ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್: ಫೈನಲ್‌ಗೆ ಪ್ರವೇಶಿಸಿದ ನ್ಯೂಜಿಲೆಂಡ್

ICC World Test Championship: New Zealand quality for final

ಅಬುಧಾಬಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಉದ್ಘಾಟನಾ ಆವೃತ್ತಿಯಲ್ಲಿ ಫೈನಲ್‌ಗೇರಿದ ಮೊದಲ ತಂಡವಾಗಿ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಗುರುತಿಸಿಕೊಂಡಿದೆ. ಮಂಗಳವಾರ (ಫೆಬ್ರವರಿ 2) ಈ ಬೆಳವಣಿಗೆ ನಡೆದಿದೆ.

ಐಪಿಎಲ್ ಸಂಬಳದಲ್ಲಿ ದಾಖಲೆ ಬರೆದ ಚೆನ್ನೈ ನಾಯಕ ಎಂಎಸ್ ಧೋನಿಐಪಿಎಲ್ ಸಂಬಳದಲ್ಲಿ ದಾಖಲೆ ಬರೆದ ಚೆನ್ನೈ ನಾಯಕ ಎಂಎಸ್ ಧೋನಿ

ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೋಗಲಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡುವುದರಲ್ಲಿತ್ತು. ಆದರೆ ಕೊರೊನಾವೈರಸ್ ಕಾರಣದಿಂದಾಗಿ ಆಸ್ಟ್ರೇಲಿಯಾದ ಉದ್ದೇಶಿತ ಪ್ರವಾಸ ಮುಂದೂಡಲ್ಪಟ್ಟಿತು. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ತಂಡ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ಸದ್ಯದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 71.7% ಪಾಯಿಂಟ್ಸ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ನ್ಯೂಜಿಲೆಂಡ್ (70.0%), ತೃತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾ (69.2%), 4ನೇ ಸ್ಥಾನದಲ್ಲಿ ಇಂಗ್ಲೆಂಡ್ ಇಂಗ್ಲೆಂಡ್ (68.7%) ತಂಡಗಳಿವೆ.

ಇಂಗ್ಲೆಂಡ್ ಭಾರತದ ವಿರುದ್ಧ ಒಂದು ಪಂದ್ಯವನ್ನೂ ಗೆಲ್ಲಲ್ಲ: ಗೌತಮ್ ಗಂಭೀರ್ಇಂಗ್ಲೆಂಡ್ ಭಾರತದ ವಿರುದ್ಧ ಒಂದು ಪಂದ್ಯವನ್ನೂ ಗೆಲ್ಲಲ್ಲ: ಗೌತಮ್ ಗಂಭೀರ್

ಈಗ ಅಗ್ರ ನಾಲ್ಕು ಸ್ಥಾನಗಳಲ್ಲಿರುವ ತಂಡಗಳಲ್ಲಿ ನ್ಯೂಜಿಲೆಂಡ್‌ಗೆ ಟೆಸ್ಟ್ ಚಾಂಪಿಯನ್‌ಶಿಪ್‌ನ ಎಲ್ಲಾ ಪಂದ್ಯಗಳು ಮುಗಿದಿವೆ. ಅತ್ತ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಸರಣಿ ಮುಂದೂಡಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಹಾದಿ ಕಠಿಣ ಮಾಡಿಕೊಂಡಿದೆ.

ಆಸ್ಟ್ರೇಲಿಯಾಕ್ಕೆ ಇನ್ನು ಟೆಸ್ಟ್ ಚಾಂಪಿಯನ್‌ಶಿಪ್‌ನ ಬೇರೆ ಪಂದ್ಯಗಳಿಲ್ಲ. ಹೀಗಾಗಿ ನ್ಯೂಜಿಲೆಂಡ್ ಹಿಂದಿಕ್ಕಲು ಆಸ್ಟ್ರೇಲಿಯಾಕ್ಕೆ ಸಾಧ್ಯವಿಲ್ಲ. ಆದ್ದರಿಂದ ನ್ಯೂಜಿಲೆಂಡ್ ತಂಡ ಫೈನಲ್‌ ಪ್ರವೇಶ ದೃಢಪಡಿಸಿಕೊಂಡಿದೆ. ಇನ್ನು ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗಾಗಿ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ( ಆಸೀಸ್‌ಗೆ ಪಂದ್ಯಗಳಿಲ್ಲ, ಆದರೆ ಭಾರತ-ಇಂಗ್ಲೆಂಡ್ ಫಲಿತಾಂಶ ಆಧರಿಸಿ) ಮಧ್ಯೆ ಸ್ಪರ್ಧೆ ನಡೆಯಲಿದೆ.

Story first published: Wednesday, February 3, 2021, 10:06 [IST]
Other articles published on Feb 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X