ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಧೋನಿ ಸಕಾರಾತ್ಮಕ ಪ್ರದರ್ಶನ ತೋರಿಸುತ್ತಿಲ್ಲ ಎಂದ ಸಚಿನ್!

ICC World Cup 2019 : ಧೋನಿ ನೆಟ್ಟಗೆ ಆಡುತ್ತಿಲ್ಲ..! ಶಾಕ್ ನೀಡಿದ ಸಚಿನ್ ಹೇಳಿಕೆ..!
ICC World Cup: MS Dhoni ‘did not show any positive intent,’ says Sachin Tendulkar

ಸೌತಾಂಪ್ಟನ್, ಜೂನ್ 24: ಅಫ್ಘಾನಿಸ್ತಾನ ವಿರುದ್ಧ ಭಾರತದ ಇನ್ನಿಂಗ್ಸ್‌ನ ಮಧ್ಯಭಾಗದಲ್ಲಿ ಮಾಜಿ ನಾಯಕ ಎಂಎಸ್ ಧೋನಿಯ ಬ್ಯಾಟಿಂಗ್ ತನ್ನತ್ತ ಲಕ್ಷ್ಯ ಹರಿಯುವಂತೆ ಮಾಡಿತ್ತು. ಕೇದಾರ್ ಜಾಧವ್ ಜೊತೆ ಒಂದಿಷ್ಟು ನಿರ್ಣಾಯಕ ಜೊತೆಯಾಟ ನೀಡಿದ್ದರಾದರೂ ಧೋನಿ ಬ್ಯಾಟಿಂಗ್ ತಂತ್ರ ಅಷ್ಟೇನೂ ಪ್ರಭಾವ ಬೀರಿರಲಿಲ್ಲ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ರೋಚಕ ಘಟ್ಟಕ್ಕೆ ತಲುಪಿದ್ದ ಪಂದ್ಯವನ್ನು ಅಫ್ಘಾನಿಸ್ತಾನ ಗೆದ್ದುಕೊಳ್ಳುವುದರಲ್ಲಿತ್ತು. ಅಫ್ಘಾನ್‌ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಸಾಧನೆಯಿಂದ ಭಾರತ 11 ರನ್ ಗೆಲುವನ್ನಾಚರಿಸಿತ್ತು. ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಧೋನಿ 52 ಎಸೆತಗಳಿಗೆ 28 ರನ್ ಬಾರಿಸಿದ್ದರು.

ಶಮಿ ಮೂಲಕ ಜನರಿಗೆ ನಾನು ಯಾರೆಂದು ಗೊತ್ತಾಗ್ತಿದೆ: ಚೇತನ್ ಶರ್ಮಾಶಮಿ ಮೂಲಕ ಜನರಿಗೆ ನಾನು ಯಾರೆಂದು ಗೊತ್ತಾಗ್ತಿದೆ: ಚೇತನ್ ಶರ್ಮಾ

ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಧೋನಿ ಬಲು ಅಪರೂಪವೆಂಬಂತೆ 8 ವರ್ಷಗಳ ಬಳಿಕ ಎರಡನೇಸಾರಿ ಸ್ಟಂಪ್ ಔಟ್ ಆಗಿದ್ದರು. ಪಂದ್ಯದಲ್ಲಿನ ಧೋನಿ ಬ್ಯಾಟಿಂಗ್ ಬಗ್ಗೆ ಸಚಿನ್ ತೆಂಡೂಲ್ಕರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬ್ಯಾಟಿಂಗ್ ತಂತ್ರದ ಕೊರತೆ

ಬ್ಯಾಟಿಂಗ್ ತಂತ್ರದ ಕೊರತೆ

ವಿಶೇಷವಾಗಿ ಸ್ಪಿನ್ ಬೌಲಿಂಗ್‌ಗೆ ಧೋನಿ ಬ್ಯಾಟಿಂಗ್ ತಂತ್ರದ ಕೊರತೆ ಎದುರಿಸುತ್ತಿರುವ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ಮಾತನಾಡಿದ್ದಾರೆ. 'ಧೋನಿ ಒಬ್ಬ ಅನುಭವಿ ಆಟಗಾರ. ಅವರು ಸಕಾರಾತ್ಮಕ ಪ್ರದರ್ಶನ ನೀಡಲೇಬೇಕು. ಅಫ್ಘಾನ್ ಬೌಲಿಂಗ್ ಉತ್ತಮವಾಗಿದೆ. ಹಾಗಂತ ಭಾರತ 34 ಓವರ್‌ಗೆ ಕೇವಲ 119 ರನ್ ಗಳಿಸಿದ್ದು ಒಳ್ಳೆಯ ಲಕ್ಷಣವಲ್ಲ' ಎಂದು ಸಚಿನ್ ಇಂಡಿಯಾ ಟುಡೇ ಜೊತೆ ಹೇಳಿಕೊಂಡಿದ್ದಾರೆ.

