WTC Final: ನಗದು ಪುರಸ್ಕಾರ, ಕುತೂಹಲಕಾರಿ ದಾಖಲೆಗಳ ಸಂಪೂರ್ಣ ವಿವರ

WTC ಫೈನಲ್ ಪಂದ್ಯದ ದಾಖಲೆಯ ಪಟ್ಟಿಯಲ್ಲಿ ದಾಖಲಾದ ಟೀಮ್ ಇಂಡಿಯಾ ಬೌಲರ್

ಸೌಥಾಂಪ್ಟನ್: ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ ಚೊಚ್ಚಲ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಭಾರತ ವಿರುದ್ಧ ಕೇನ್ ವಿಲಿಯಮ್ಸನ್ ಪಡೆ 8 ವಿಕೆಟ್‌ಗಳ ಸುಲಭ ಜಯದೊಂದಿಗೆ ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂ ಅಪರೂಪದ ಪಂದ್ಯಕ್ಕೆ ಸಾಕ್ಷಿಯಾಗಿದ್ದು, ವಿರಾಟ್ ಕೊಹ್ಲಿ ಪಡೆ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟಿದೆ.

WTC Final: ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ ಅಭಿಮಾನಿಯ ಈ ವಿಡಿಯೋ!WTC Final: ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ ಅಭಿಮಾನಿಯ ಈ ವಿಡಿಯೋ!

ವಿಶ್ವಕ್ರಿಕೆಟ್ ಕುತೂಹಲದಿಂದ ಕಾಯುತ್ತಿದ್ದ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಬ್ಲ್ಯಾಕ್‌ಕ್ಯಾಪ್ಸ್ ವಿಜಯದ ಕೇಕೆ ಹಾಕಿದ್ದಾಗಿದೆ. ಫೈನಲ್ ಮುಕ್ತಾಯದ ಬಳಿಕ ತಂಡಗಳಿಗೆ ಲಭಿಸುವ ನಗದು ಪ್ರಶಸ್ತಿ, ಚಾಂಪಿಯನ್‌ಶಿಪ್‌ನಲ್ಲಾದ ಎಲ್ಲಾ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಂಕ್ಷಿಪ್ತ ಸ್ಕೋರ್‌

ಸಂಕ್ಷಿಪ್ತ ಸ್ಕೋರ್‌

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 217 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 170 ರನ್ ಗಳಿಸಿತ್ತು. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 249 ರನ್ ಪೇರಿಸಿದ್ದರಿಂದ ಅಂತಿಮ ಇನ್ನಿಂಗ್ಸ್‌ನಲ್ಲಿ ಕಿವೀಸ್ 53 ಓವರ್‌ಗೆ 139 ರನ್ ಗಳಿಸಬೇಕಿತ್ತು. ರಿಸರ್ವ್ ಡೇಯಲ್ಲಿ ಅಂದರೆ ಕೊನೇ ದಿನ ಪಂದ್ಯ ನಡೆದಿದ್ದರಿಂದ ನ್ಯೂಜಿಲೆಂಡ್ ಗೆಲುವಿಗೆ ಈ ರನ್ ಗುರಿ ನೀಡಲಾಗಿತ್ತು. ಕೇನ್ ವಿಲಿಯಮ್ಸನ್ ಪಡೆ 45.5ನೇ ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 140 ರನ್ ಬಾರಿಸಿ ಗೆಲುವನ್ನಾಚರಿಸಿತು.

ನಗದು ಪುರಸ್ಕಾರಗಳು

ನಗದು ಪುರಸ್ಕಾರಗಳು

ಫೈನಲ್‌ ಪಂದ್ಯದಲ್ಲಿ ಚಾಂಪಿಯನ್ಸ್‌ ಆಗಿ ಮೂಡಿಬಂದ ನ್ಯೂಜಿಲೆಂಡ್‌ಗೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಟ್ರೋಫಿ ಜೊತೆಗೆ ಗದೆ, ಪದಕ ಮತ್ತು 1.6 ಮಿಲಿಯನ್ ಡಾಲರ್ (ಸುಮಾರು 12 ಕೋಟಿ ರೂ.) ನಗದು ಪುರಸ್ಕಾರ ಲಭಿಸಿದೆ. ರನ್ನರ್ಸ್ ಪ್ರಶಸ್ತಿ ಗೆದ್ದಿರುವ ಭಾರತಕ್ಕೆ 800,000 ಡಾಲರ್ (ಸುಮಾರು 6 ಕೋಟಿ ರೂ.) ನಗದು ಪುರಸ್ಕಾರ ದೊರೆತಿದೆ.

