ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಅಫ್ಘಾನಿಸ್ತಾನ ಸ್ಫೋಟಕ ಬ್ಯಾಟ್ಸ್ಮನ್‌ ಟೂರ್ನಿಯಿಂದಲೇ ಹೊರಕ್ಕೆ!

ICC World Cup: Mohammad Shahzad ruled out, replaced by 18-year-old

ಲಂಡನ್, ಜೂನ್ 7: ಅಫ್ಘಾನಿಸ್ತಾನ ತಂಡದಲ್ಲಿದ್ದ ಬಿರುಗೈ ದಾಂಡಿಗ ಮೊಹಮ್ಮದ್ ಶಹಝಾದ್ ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರಿಂದ ಹೊರ ಬಿದ್ದಿದ್ದಾರೆ. ಮೊಣಕಾಲು ಗಾಯದಿಂದ ಬಳಲುತ್ತಿರುವ ಶಹಝಾದ್ ಟೂರ್ನಿಯಿಂದ ಹೊರ ನಡೆದಿರುವುದು ಅಫ್ಘಾನ್‌ಗೆ ದೊಡ್ಡ ಹೊಡೆತ ನೀಡಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಸ್ಫೋಟಕ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ಗೆ ಗಮನ ಸೆಳೆದಿದ್ದ ಶಹಝಾದ್ ಬದಲಿಗೆ ಅಫ್ಘಾನಿಸ್ತಾನದ 15 ಜನರ ತಂಡದಲ್ಲಿ 18ರ ಹರೆಯದ ಇಕ್ರಮ್ ಅಲಿ ಖಿಲ್ ಅವರನ್ನು ಹೆಸರಿಸಲಾಗಿದೆ. ವಿಶ್ವಕಪ್ ಇನ್ನುಳಿದ ಪಂದ್ಯಗಳಲ್ಲಿ ಇಕ್ರಮ್ ಅಲಿ ಕಾಣಿಸಿಕೊಳ್ಳಲಿದ್ದಾರೆ.

ವಿಶ್ವಕಪ್ ಆರಂಭಿಕ ಎರಡೂ ಪಂದ್ಯಗಳಲ್ಲಿ ಅಂದ್ರೆ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ, ಅಫ್ಘಾನಿಸ್ತಾನ ಸೋತಿತ್ತು. ಅಫ್ಘಾನ್ ಆರಂಭಿಕ ಬ್ಯಾಟ್ಸ್ಮನ್‌ ಶಹಝಾದ್ ಜಾಗಕ್ಕೆ ಇಕ್ರಮ್ ಅಲಿ ಖಿಲ್ ಅವರಿಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅನುಮತಿ ನೀಡಿದೆ.

ಎಂಎಸ್ ಧೋನಿ ಗ್ಲೌಸಿನಲ್ಲಿದ್ದ ಸೇನೆಯ ಮುದ್ರೆ ತೆಗೆಯುವಂತೆ ಹೇಳಿದ ಐಸಿಸಿಎಂಎಸ್ ಧೋನಿ ಗ್ಲೌಸಿನಲ್ಲಿದ್ದ ಸೇನೆಯ ಮುದ್ರೆ ತೆಗೆಯುವಂತೆ ಹೇಳಿದ ಐಸಿಸಿ

ಏಕದಿನ ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ ಅಫ್ಘಾನಿಸ್ತಾನ ತಂಡ ಗಮನಾರ್ಹ ಬೆಳವಣಿಗೆ ತೋರಿಕೊಳ್ಳುವಲ್ಲಿ 32ರ ಹರೆಯದ ಶಹಝಾದ್ ಪಾತ್ರ ಪ್ರಮುಖವಾಗಿತ್ತು. ಅಫ್ಘಾನ್ ತಂಡದಲ್ಲಿ ಶಹಝಾದ್ ಅತ್ಯಂತ ಅಪಾಯಕಾರಿ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಅಂದ್ಹಾಗೆ ಅಫ್ಘಾನ್ ತಂಡ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಸದ್ಯ 10ನೇ ಸ್ಥಾನದಲ್ಲಿದೆ.

Story first published: Friday, June 7, 2019, 11:58 [IST]
Other articles published on Jun 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X