ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ODI ವಿಶ್ವಕಪ್‌ನಲ್ಲಿ ದಾಖಲಾದ 5 ವೈಯಕ್ತಿಕ ಗರಿಷ್ಠ ಮೊತ್ತಗಳಿವು!

ICC World Cup recap: Top 5 highest individual scores

ಬೆಂಗಳೂರು, ಮೇ 17: ಕ್ರಿಕೆಟ್‌ ಪ್ರಿಯರೆಲ್ಲಾ ಬಹಳ ಕುತೂಹಲದಿಂದ ಎದುರು ನೋಡುವ ಟೂರ್ನಿ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌. ಐಪಿಎಲ್‌, ಬಿಗ್‌ಬ್ಯಾಷ್‌ ಮತ್ತು ಯಾವುದೇ ಟಿ20 ಕ್ರಿಕೆಟ್‌ ಟೂರ್ನಿಗಳು ಎಷ್ಟೇ ಮನರಂಜನ ನೀಡಿದರೂ ಕ್ರಿಕೆಟ್‌ ಪ್ರಿಯರಿಗೆ ವಿಶ್ವಕಪ್‌ನಲ್ಲಿ ಸಿಗುವ ಥ್ರಿಲ್‌ ಬೇರೆ ಯಾವ ಟೂರ್ನಿಯಲ್ಲೂ ಸಿಗುವುದಿಲ್ಲ.

World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!

ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯೇ ಹಾಗೆ. ಜಗತ್ತಿನ ಶ್ರೇಷ್ಠ ತಂಡಗಳ ನಡುವಣ ಜಟಾಪಟಿ ಗುಣಮಟ್ಟದ ಕ್ರಿಕೆಟ್‌ ಆಟವನ್ನು ಪ್ರೇಕ್ಷಕರ ಮುಂದಿರಿಸುತ್ತದೆ. ಫಿಫಾ ಫುಟ್ಬಾಲ್‌ ವಿಶ್ವಕಪ್‌ ಬಳಿಕ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಟೂರ್ನಿಗಳಲ್ಲಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಕೂಡ ಒಂದು.

ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!

ಅಂದಹಾಗೆ ಒಡಿಐ ವಿಶ್ವಕಪ್‌ ಟೂರ್ನಿಯ ಈ ಹಿಂದಿನ 11 ಆವೃತ್ತಿಗಳಲ್ಲಿ ಕ್ರಿಕೆಟ್‌ ಅಭಿಮಾನಿಗಳಿಗೆ ರೋಮಾಂಚನ ನೀಡಿದ ಅದ್ಭುತ ಬ್ಯಾಟಿಂಗ್‌ ಪ್ರದರ್ಶನಗಳ ವಿವರ ಇಲ್ಲಿ ನೀಡಲಾಗಿದೆ. ಇವು ವಿಶ್ವಕಪ್‌ ಇತಿಹಾಸದಲ್ಲಿ ದಾಖಲಾದ ಐದು ವೈಯಕ್ತಿಕ ಗರಿಷ್ಠ ಸ್ಕೋರ್‌ಗಳಾಗಿವೆ.

ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!

ಮಾರ್ಟಿನ್‌ ಗಪ್ಟಿಲ್‌ - 237* vs ವೆಸ್ಟ್‌ ಇಂಡೀಸ್‌ (2015)

ನ್ಯೂಜಿಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ ವಿಶ್ವಕಪ್‌ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಮೊತ್ತದ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಆತಿಥ್ಯದಲ್ಲಿ ನಡೆದ 2015ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಗಪ್ಟಿಲ್‌, ವೆಸ್ಟ್‌ ಇಂಡೀಸ್‌ ವಿರುದ್ಧದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದರು. 163 ಎಸೆತಗಳನ್ನು ಎದುರಿಸಿ 24 ಫೋರ್‌ ಮತ್ತು 11 ಭರ್ಜರಿಯ ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 237 ರನ್‌ಗಳನ್ನು ಚಚ್ಚಿ ಅವರಿ ಈ ವಿಶ್ವ ದಾಖಲೆ ಬರೆದಿದ್ದರು. ಪಂದ್ಯದಲ್ಲಿ 393/6 (50) ರನ್‌ಗಳ ಬೃಹತ್‌ ಮೊತ್ತ ದಾಖಲಿಸಿದ ನ್ಯೂಜಿಲೆಂಡ್‌ 143 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ತಂಡ 30.3 ಓವರ್‌ಗಳಲ್ಲಿ 205ಕ್ಕೆ ಆಲ್‌ಔಟ್‌ ಆಗಿತ್ತು.