ನಿಧಾನಗತಿಯ ಬ್ಯಾಟಿಂಗ್

ನಿಧಾನಗತಿಯ ಬ್ಯಾಟಿಂಗ್

ಭಾರತ ಆಡಿದ್ದ 4 ಪಂದ್ಯಗಳಲ್ಲಿ ಒಂದರಲ್ಲೂ ಧೋನಿ ಗಮನಾರ್ಹ ಬ್ಯಾಟಿಂಗ್ ತೋರಿಸಿರಲಿಲ್ಲ. ಅಫ್ಘಾನ್ ವಿರುದ್ಧದ ಪಂದ್ಯದಲ್ಲೂ ಧೋನಿಯ ನಿಧಾನಗತಿಯ ಬ್ಯಾಟಿಂಗ್ ತಂಡದ ಪಾಲಿಗೆ ದುಬಾರಿಯಾಗುವುದರಲ್ಲಿತ್ತು. ಅದೃಷ್ಟವಶಾತ್ ಭಾರತ ಈ ಪಂದ್ಯವನ್ನು ಗೆದ್ದುಕೊಂಡಿತಾದರೂ ಧೋನಿಯ ಪ್ರದರ್ಶನ ಮತ್ತೆ ಚರ್ಚೆಗೀಡಾಗುವಂತೆ ಮಾಡಿದೆ.

ಸ್ಟ್ರೈಕ್ ರೊಟೇಶನ್ ಚೆನ್ನಾಗಿರಲಿಲ್ಲ

ಸ್ಟ್ರೈಕ್ ರೊಟೇಶನ್ ಚೆನ್ನಾಗಿರಲಿಲ್ಲ

'ಅಫ್ಘಾನ್ ವಿರುದ್ಧ ಧೋನಿ ಸಕಾರಾತ್ಮಕ ಬ್ಯಾಟಿಂಗ್ ತೋರಿಸಬೇಕಿತ್ತು. ಅವರಿಗೆ ಆ ಸಾಮರ್ಥ್ಯ ಇತ್ತು. ಆದರೆ ಅವರ ಸ್ಟ್ರೈಕ್ ರೊಟೇಶನ್ ಚೆನ್ನಾಗಿರಲಿಲ್ಲ. ಅಲ್ಲದೆ ಹೆಚ್ಚು ಡಾಟ್ ಬಾಲ್‌ಗಳನ್ನು ಎದುರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬರುವ ಬ್ಯಾಟ್ಸ್ಮನ್‌ನ ಉದ್ದೇಶ ಉತ್ತಮವಿರಬೇಕಿದೆ' ಎಂದು ಸಚಿನ್ ಹೇಳಿದ್ದಾರೆ.

ಭಾರತ ಇಕ್ಕಟ್ಟಿಗೆ ಸಿಲುಕಿತ್ತು

ಭಾರತ ಇಕ್ಕಟ್ಟಿಗೆ ಸಿಲುಕಿತ್ತು

ವಿರಾಟ್ ಕೊಹ್ಲಿ ಬಳಗ ಈವರೆಗೆ ಆಡಿರುವ ನಾಲ್ಕೂ ಮೈದಾನಕ್ಕಿಳಿದಿದ್ದ ಧೋನಿ ಕ್ರಮವಾಗಿ 34, 27, 1, 28 ರನ್‌ಗಳನ್ನು ಗಳಿಸಿದ್ದರು. ಅದರಲ್ಲೂ ಅಫ್ಘಾನ್ ವಿರುದ್ಧ ಆಟದ ನಿರೀಕ್ಷೆಯಿದ್ದ ರೋಹಿತ್ ಶರ್ಮಾ, ವಿಜಯ್ ಶಂಕರ್ ಅಂಥ ಬ್ಯಾಟಿಂಗ್ ತೋರಿಸಿದ್ದರಿಂದ ಧೋನಿ ಮೇಲೆ ನಿರೀಕ್ಷೆ ಹೆಚ್ಚಿತ್ತು. ಧೋನಿಯೂ ಔಟ್ ಆದಾಗ ಭಾರತ ನಿಜಕ್ಕೂ ಇಕ್ಕಟ್ಟಿಗೆ ಸಿಲುಕಿತ್ತು. ಆದರೆ ಅಂತೂ ಭಾರತ ಗೆಲುವಿನೊಂದಿಗೆ ನಿಟ್ಟುಸಿರು ಬಿಟ್ಟಿತ್ತು.

Story first published: Monday, June 24, 2019, 16:47 [IST]
Other articles published on Jun 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X