ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC World Test Championship: ಮತ್ತೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಭಾರತ

ICC World Test Championship: India Reclaim Top Spot in Points Table

ಲಂಡನ್‌: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಟೀಮ್ ಇಂಡಿಯಾ ಮತ್ತೆ ನಂ.1 ಸ್ಥಾನಕ್ಕೇರಿದೆ. ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಭಾಗವಾಗಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್‌ ಸರಣಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿರುವುದರಿಂದ ಪಾಯಿಂಟ್ಸ್ ಟೇಬಲ್‌ನಲ್ಲಿ ವಿರಾಟ್ ಕೊಹ್ಲಿ ಪಡೆ ಮೊದಲ ಸ್ಥಾನಕ್ಕೇರಿದೆ. ದ್ವಿತೀಯ ಸ್ಥಾನದಲ್ಲಿ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ತಂಡವಿದೆ.

ರೋಹಿತ್ ಶರ್ಮಾಗೆ ಗಾಯ, 5ನೇ ಟೆಸ್ಟ್‌ನಲ್ಲಿ ಆಡೋ ಬಗ್ಗೆ ಸುಳಿವಿತ್ತ ಹಿಟ್‌ಮ್ಯಾನ್ರೋಹಿತ್ ಶರ್ಮಾಗೆ ಗಾಯ, 5ನೇ ಟೆಸ್ಟ್‌ನಲ್ಲಿ ಆಡೋ ಬಗ್ಗೆ ಸುಳಿವಿತ್ತ ಹಿಟ್‌ಮ್ಯಾನ್

ಸೋಮವಾರ (ಸೆಪ್ಟೆಂಬರ್‌ 6) ಮುಕ್ತಾಯಗೊಂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ 157 ರನ್ ಜಯ ಗಳಿಸಿದೆ. ಜೊತೆಗೆ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-1ರ ಮುನ್ನಡೆಯೂ ಸಾಧಿಸಿದೆ. ಹೀಗಾಗಿ ಟೀಮ್ ಇಂಡಿಯಾ WTC ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನಕ್ಕೇರಿದೆ.

ಟೀಮ್ ಇಂಡಿಯಾದ ಖಾತೆಯಲ್ಲಿ 26 ಅಂಕಗಳು
ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಆರಂಭಿಕ ಆವೃತ್ತಿ ಮುಕ್ತಾಯಗೊಂಡ ಬಳಿಕ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯೊಂದಿಗೆ ದ್ವಿತೀಯ ಆವೃತ್ತಿ ಶುರುವಾಗಿದೆ. ಹಿಂದಿನ ಆವೃತ್ತಿಯ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಕಾದಾಡಿದ್ದವು. ಇದರಲ್ಲಿ ನ್ಯೂಜಿಲೆಂಡ್ ಚಾಂಪಿಯನ್ಸ್ ತಂಡವಾಗಿ ಹೊರ ಹೊಮ್ಮಿತ್ತು. ಈ ಆವೃತ್ತಿಯಲ್ಲಿ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿದ್ದು, ಭಾರತ 2 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 1 ಪಂದ್ಯ ಗೆದ್ದಿದೆ. ಆರಂಭಿಕ ಪಂದ್ಯ ಡ್ರಾ ಎನಿಸಿತ್ತು. ಆಡಿದ ನಾಲ್ಕು ಪಂದ್ಯಗಳಲ್ಲಿ 2 ಗೆಲುವು, 1 ಸೋಲು, 1 ಡ್ರಾದೊಂದಿಗೆ ಭಾರತ WTC ಅಂಕಪಟ್ಟಿಯಲ್ಲಿ 26 ಅಂಕ ಕಲೆ ಹಾಕಿದೆ. ಶೇಕಡಾವಾರು ಗೆಲುವಿನಲ್ಲಿ 54.17 ಶೇ. ಪಾಯಿಂಟ್ಸ್‌ ಗಳಿಸಿದೆ. ಆದರೆ ಸ್ಲೋ ಓವರ್‌ ರೇಟ್‌ಗಾಗಿ ಭಾರತ ಎರಡು ಪೆನಾಲ್ಟಿ ಓವರ್‌ಗಳನ್ನು ಹೊಂದಿದೆ.

ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿ ಪಾಕಿಸ್ತಾನ, ವೆಸ್ಟ್‌ ಇಂಡೀಸ್
ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಭಾಗವಾಗಿ ಈ ವರೆಗೆ ಭಾರತ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ವೆಸ್ಟ್‌ ಇಂಡೀಸ್ ತಂಡಗಳು ಮಾತ್ರ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಂಡಿವೆ. ಇವುಗಳಲ್ಲಿ ಪಾಕಿಸ್ತಾನ ಸದ್ಯ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ವೆಸ್ಟ್‌ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆಡಿರುವ ಪಾಕಿಸ್ತಾನ, 1 ಪಂದ್ಯ ಗೆದ್ದು, ಒಂದು ಪಂದ್ಯ ಸೋತು 12 ಅಂಕ ಕಲೆ ಹಾಕಿದೆ. 50.00 ಶೇಕಡಾ ಅಂಕ ಪಾಕ್ ಖಾತೆಯಲ್ಲಿದೆ. ತೃತೀಯ ಸ್ಥಾನದಲ್ಲಿರುವ ವೆಸ್ಟ್‌ ಇಂಡೀಸ್ ಕೂಡ ಪಾಕ್‌ಗೆ ಸಮಾನ ಪಾಯಿಂಟ್ಸ್‌, ಶೇಕಡಾ ಪಾಯಿಂಟ್ಸ್ ಗಳಿಸಿದೆ. ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡವಿದ್ದು, ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ 2 ಪಂದ್ಯದಲ್ಲಿ ಸೋತು, 1 ಪಂದ್ಯದಲ್ಲಿ ಗೆಲುವು, 1 ಪಂದ್ಯದಲ್ಲಿ ಡ್ರಾ ಸಾಧಿಸಿ 14 ಪಾಯಿಂಟ್ಸ್, 29.17 ಶೇಕಡಾ ಪಾಯಿಂಟ್ಸ್‌ ಗಳಿಸಿದೆ. ಇಂಗ್ಲೆಂಡ್ ಖಾತೆಯಲ್ಲೂ 2 ಪೆನಾಲ್ಟಿ ಓವರ್‌ ಪಾಯಿಂಟ್ಸ್ ಇವೆ.

WTC ಪಾಯಿಂಟ್ಸ್ ವಿವರಣೆ ಹೇಗೆ?
ಹಿಂದಿನ WTC ಪಾಯಿಂಟ್ಸ್ ವಿತರಣೆ ಪ್ರಕಾರ, ಸರಣಿಗೆ ಇಷ್ಟು ಪಾಯಿಂಟ್ಸ್‌ ಎಂದು ಅಂಕ ವಿತರಿಸಲಾಗಿತ್ತು. ಅಂದರೆ ಆಗ ಪ್ರತಿ ಪಂದ್ಯಕ್ಕೂ ಸರಣಿಗೆ ನೀಡಲಾದ ಅಂಕದಿಂದ ವಿಭಾಜಿಸಿ ಅಂಕ ಹಂಚಲಾಗಿತ್ತು. ಆದರೆ ಈಗ ಅದು ಎಷ್ಟು ಪಂದ್ಯಗಳ ಸರಣಿಯಾದರೂ ಪ್ರತಿ ಪಂದ್ಯಗಳಿಗೂ ಸಮಾನ ಅಂಕ ನೀಡಲಾಗಿದೆ. ಸರಣಿಯ ವೇಳೆ ಗೆಲ್ಲುವ ಪ್ರತೀ ಪಂದ್ಯಕ್ಕೂ 12 ಅಂಕ, ಪಂದ್ಯ ಟೈ ಆದರೆ 6 ಅಂಕ, ಡ್ರಾ ಆದರೆ 4 ಅಂಕ, ಸೋತರೆ 0 ಅಂಕ ನೀಡಲಾಗುತ್ತದೆ. ಪಂದ್ಯ ಗೆದ್ದರೆ 100 ಶೇ. ಪಾಯಿಂಟ್ಸ್, ಟೈ ಆದರೆ 50 ಶೇ. ಪಾಯಿಂಟ್ಸ್, ಡ್ರಾ ಆದರೆ 33.33 ಶೇ. ಪಾಯಿಂಟ್ಸ್, ಸೋತರೆ 0 ಅಂಕ ನೀಡಲಾಗುತ್ತದೆ. ಪ್ರತೀ ಸರಣಿಗೆ ಅಂಕ ಹೇಗೆ ವಿತರಿಸಲಾಗಿದೆಯೆಂದರೆ, ಮೊದಲು ಹೇಳಿದಂತೆ ಅದು 2 ಪಂದ್ಯಗಳ ಟೆಸ್ಟ್‌ ಸರಣಿಯಾದರೆ 24 ಅಂಕ, 3 ಪಂದ್ಯಗಳ ಸರಣಿಯಾದರೆ 36 ಅಂಕ, 4 ಅಂಕಗಳ ಸರಣಿಯಾದರೆ 48 ಅಂಕ, 5 ಪಂದ್ಯಗಳ ಸರಣಿಯಾದರೆ 60 ಅಂಕ ನೀಡಲಾಗುತ್ತದೆ. ಅಂದ್ಹಾಗೆ ಸ್ಲೋ ಓವರ್‌ ರೇಟ್ ಅಂಕ ಹೊಂದಿರುವ ತಂಡಗಳು ಪ್ರತೀ ಶಾರ್ಟ್ ಓವರ್‌ಗೆ 1 WTC ಪಾಯಿಂಟ್ಸ್ ಅಂತೆ ಪಾಯಿಂಟ್ಸ್ ಕಳೆದುಕೊಳ್ಳುತ್ತವೆ.

Story first published: Wednesday, September 8, 2021, 12:29 [IST]
Other articles published on Sep 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X