ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC World Test Championship Final ಪಂದ್ಯದ ಪ್ರಮುಖ ನಿಯಮಗಳಿವು!

ICC World Test Championship Final, India vs New Zealand, Playing Conditions

ಸೌತಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಜೂನ್ 18-22ರ ವರೆಗೆ ಕುತೂಹಲಕಾರಿ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ. ಸೌತಾಂಪ್ಟನ್‌ನ ಏಜಸ್‌ಬೌಲ್ ಸ್ಟೇಡಿಯಂನಲ್ಲಿ ಪಂದ್ಯ 3.30 PMಗೆ ಶುರುವಾಗಲಿದೆ. ಟೆಸ್ಟ್‌ ಚಾಂಪಿಯನ್‌ಶಿಪ್‌ ಚೊಚ್ಚಲ ಆವೃತ್ತಿಯ ಫೈನಲ್ ಪಂದ್ಯವಿದು.

ಸ್ಪಾಟ್‌ ಫಿಕ್ಸಿಂಗ್ ಆರೋಪಿ ಅಂಕಿತ್ ಚೌವಾಣ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ರೆಡಿ!ಸ್ಪಾಟ್‌ ಫಿಕ್ಸಿಂಗ್ ಆರೋಪಿ ಅಂಕಿತ್ ಚೌವಾಣ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ರೆಡಿ!

ಭಾರತ ಮತ್ತು ನ್ಯೂಜಿಲೆಂಡ್ ಎರಡೂ ದೇಶಗಳೂ ಟೆಸ್ಟ್‌ ಚಾಂಪಿಯನ್‌ಶಿಪ್‌ಗಾಗಿ 15 ಜನರ ತಂಡಗಳನ್ನು ಪ್ರಕಟಿಸಿವೆ. ಎರಡೂ ತಂಡಗಳೂ ಬಲಿಷ್ಠವಾಗಿವೆ. ನ್ಯೂಜಿಲೆಂಡ್‌ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿ ಆಡಿದ್ದರೆ, ಭಾರತೀಯ ತಂಡ ಅಂತರ್ ಅಭ್ಯಾಸ ಪಂದ್ಯ ಆಡಿ ಪ್ರಶಸ್ತಿ ಪಂದ್ಯಕ್ಕೆ ಸಜ್ಜಾಗಿದೆ.

WTC Finalಗೆ ವೆಂಕಟೇಶ್ ಪ್ರಸಾದ್ ನೆಚ್ಚಿನ ಭಾರತ XI ಹೇಗಿದೆ ನೋಡಿ!WTC Finalಗೆ ವೆಂಕಟೇಶ್ ಪ್ರಸಾದ್ ನೆಚ್ಚಿನ ಭಾರತ XI ಹೇಗಿದೆ ನೋಡಿ!

ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಐಸಿಸಿ ವಿಶೇಷ ನಿಯಮಗಳನ್ನು ಪಾಲಿಸಲಿದೆ. ಅವುಗಳ ಪಟ್ಟಿ ಇಲ್ಲಿದೆ
* ಗ್ರೇಡ್-1 ಡ್ಯೂಕ್ ಕ್ರಿಕೆಟ್ ಚೆಂಡುಗಳು ಫೈನಲ್ ಪಂದ್ಯಕ್ಕೆ ಬಳಸಲಾಗುತ್ತದೆ.
* ಎಲ್‌ಬಿಡಬ್ಲ್ಯೂ ಪರಿಶೀಲನೆ ವೇಳೆ ಸ್ಟಂಪ್‌ನ ಮೇಲ್ತುದಿಯವರೆಗೂ ಪರಿಗಣಿಸಿ ತೀರ್ಪು ನೀಡಲಾಗುತ್ತದೆ.
* ಆಡಬೇಕಾದ ಆಟದ ಸಮಯಕ್ಕೆ ತೊಂದರೆಯಾಗಿ ಆ ಸಮಯವನ್ನು ಸರಿ ಹೊಂದಿಸಲಾಗದಿದ್ದರೆ ಮಾತ್ರ ರಿಸರ್ವ್‌ ಡೇಯನ್ನು ಬಳಸಿಕೊಳ್ಳಲಾಗುತ್ತದೆ.
* ಪಂದ್ಯ ಟೈ ಅಥವಾ ಡ್ರಾ ಎನಿಸಿದರೆ ಎರಡೂ ತಂಡಗಳನ್ನೂ ವಿಜೇತರೆಂದು ಘೋಷಿಸಲಾಗುತ್ತದೆ.
* ಆನ್‌ಫೀಲ್ಡ್ ಅಂಪೈರ್‌ ಶಾರ್ಟ್‌ ರನ್‌ಗೆ ಕರೆ ಕೊಟ್ಟರೆ ಅದನ್ನು ಟಿವಿ ಅಂಪೈರ್ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.
* ಎಲ್‌ಬಿಡಬ್ಲ್ಯೂ ರಿವ್ಯೂಗೆ ಕೋರಿಕೆ ಸಲ್ಲಿಸುವ ಮುನ್ನ ಆಟಗಾರರು ಅಂಪೈರ್ ಜೊತೆ ಸಮಾಲೋಚಿಸಲು ಅನುಮತಿ ನೀಡಲಾಗಿದೆ. ಅಂದರೆ ಬ್ಯಾಟ್ಸ್‌ಮನ್‌ ನಿಜಕ್ಕೂ ಚೆಂಡನ್ನು ಆಡಲು ಯತ್ನಿಸಿದ್ದಾನಾ ಇಲ್ಲವಾ ಅನ್ನೋದನ್ನು ತಿಳಿದುಕೊಳ್ಳಬಹುದಾಗಿದೆ.

Story first published: Thursday, June 17, 2021, 14:52 [IST]
Other articles published on Jun 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X