್‌ನಿಂದ ಹೊರಕ್ಕೆ!

ಆದರೆ ಇದೇ ಬೂಮ್ರಾ ಆಸ್ಟ್ರೇಲಿಯಾ ವಿರುದ್ಧ, ಮುಖ್ಯವಾಗಿ ವಾರ್ನರ್ ಅವರಿಂದ ಕಠಿಣ ಸವಾಲು ಎದುರಿಸಬಲ್ಲರು ಎಂದೂ ಕ್ಲಾರ್ಕ್ ಅಭಿಪ್ರಾಯಿಸಿದ್ದಾರೆ. 'ಡೇವಿಡ್ ವಾರ್ನರ್ ಒಬ್ಬ ಅಸಾಮಾನ್ಯ ಆಟಗಾರ. ಹೀಗಾಗಿ ಅವರಿಂದ ನಾನು ವಿಶೇಷ ಆಟವನ್ನು ನಿರೀಕ್ಷಿಸುತ್ತೇನೆ. ಆತ ಆಸೀಸ್ ತಂಡದಲ್ಲಿ ನಿರ್ಣಾಯಕ ಪಾತ್ರ ವಹಿಸಲ್ಲ. ಒಂದುವೇಳೆ ಆಸೀಸ್ ವಿಶ್ವಕಪ್ ಗೆಲ್ಲುವಂತಾದರೆ ಅಲ್ಲಿ ವಾರ್ನರ್ ಕೊಡುಗೆ ಮಹತ್ವದ್ದಾಗಿರತ್ತೆ ಎಂದು ನನ್ನನಿಸಿಕೆ' ಎಂದು ಕ್ಲಾರ್ಕ್ ಹೇಳಿದ್ದಾರೆ.

Story first published: Tuesday, June 25, 2019, 0:40 [IST]
Other articles published on Jun 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X