ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23: ದ. ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಭಾರತದ ಪಾಯಿಂಟ್ಸ್ ಎಷ್ಟು?

Team India ಸರಣಿ ಸೋಲಿನ ಬಳಿಕ Points Tableನಲ್ಲಿ ಯಾವ ಸ್ಥಾನದಲ್ಲಿದೆ | Oneindia Kannada

ಪ್ರಸ್ತುತ 2021-23ರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅವಧಿಯಲ್ಲಿ ಭಾರತ ಮೊಟ್ಟ ಮೊದಲ ಟೆಸ್ಟ್ ಸರಣಿ ಸೋಲನ್ನ ಕಂಡಿದೆ. ಈ ಮೂಲಕ ಕಳೆದ ಅವಧಿಯಲ್ಲಿ ರನ್ನರ್ ಅಪ್ ಆಗಿದ್ದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (2021-23) ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ. ಆದ್ರೆ ಅದೇ ಭರ್ಜರಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.

ಭಾರತ ಐಸಿಸಿ ಟೆಸ್ಟ್ ಚಾಂಪಿಯನ್‌ ಶಿಪ್‌ನ ಪ್ರಸ್ತುತ ಅವಧಿಯಲ್ಲಿ 9 ಟೆಸ್ಟ್ ಪಂದ್ಯಗಳನ್ನ ಆಡಿದೆ. ಇದರಲ್ಲಿ 4 ಪಂದ್ಯ ಗೆಲುವು, 3 ಪಂದ್ಯದಲ್ಲಿ ಸೋಲು ಮತ್ತು 2 ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಒಟ್ಟಾರೆ 3 ಸರಣಿಯಿಂದ ಭಾರತ 53 ಪಾಯಿಂಟ್ಸ್ ಕಲೆಹಾಕಿದ್ದು, ನಿಧಾನಗತಿಯ ಓವರ್ ಹಿನ್ನಲೆಯಲ್ಲಿ ಈಗಾಗಲೇ 3 ಪೆನಾಲ್ಟಿ ಪಾಯಿಂಟ್ಸ್ ಕಳೆದುಕೊಂಡು 49.07% ಹೊಂದಿದೆ. ಇಂಗ್ಲೆಂಡ್ ಅತಿ ಹೆಚ್ಚು 10 ಪೆನಾಲ್ಟಿ ಮೂಲಕ ಪಾಯಿಂಟ್ಸ್ ಟೇಬಲ್‌ನ ತಳಭಾಗದಲ್ಲಿದೆ.

ಕಾಲೆಳೆದ ಮೈಕಲ್ ವಾನ್‌ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ ವಾಸಿಂ ಜಾಫರ್ಕಾಲೆಳೆದ ಮೈಕಲ್ ವಾನ್‌ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ ವಾಸಿಂ ಜಾಫರ್

ಮತ್ತೊಂದೆಡೆ, ದಕ್ಷಿಣ ಆಫ್ರಿಕಾವು ಆಡಿರುವ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಎರಡನ್ನು ಗೆದ್ದಿದೆ ಮತ್ತು ಒಂದು ಪಂದ್ಯದಲ್ಲಿ ಸೋತಿದೆ. ಭಾರತ ಒಟ್ಟಾರೆ 24 ಅಂಕಗಳನ್ನು ಪಡೆಯುವ ಮೂಲಕ 66.66% ಹೊಂದಿದ್ದು ನಾಲ್ಕನೇ ಸ್ಥಾನ ಅಲಂಕರಿಸಿದೆ.

ಆಶ್ಚರ್ಯವೆಂಬಂತೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಶ್ರೀಲಂಕಾ ಅಗ್ರಸ್ಥಾನ ಅಲಂಕರಿಸಿದೆ. 100% ಗೆಲುವನ್ನ ಹೊಂದಿರುವ ಆಡಿರುವ ಎರಡು ಪಂದ್ಯಗಳನ್ನ ಗೆದ್ದಿದೆ. ಲಂಕಾ ನಂತರದಲ್ಲಿ ಆಸ್ಟ್ರೇಲಿಯಾ ಆಡಿರುವ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಮೂರು ಗೆಲುವು ಮತ್ತು 1 ಪಂದ್ಯ ಡ್ರಾನೊಂದಿಗೆ 40 ಪಾಯಿಂಟ್ಸ್‌ನೊಂದಿಗೆ (83.33%) ದ್ವಿತೀಯ ಸ್ಥಾನದಲ್ಲಿದೆ.