ಅತ್ಯಧಿಕ ರನ್ ದಾಖಲೆ

ಅತ್ಯಧಿಕ ರನ್ ದಾಖಲೆ

* ಮಾರ್ನಸ್ ಲ್ಯಾಬುಶೇನ್ (ಆಸ್ಟ್ರೇಲಿಯಾ)

* ಟೆಸ್ಟ್ - 13

* ರನ್‌ಗಳು- 1675

* ಗರಿಷ್ಠ ಸ್ಕೋರ್ - 215

* ಸರಾಸರಿ - 72.82

* ಶತಕಗಳು - 5

* ಅರ್ಧ ಶತಕಗಳು - 9

* ಬೌಂಡರಿಗಳು - 186

* ಸಿಕ್ಸರ್‌ಗಳು - 3

ಅತ್ಯಧಿಕ ವಿಕೆಟ್‌ಗಳು

ಅತ್ಯಧಿಕ ವಿಕೆಟ್‌ಗಳು

* ರವಿಚಂದ್ರನ್ ಅಶ್ವಿನ್ (ಭಾರತ)

* ಟೆಸ್ಟ್‌ಗಳು - 14

* ವಿಕೆಟ್‌ಗಳು - 71

* ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ - 7/145

* ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ - 9/207

* ಎಕಾನಮಿ - 2.62

* ಐದು ವಿಕೆಟ್ ಗಳಿಕೆ: 5 ಸಾರಿ

ಇನ್ನಿತರ ದಾಖಲೆಗಳು

ಇನ್ನಿತರ ದಾಖಲೆಗಳು

* ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 4 ವಿಕೆಟ್‌ ಸಾಧನೆ ಮಾಡಿದ ಮೊದಲ ಭಾರತೀಯ ಮೊಹಮ್ಮದ್ ಶಮಿ.

* ಇದಕ್ಕೂ ಮುನ್ನ 1983ರ ವಿಶ್ವಕಪ್‌ನಲ್ಲಿ ಭಾರತದ ಮೋಹೀಂದರ್ ಅಮರನಾಥ್ 3/12 ಸಾಧನೆ ದಾಖಲೆಯಾಗಿತ್ತು.

* WTC ಫೈನಲ್ ಪಂದ್ಯದಲ್ಲಿ ಮೊದಲ ಅರ್ಧ ಶತಕ ಬಾರಿಸಿದ ಹಿರಿಮೆ ಡೆವೊನ್ ಕಾನ್ವೇ (ನ್ಯೂಜಿಲೆಂಡ್).

* WTC ಫೈನಲ್ ಪಂದ್ಯದಲ್ಲಿ ಐದು ವಿಕೆಟ್ ಮೊದಲ ದಾಖಲೆ ಕೈಲ್ ಜೇಮಿಸನ್ (ನ್ಯೂಜಿಲೆಂಡ್)

ಐಸಿಸಿ ಫೈನಲ್‌ ಪಂದ್ಯಗಳಲ್ಲಿ ಕಿವೀಸ್ ನಾಯಕರ ರನ್

ಐಸಿಸಿ ಫೈನಲ್‌ ಪಂದ್ಯಗಳಲ್ಲಿ ಕಿವೀಸ್ ನಾಯಕರ ರನ್

* 49 & 52 * - ಕೇನ್ ವಿಲಿಯಮ್ಸನ್, 2021ರ WTC

* 30 - ಕೇನ್ ವಿಲಿಯಮ್ಸನ್, 2019ರ ಏಕದಿನ ವಿಶ್ವಕಪ್

* 5 - ಸ್ಟೀಫನ್ ಫ್ಲೆಮಿಂಗ್, 2000ರ ಚಾಂಪಿಯನ್ಸ್ ಟ್ರೋಫಿ

* 0 - ಬ್ರೆಂಡನ್ ಮೆಕಲಮ್, 2009ರ ಚಾಂಪಿಯನ್ಸ್ ಟ್ರೋಫಿ

* 0 - ಬ್ರೆಂಡನ್ ಮೆಕಲಮ್, 2015ರ ವಿಶ್ವಕಪ್‌

For Quick Alerts
ALLOW NOTIFICATIONS
For Daily Alerts
Story first published: Thursday, June 24, 2021, 2:29 [IST]
Other articles published on Jun 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X