ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ನಬಿ-ಹಶ್ಮತುಲ್ಲಾ ಸಾಹಸ, ಪಾಕಿಸ್ತಾನ ಮಣಿಸಿದ ಅಫ್ಘಾನಿಸ್ತಾನ

ICC World cup: Nabi, Hashmatullah star in hard-fought win

ಬ್ರಿಸ್ಟಲ್, ಮೇ 25: ಆಲ್ ರೌಂಡರ್ ಮೊಹಮ್ಮದ್ ನಬಿ ಮತ್ತು ಬ್ಯಾಟ್ಸ್ಮನ್ ಹಶ್ಮತುಲ್ಲಾ ಶಾಹಿದಿ ಸಾಹಸದಿಂದಾಗಿ ಶುಕ್ರವಾರ (ಮೇ 24) ನಡೆದ ವಿಶ್ವಕಪ್ ಮೊದಲ ಅಭ್ಯಾಸ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ, ಪಾಕಿಸ್ತಾನ ವಿರುದ್ಧ 3 ವಿಕೆಟ್ ಗೆಲುವು ಸಾಧಿಸಿದೆ (ಚಿತ್ರ ಕೃಪೆ: ಇಎಸ್‌ಪಿಎನ್ ಕ್ರಿಕ್ ಇನ್ಫೋ).

ಐಸಿಸಿ ಕ್ರಿಕೆಟ್ ವಿಶ್ವಕಪ್ 2019: ಆಲ್ ರೌಂಡರ್ ವಿಜಯ್ ಶಂಕರ್‌ಗೆ ಗಾಯಐಸಿಸಿ ಕ್ರಿಕೆಟ್ ವಿಶ್ವಕಪ್ 2019: ಆಲ್ ರೌಂಡರ್ ವಿಜಯ್ ಶಂಕರ್‌ಗೆ ಗಾಯ

ಹಶ್ಮತುಲ್ಲಾ ಅವರು 102 ಎಸೆತಗಳಿಗೆ ಅಜೇಯ 74 ರನ್ ಬಾರಿಸಿದರೆ, ನಬಿ 41 ರನ್ ಮತ್ತು 3 ವಿಕೆಟ್‌ಗಳೊಂದಿಗೆ ಅಭ್ಯಾಸ ಪಂದ್ಯದಲ್ಲಿ ಅಫ್ಘಾನ್ ಶುಭಾರಂಭ ಕಾಣಲು ನೆರವು ನೀಡಿದರು. ಈ ಪಂದ್ಯ ಬ್ರಿಸ್ಟಲ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆದಿತ್ತು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತಂಡ, ಬಾಬರ್ ಅಝಮ್ 112 (108 ಎಸೆತ), ಶೋಯೆಬ್ ಮಲ್ಲಿಕ್ 44, ಇಮಾಮ್ ಉಲ್ ಹಕ್ 32 ರನ್ ಸೇರ್ಪಡೆಯೊಂದಿದೆ 47.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 262 ರನ್ ಬಾರಿಸಿತು. ಈ ವೇಳೆ ಅಫ್ಘಾನ್‌ನ ದೌಲತ್ ಝದ್ರಾನ್ 2, ನಬಿ 3 (46 ರನ್), ರಶೀದ್ ಖಾನ್ 2 ವಿಕೆಟ್‌ನೊಂದಿಗೆ ಮಿಂಚಿದ್ದರು.

ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಹರಿಸಿದ ರನ್‌ ಹೊಳೆಯ ದಾಖಲೆಗಳಿವುವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಹರಿಸಿದ ರನ್‌ ಹೊಳೆಯ ದಾಖಲೆಗಳಿವು

ಇನ್ನಿಂಗ್ಸ್ ಆರಂಭಿಸಿದ ಅಫ್ಘಾನ್, ಮೊಹಮ್ಮದ್ ಶಹಝಾದ್ 23, ಹಝ್ರತುಲ್ಲಾ ಝದಾಯ್ 49, ರಹಮತ್ ಷಾ 32, ಶಾಹಿದಿ 74, ನಬಿ 34, ಸಮೀಉಲ್ಲ ಶೆನ್ವಾಯಿ 22 ರನ್ ಕೊಡುಗೆಯೊಂದಿಗೆ 49.4 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 263 ರನ್ ಮಾಡಿತು. ಬೌಲಿಂಗ್‌ಗಾಗಿ ಪಾಕ್‌ನ ವಹಾಬ್ ರಿಯಾಝ್ 3, ಇಮಾದ್ ವಾಸಿಮ್ 2 ವಿಕೆಟ್‌ನಿಂದ ಗಮನ ಸೆಳೆದರು.

Story first published: Saturday, May 25, 2019, 12:33 [IST]
Other articles published on May 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X