ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಕ್ರೀಡಾ ಸ್ಫೂರ್ತಿಯಿಂದ ವಿಶ್ವದ ಗಮನ ಸೆಳೆದ ಕಿಂಗ್ ಕೊಹ್ಲಿ

ICC World Cup 2019 : ಕೊಹ್ಲಿ ಕ್ರೀಡಾ ಸ್ಪೂರ್ತಿಗೆ ತಲೆಬಾಗಿದ ಕ್ರೀಡಾ ಜಗತ್ತು..? | Oneindia Kannada
ICC World Cup: Virat Kohli asks crowd not to boo Steve Smith

ಲಂಡನ್, ಜೂನ್ 10: ಐಸಿಸಿ ಟೆಸ್ಟ್ ಮತ್ತು ಏಕದಿನ ರ್ಯಾಂಕಿಂಗ್‌ನಲ್ಲಿ ವಿಶ್ವ ನಂ.1 ಆಟಗಾರನಾಗಿದ್ದರೂ ದೊಡ್ಡಸ್ತಿಕೆಯಿಲ್ಲದೆ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ. ಭಾನುವಾರದ (ಜೂನ್ 9) ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿ ಕ್ರೀಡಾಸ್ಫೂರ್ತಿಗಾಗಿ ವಿಶ್ವದ ಗಮನ ಸೆಳೆದರು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾನುವಾರ ನಡೆದ ವಿಶ್ವಕಪ್ 14ನೇ ಪಂದ್ಯದಲ್ಲಿ ಭಾರತ-ಅಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಭಾರತದ ಅಭಿಮಾನಿಗಳು ತಮಾಷೆ ಮಾಡಿದಾಗ ಕೊಹ್ಲಿ, ಹೀಗೆಲ್ಲ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.

ಧೋನಿ ಮಾತ್ರವಲ್ಲ, 'ಯೂನಿವರ್ಸ್ ಬಾಸ್‌' ಮನವಿಗೂ ಒಲ್ಲೆಯೆಂದ ಐಸಿಸಿ!ಧೋನಿ ಮಾತ್ರವಲ್ಲ, 'ಯೂನಿವರ್ಸ್ ಬಾಸ್‌' ಮನವಿಗೂ ಒಲ್ಲೆಯೆಂದ ಐಸಿಸಿ!

ಅರಿತೋ, ಅರಿಯದೆಯೋ ಎಲ್ಲರೂ ತಪ್ಪು ಮಾಡುವವರೆ. ಅದನ್ನೇ ಮುಂದಿಟ್ಟುಕೊಂಡು ಒಬ್ಬರಿಗೆ ನೋಯಿಸಬಾರದು ಎಂಬ ಕೊಹ್ಲಿ ಕಳಕಳಿಗೆ ಕ್ರಿಕೆಟ್ ಲೋಕ ಮೆಚ್ಚುಗೆ ವ್ಯಕ್ತಪಡಿಸಿದೆ.

ಚಪ್ಪಾಳೆ ತಟ್ಟಿ ಎಂದ ಕೊಹ್ಲಿ

ಟೀಮ್ ಇಂಡಿಯಾ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ಫೀಲ್ಡಿಂಗ್ ಮಾಡುತ್ತಿದ್ದ ಸ್ಮಿತ್ ಅವರನ್ನು ಭಾರತೀಯ ಅಭಿಮಾನಿಗಳೇ ಹೆಚ್ಚಿದ್ದ ಗುಂಪು ಗೇಲಿ ಮಾಡಿದ್ದನ್ನು ಕೊಹ್ಲಿ ಗಮನಿಸಿದ್ದರು. ಡ್ರಿಂಕ್ಸ್ ಬ್ರೇಕ್ ವೇಳೆ ಅಭಿಮಾನಿಗಳ ಗುಂಪಿನ ಸಮೀಪಕ್ಕೆ ಬಂದ ಕೊಹ್ಲಿ ಆಟಗಾರರನ್ನು ಗೇಲಿ ಮಾಡಬೇಡಿ, ಬದಲಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಎಂದು ವಿನಂತಿಸಿಕೊಂಡಿದ್ದರಲ್ಲದೆ ಹೀಗಾಗಿದ್ದಕ್ಕೆ ಅಭಿಮಾನಿಗಳ ಪರವಾಗಿ ಕೊಹ್ಲಿ ಸ್ಮಿತ್ ಅವರಲ್ಲಿ ಕ್ಷಮೆಯೂ ಕೇಳಿದ್ದರು.

ಚೆಂಡು ವಿರೂಪ ಪ್ರಕರಣ

ದಕ್ಷಿಣ ಆಫ್ರಿಕಾದಲ್ಲಿ ಆತಿಥೇಯರ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯ ವೇಳೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಚೆಂಡು ವಿರೂಪದಲ್ಲಿ ಪಾಲ್ಗೊಂಡು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷದ ನಿಷೇಧಕ್ಕೆ ಗುರಿಯಾಗಿದ್ದರು. ನಿಷೇಧ ಮುಗಿಸಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ಇಬ್ಬರನ್ನೂ ಕ್ರಿಕೆಟ್ ಅಭಿಮಾನಿಗಳು ಗೇಲಿ ಮಾಡುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ.

ಸ್ಪಿರಿಟ್ ಆಫ್ ಕ್ರಿಕೆಟ್

'ಮೈದಾನದ ತುದಿಯಲ್ಲಿ ಫೀಲ್ಟಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಅವರಿಗೆ ಭಾರತೀಯ ಅಭಿಮಾನಿಗಳು ತೊಂದರೆ ನೀಡುತ್ತಿದ್ದಾಗ, ಗೇಲಿ ಮಾಡುವ ಬದಲು ಚಪ್ಪಾಳೆ ತಟ್ಟಲು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಲಹೆ ಮಾಡಿದರು' ಎಂದು ಐಸಿಸಿ ವಿಡಿಯೋ ಟ್ವೀಟ್ ಮಾಡಿದೆ. ವಿಡಿಯೋ ಜೊತೆಗೆ 'ಸ್ಪಿರಿಟ್ ಆಫ್ ಕ್ರಿಕೆಟ್' ಹ್ಯಾಷ್ ಟ್ಯಾಗ್ ಕೂಡ ಬಳಸಿಕೊಂಡಿರುವ ಐಸಿಸಿ ಕೊಹ್ಲಿಯನ್ನು ಶ್ಲಾಘಿಸಿದೆ.

ಭಾರತಕ್ಕೆ 2ನೇ ಗೆಲುವು

ಈ ಪಂದ್ಯದಲ್ಲಿ ಶಿಖರ್ ಧವನ್ ಅವರ ಆಕರ್ಷಕ ಶತಕ (117 ರನ್), ವಿರಾಟ್ ಕೊಹ್ಲಿ (82), ರೋಹಿತ್ ಶರ್ಮಾ (57) ಅರ್ಧಶತಕ, ಹಾರ್ದಿಕ್ ಪಾಂಡ್ಯ 48 ರನ್ ನೆರವಿನಿಂದ ಭಾರತ 36 ರನ್ ಗೆಲುವನ್ನಾಚರಿಸಿತು. ಸ್ಮಿತ್ 69, ಡೇವಿಡ್ ವಾರ್ನರ್ 56 ರನ್ ಸೇರಿಸಿದರಾದರೂ ಹಾಲಿ ಚಾಂಪಿಯನ್ಸ್‌ಗೆ ಗೆಲುವು ಒಲಿಯಲಿಲ್ಲ.

Story first published: Monday, June 10, 2019, 11:21 [IST]
Other articles published on Jun 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X