ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಗಾಯದ ನಡುವೆಯೂ ಅಭ್ಯಾಸ ನಡೆಸಿದ ಧವನ್-ವಿಡಿಯೋ

ICC World Cup 2019 : ಕೊನೆಗೂ ಅಖಾಡಕ್ಕಿಳಿದ ಶಿಖರ್ ಧವನ್..! | Oneindia Kannada
ICC World Cup: Shikhar Dhawan starts training with fractured thumb

ಲಂಡನ್, ಜೂನ್ 14: ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಕೈ ಬೆರಳಿಗೆ ತೀವ್ರ ಗಾಯವಾಗಿದೆ. ಗಾಯಕ್ಕೀಡಾಗಿರುವ ಅವರನ್ನು ಮುಂದಿನ ಎರಡು ಪಂದ್ಯಗಳಲ್ಲೂ ಮೈದಾನಕ್ಕಿಳಿಯುತ್ತಿಲ್ಲ. ಆದರೆ ಧವನ್ ಈಗಾಗಲೇ ಅಭ್ಯಾಸ ಶುರು ಮಾಡಿದ್ದಾರೆ. ಶಿಖರ್ ಅಭ್ಯಾಸ ಮೂಲಕ ಬೆವರಿಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 36 ರನ್‌ಗಳ ಗೆಲುವನ್ನಾಚರಿಸಿತ್ತು. ಇದರಲ್ಲಿ ಶಿಖರ್ ಧವನ್ ಅವರದ್ದೇ ಸಿಂಹಪಾಲು. 109 ಎಸೆತಗಳಿಗೆ 117 ರನ್ ಕೊಡುಗೆ ನೀಡಿದ್ದ ಗಬ್ಬರ್ ಸಿಂಗ್, ಕೊಹ್ಲಿ ಬಳಗದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಾಹಿಸಿದ್ದರು. ಆದರೆ ಇದೇ ಪಂದ್ಯದಲ್ಲಿ ಧವನ್ ಎಡಗೈ ಬೆರಳಿಗೆ ಗಾಯವಾಗಿತ್ತು.

ಬೆರಳಿಗೆ ಬ್ಯಾಂಡೇಜ್ ಕಟ್ಟಿಕೊಂಡು ಜಿಮ್ ನಲ್ಲಿ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿರುವ ಧವನ್, ಇಂಥ ಸಂದರ್ಭವನ್ನು ನೀವು ಕೆಟ್ಟ ಕನಸೆಂದು ಭಾವಿಸಬಹುದು ಅಥವಾ ತಿರುಗಿ ಬೀಳಲು ಅವಕಾಶವಾಗಿಯೂ ಬಳಸಿಕೊಳ್ಳಬಹುದು ಎಂಬರ್ಥದಲ್ಲಿ ಸಾಲನ್ನೂ ಬರೆದುಕೊಂಡಿದ್ದಾರೆ.

ಭಾರತ Vs ಪಾಕಿಸ್ತಾನ: ವಿಶ್ವಕಪ್‌ನ ಮರೆಯಲಾಗದ ಐದು ಕ್ಷಣಗಳುಭಾರತ Vs ಪಾಕಿಸ್ತಾನ: ವಿಶ್ವಕಪ್‌ನ ಮರೆಯಲಾಗದ ಐದು ಕ್ಷಣಗಳು

31ರ ಹರೆಯದ ಧವನ್ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಿಂದ, ಮುಂದಿನ ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಮತ್ತು ಜೂನ್ 22ರಂದು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಶಿಖರ್ ಸ್ಥಾನಕ್ಕೆ ಅನುಭವಿ ಬ್ಯಾಟ್ಸ್ಮನ್ ಕಮ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಅವಕಾಶ ಲಭಿಸಲಿದ್ದು, ಸ್ಟ್ಯಾಂಡ್‌ಬೈ ಆಟಗಾರರಾಗಿ ರಿಷಬ್ ಪಂತ್ ತಂಡದಲ್ಲಿರಲಿದ್ದಾರೆ.

Story first published: Friday, June 14, 2019, 15:29 [IST]
Other articles published on Jun 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X