ಇದರ ನಂತರದಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡವು 75% ಗೆಲುವನ್ನ ಹೊಂದಿದ್ದು, ಆಡಿರುವ ನಾಲ್ಕು ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಪಂದ್ಯ ಸೋಲಿನ ಮೂಲಕ 36 ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಕ್ರಿಕೆಟ್ ಜನಕರು ಇಂಗ್ಲೆಂಡ್ ಹೀನಾಯ ಸೋಲು ಕಂಡಿದ್ದು, 10.41 ಪರ್ಸಂಟೇಜ್‌ನೊಂದಿಗೆ ಪಾಯಿಂಟ್ಸ್ ಟೇಬಲ್ ಕೆಳಭಾಗದಲ್ಲಿದೆ. ಜೋ ರೂಟ್ ನೇತೃತ್ವದ ತಂಡವು ತನ್ನ 10 ಟೆಸ್ಟ್‌ಗಳಲ್ಲಿ ಕೇವಲ ಒಂದನ್ನು ಗೆದ್ದಿದೆ ಮತ್ತು ಐದರಲ್ಲಿ ಸೋಲು ಮತ್ತು ಎರಡನ್ನು ಡ್ರಾ ಮಾಡಿಕೊಂಡಿದೆ. 10 ಪಾಯಿಂಟ್ಸ್‌ಗಳನ್ನ ಪೆನಾಲ್ಟಿಯಾಗಿ ಇಂಗ್ಲೆಂಡ್ ಕಳೆದುಕೊಂಡಿದೆ.

ICC ನಿಯಮಗಳ ಪ್ರಕಾರ, ನಿಧಾನವಾದ ಓವರ್-ರೇಟ್‌ಗಳಿಗಾಗಿ ತಂಡಗಳು ಪ್ರತಿ ಓವರ್‌ಗೆ ಒಂದು ಚಾಂಪಿಯನ್‌ಶಿಪ್ ಪಾಯಿಂಟ್ ಅನ್ನು ಕಳೆದುಕೊಳ್ಳುತ್ತವೆ. ಭಾರತ ಹೀಗೆ 3 ಪಾಯಿಂಟ್ಸ್‌ ನಷ್ಟ ಮಾಡಿಕೊಂಡಿದೆ.

ಭಾರತವು 2021-23ರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಇಂಗ್ಲೆಂಡ್‌ನಿಂದ ಪ್ರಾರಂಭಿಸಿತು. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿತ್ತು. ಆದ್ರೆ ಅಂತಿಮ ಪಂದ್ಯ ಕೋವಿಡ್-19 ಕಾರಣಗಳಿಂದ ಮುಂದೂಡಲ್ಪಟ್ಟಿತು.

ಪೂಜಾರ, ರಹಾನೆ ಭವಿಷ್ಯದ ಕಥೆಯೇನು?: ಪತ್ರಕರ್ತರ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ವಿರಾಟ್ ಕೊಹ್ಲಿಪೂಜಾರ, ರಹಾನೆ ಭವಿಷ್ಯದ ಕಥೆಯೇನು?: ಪತ್ರಕರ್ತರ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ವಿರಾಟ್ ಕೊಹ್ಲಿ

ಇದಾದ ಬಳಿಕ ಭಾರತವು ಎರಡು ಪಂದ್ಯಗಳ ಟೆಸ್ಟ್‌ಗಳ ಸರಣಿಯಲ್ಲಿ ಆತಿಥ್ಯ ವಹಿಸಿತ್ತು. ನ್ಯೂಜಿಲೆಂಡ್ ವಿರುದ್ಧ ಕಾನ್ಪುರ ಮತ್ತು ಮುಂಬೈನಲ್ಲಿ ಎರಡು ಪಂದ್ಯಗಳನ್ನ ಆಡಿತು. ಮೊದಲ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿದ್ದು, ಎರಡನೇ ಪಂದ್ಯದಲ್ಲಿ ಭಾರತ ಬೃಹತ್ ಜಯ ದಾಖಲಿಸಿ 1-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

ಭಾರತವು ಈ ವರ್ಷದ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಎರಡು ಟೆಸ್ಟ್‌ಗಳ ಸರಣಿಗಾಗಿ ಆತಿಥ್ಯ ವಹಿಸಲಿದ್ದು, ಶ್ರೀಲಂಕಾವನ್ನು ಎದುರಿಸಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, January 15, 2022, 12:44 [IST]
Other articles published on Jan 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X