ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೇಸಿ ಕ್ರಿಕೆಟಿಗರ ಪತ್ನಿ/ಗರ್ಲ್‌ಫ್ರೆಂಡ್ಸ್ ಭಾರತ-ಪಾಕ್ ವಿಶ್ವಕಪ್ ವೀಕ್ಷಿಸುವಂತಿಲ್ಲ!

ಆಟಗಾರರ ಪತ್ನಿಯರು ಪಾಕಿಸ್ತಾನ ವಿರುದ್ಧದ ಪಂದ್ಯ ನೋಡುವಂತಿಲ್ಲ..!
ICC World Cup: Team India WAGs to be allowed 21 days after tournament begins

ನವದೆಹಲಿ, ಮೇ 9: ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಕ್ರಿಕೆಟ್ ಆಟಗಾರರ ಪತ್ನಿಯರು ಯಾ ಗೆಳತಿಯರು ಖುದ್ದಾಗಿ ಪಂದ್ಯ ನಡೆಯುವ ಸ್ಥಳದಲ್ಲಿದ್ದು ಭಾರತ-ಪಾಕ್ ಪಂದ್ಯ ವೀಕ್ಷಿಸುವಂತಿಲ್ಲ. ಟೂರ್ನಿಯ ವೇಳೆ ಆಟಗಾರರ ಪತ್ನಿ/ಗೆಳತಿಯರು ಜೊತೆಗಿರುವುದಕ್ಕೆ ಸಂಬಂಧಿಸಿದ ಬಿಸಿಸಿಐ ನೀತಿಯನುಸಾರ ದೇಸಿ ಆಟಗಾರರ ಪತ್ನಿ/ಗೆಳತಿಯರಿಗೆ ಭಾರತ vs ಪಾಕ್ ಪಂದ್ಯದ ವೇಳೆ ಆಟಗಾರರ ಜೊತೆ ಇರುವ ಅವಕಾಶ ಇಲ್ಲವಾಗಿದೆ.

ಐಪಿಎಲ್ ಎಲಿಮಿನೇಟರ್: ಎಸ್‌ಆರ್‌ಎಚ್ ವಿರುದ್ಧ ಡಿಸಿಗೆ ರೋಚಕ ಗೆಲುವುಐಪಿಎಲ್ ಎಲಿಮಿನೇಟರ್: ಎಸ್‌ಆರ್‌ಎಚ್ ವಿರುದ್ಧ ಡಿಸಿಗೆ ರೋಚಕ ಗೆಲುವು

ವಿಶ್ವಕಪ್ ಟೂರ್ನಿಯ ವೇಳೆ ಭಾರತದ ಆಟಗಾರ ಮಡದಿಯರು, ಗೆಳತಿಯರು, ಕುಟುಂಬದ ಸದಸ್ಯರು ಅಥವಾ ಸಪೋರ್ಟ್ ಸ್ಟಾಫ್‌ 15 ದಿನಗಳ ಕಾಲ ಆಟಗಾರರ ಜೊತೆಗಿರಲು ಬಿಸಿಸಿಐ ಅನುವು ಮಾಡಿದೆ. ಆದರೆ ಟೂರ್ನಿ ಆರಂಭಗೊಂಡು ಮೂರು ವಾರಗಳ (21 ದಿನಗಳ) ಬಳಿಕವಷ್ಟೇ ಇದಕ್ಕೆ ಅವಕಾಶವಿದೆ ಎಂದು ಬಿಸಿಸಿಐ ತಿಳಿಸಿದೆ.

ಬಿಸಿಸಿಐ ಈ ನಿಯಮದ ಪ್ರಕಾರ ಆಟಗಾರರ ಪತ್ನಿ/ಗೆಳತಿಯರಿಗೆ ಭಾರತ vs ಪಾಕಿಸ್ತಾನ ಮೊದಲ ಮುಖಾಮುಖಿ ವೀಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಬದ್ಧ ಎದುರಾಳಿಗಳ ಈ ಪಂದ್ಯ ಜೂನ್ 16ರಂದು ನಡೆಯಲಿದೆ. ಆಗ ಟೂರ್ನಿ ಆರಂಭವಾಗಿ 21 ದಿನಗಳು ಕಳೆದಿರೋಲ್ಲ.

ಹಾರ್ದಿಕ್‌ ಪಾಂಡ್ಯ ಭವಿಷ್ಯ ನುಡಿದ ಯುವರಾಜ್‌ ಸಿಂಗ್‌!ಹಾರ್ದಿಕ್‌ ಪಾಂಡ್ಯ ಭವಿಷ್ಯ ನುಡಿದ ಯುವರಾಜ್‌ ಸಿಂಗ್‌!

ಹಿಂದೊಮ್ಮೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ತಂಡದಲ್ಲಿ ಆಟಗಾರರು ಮತ್ತವರ ಕುಟುಂಬದ ಸದಸ್ಯರು ಸೇರಿ ಒಟ್ಟಿಗೆ ಸುಮಾರು 37 ಮಂದಿಯಿದ್ದರು. ಆಗ ತಂಡ ಸಮಿತಿಯ ಅಧಿಕಾರಿಗಳು ಇಷ್ಟು ಮಂದಿಯನ್ನು ನಿಭಾಯಿಸಲು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡೇ ಬಿಸಿಸಿಐ ಈ ಮಾರ್ಗದರ್ಶನಗಳನ್ನು ಜಾರಿಗೊಳಿಸಿದೆ.

Story first published: Thursday, May 9, 2019, 0:03 [IST]
Other articles published on May 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X