ಕ್ರಿಸ್‌ ಗೇಲ್‌ - 215 vs ಜಿಂಬಾಬ್ವೆ (2015)

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ದಾಖಲಾದ ಮೊದಲ ದ್ವಿಶತಕವಿದು. ಅಂದಹಾಗೆ 2015ರ ವಿಶ್ವಕಪ್‌ ಟೂರ್ನಿಯಲ್ಲಿ ಎರಡು ದ್ವಿಶತಕಗಳು ದಾಖಲಾಗಿದ್ದವು. ಗೇಲ್‌ ಈ ಸಾಧನೆ ಮಾಡಿದ ಮೊದಲ ಆಟಗಾರ. ಜಿಂಬಾಬ್ವೆ ವಿರುದ್ಧ ಲೀಗ್‌ ಹಂತದಲ್ಲಿ ಮೊದಲ ಓವರ್‌ನಲ್ಲೇ ಡ್ವೇನ್‌ ಸ್ಮಿತ್‌ (0) ವಿಕೆಟ್‌ ಕಳೆದುಕೊಂಡ ವಿಂಡೀಸ್‌ಗೆ ಗ್ರಿಸ್‌ ಗೇಲ್‌ ಮತ್ತು ಮರ್ಲಾನ್‌ ಸ್ಯಾಮುಯೆಲ್ಸ್‌ 2ನೇ ವಿಕೆಟ್‌ಗೆ ದಾಖಲೆಯ 372 ರನ್‌ಗಳ ಜತೆಯಾಟ ನಡೆಸಿದರು. 147 ಎಸೆತಗಳನ್ನು ಎದುರಿಸಿದ ಗೇಲ್‌, 10 ಫೋರ್‌ ಮತ್ತು ಬರೋಬ್ಬರಿ 16 ಸಿಕ್ಸರ್‌ಗಳೊಂದಿಗೆ 215 ರನ್‌ ಸಿಡಿಸಿ ತಮ್ಮ ವೃತ್ತಿ ಬದುಕಿನ ಚೊಚ್ಚಲ ಒಡಿಐ ದ್ವಿಶತಕದ ಸಂಭ್ರಮ ಆಚರಿಸಿದರು. 105 ಎಸೆತಗಳಲ್ಲಿ ಶತಕ ದಾಖಲಿಸಿದ ಗೇಲ್‌, ಇನ್ನುಳಿದ 115 ರನ್‌ಗಳನ್ನು ಗಳಿಸಲು ತೆಗೆದುಕೊಂಡದ್ದು ಕೇವಲ 47 ಎಸೆತಗಳನ್ನು ಮಾತ್ರ. 373 ರನ್‌ ಗುರಿ ಬೆನ್ನತ್ತಿದ ಜಿಂಬಾಬ್ವೆ 289ಕ್ಕೆ ಆಲ್‌ಔಟ್‌ ಆಯಿತು.

ಗ್ಯಾರಿ ಕರ್ಸ್ಟನ್‌ 188* vs ಯುಎಇ (1996)

ಟೀಮ್‌ ಇಂಡಿಯಾದ ಮಾಜಿ ಕೋಚ್‌ ಹಾಗೂ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದ ಗ್ಯಾರಿ ಕರ್ಸ್ಟನ್‌, ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆದ 1996ರ ಒಡಿಐ ವಿಶ್ವಕಪ್‌ನಲ್ಲಿ ದುರ್ಬಲ ಯುಎಇ ವಿರುದ್ಧ ಅಬ್ಬರಿಸಿದ್ದರು. ರಾವಲ್‌ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ 159 ಎಸೆತಗಳಲ್ಲಿ ಅಜೇಯ 188 ರನ್‌ಗಳನ್ನು ಗಳಿಸಿದ ಕರ್ಸ್ಟನ್‌, ತಂಡಕ್ಕೆ 50 ಓವರ್‌ಗಳಲ್ಲಿ 321/2 ರನ್‌ಗಳ ಬೃಹತ್‌ ಮೊತ್ತ ತಂದುಕೊಟ್ಟಿದ್ದರು. ಇದು ಬರೋಬ್ಬರಿ 20 ವರ್ಷಗಳ ಕಾಲ ಒಡಿಐ ವಿಶ್ವಕಪ್‌ನ ವೈಯಕ್ತಿಕ ಗರಿಷ್ಠ ಮೊತ್ತವಾಗಿ ಉಳಿದಿತ್ತು. 2015ರಲ್ಲಿ ಗೇಲ್‌ ಈ ದಾಖಲೆ ಮುರಿದರು. ಪಂದ್ಯದಲ್ಲಿ ಗುರಿ ಬೆನ್ನತ್ತಿದ ಯುಎಇ 50 ಓವರ್‌ಗಳಲ್ಲಿ 152/8 ಗಳಿಸಲಷ್ಟ್ಏ ಶಕ್ತವಾಗಿ, ದಕ್ಷಿಣ ಆಫ್ರಿಕಾ ತಂಡ 159 ರನ್‌ಗಳ ಜಯ ದಾಖಲಿಸಿತು.

ಸೌರವ್‌ ಗಂಗೂಲಿ 183 vs ಶ್ರೀಲಂಕಾ (1999)

ದಾದಾ ಖ್ಯಾತಿಯ ಸೌರವ್‌ ಗಂಗೂಲಿ 1999ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಒಡಿಐ ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನ ಶ್ರೇಷ್ಠ ಇನಿಂಗ್ಸ್‌ ಆಡಿದ್ದರು. ಅಂದಿನ ಹಾಲಿ ಚಾಂಪಿಯನ್ಸ್‌ ಶ್ರೀಲಂಕಾ ಎದುರು ಟೌಂಟನ್‌ನಲ್ಲಿ ನಡೆದ ಪಂದ್ಯದಲ್ಲಿ ಅಬ್ಬರಿಸಿದ್ದ ಗಂಗೂಲಿ, ರಾಹುಲ್‌ ದ್ರಾವಿಡ್‌ ಜೊತೆಗೂಡಿ 318 ರನ್‌ಗಳ ಜತೆಯಾಟವಾಡಿದ್ದರು. 119 ಎಸೆತಗಳಲ್ಲಿ ಶತಕ ದಾಖಲಿಸಿದ ದಾದಾ, ಬಳಿಕ 39 ಎಸೆತಗಳಲ್ಲಿ 83 ರನ್‌ಗಳನ್ನು ಚಚ್ಚಿದ್ದರು. ಅವರ ಈ ಇನಿಂಗ್ಸ್‌ನಲ್ಲಿ 17 ಫೋರ್‌ ಮತ್ತು 7 ಸಿಕ್ಸರ್‌ಗಳು ಮೂಡಿಬಂದಿದ್ದವು. ಇದೇ ವೇಳೆ ದ್ರಾವಿಡ್‌ 129 ಎಸೆತಗಳಲ್ಲಿ 145 ರನ್‌ಗಳನ್ನು ಬಾರಿಸಿದ್ದರು. ಪಂದ್ಯದಲ್ಲಿ ಭಾರತ 157 ರನ್‌ ಜಯ ದಾಖಲಿಸಿತ್ತು.

ವಿವಿಯನ್‌ ರಿಚರ್ಡ್ಸ್ - 181 vs ಶ್ರೀಲಂಕಾ (1987)

ಅಂದಿನ ಕ್ರಿಕೆಟ್‌ ಕೂಸು ಶ್ರೀಲಂಕಾ ವಿರುದ್ಧ 2 ಬಾರಿಯ ವಿಶ್ವ ಚಾಂಪಿಯನ್ಸ್‌ ವೆಸ್ಟ್‌ ಇಂಡೀಸ್‌ ತಂಡ 45ಕ್ಕೆ 2 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು ಆದರೆ, ಲಂಕಾ ಬೌಲರ್‌ಗಳಿಗೆ ಕಿಂಚಿತ್ತೂ ಗೌರವ ಕೊಡದ ಸರ್‌ ವಿವಿಯನ್‌ ರಿಚರ್ಡ್ಸ್‌ ಒಡಿಐ ವಿಶ್ವಕಪ್‌ನ ಅತ್ಯಂತ ಸ್ಮರಣೀಯ ಇನಿಂಗ್ಸ್‌ ಆಡಿದ್ದರು. ಕರಾಚಿಯಲ್ಲಿ ನಡೆದ ಈ ಪಂದ್ಯದಲ್ಲಿ ವಿವಿಯನ್‌, 125 ಎಸೆತಗಳಲ್ಲಿ 16 ಫೋರ್‌ ಮತ್ತು 7 ಸಿಕ್ಸರ್‌ ಒಳಗೊಂಡ 181 ರನ್‌ಗಳ ಶತಕ ಬಾರಿಸಿದ್ದರು. ಅಂದಿಗೆ ಇದು ವಿಶ್ವಕಪ್‌ನಲ್ಲಿ ದಾಖಲಾದ ವೈಕ್ತಿಕ ಗರಿಷ್ಠ ಮೊತ್ತ ಕೂಡ. ರಿಚರ್ಡ್ಸ್‌ ಈ ಶತಕದ ಮೂಲಕ ಭಾರತದ ಆಲ್‌ರೌಂಡರ್‌ ಹರಿಯಾಣ ಹರಿಕೇನ್‌ ಕಪಿಲ್‌ ದೇವ್‌ ಅವರ 175* ರನ್‌ಗಳ ದಾಖಲೆಯನ್ನು ಮುರಿದಿದ್ದರು. ಪಂದ್ಯದಲ್ಲಿ ವಿಂಡೀಸ್‌ 191 ರನ್‌ಗಳ ಜಯ ದಾಖಲಿಸಿತ್ತು.

Story first published: Friday, May 17, 2019, 16:32 [IST]
Other articles published on May 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X