ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿ

Icc World Test Championship

ದುಬೈ, ಜುಲೈ 30: ಟೆಸ್ಟ್‌ ಕ್ರಿಕೆಟ್‌ಗೆ ಹೊಸ ರೂಪ ನೀಡುವ ಪ್ರಯತ್ನ ನಡೆಸುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸೋಮವಾರ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅನ್ನು ಅಧಿಕೃತವಾಗಿ ಉದ್ಘಾಟಿಸಿದೆ.

ಎರಡು ವರ್ಷಗಳ ಕಾಲ ಸುದೀರ್ಘ ಅವಧಿಯಲ್ಲಿ ನಡೆಯುವ ದ್ವಿಪಕ್ಷೀಯ ಟೆಸ್ಟ್‌ ಕ್ರಿಕೆಟ್‌ ಸರಣಿಗಳಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲುವ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ. ಏಕದಿನ ಹಾಗೂ ಟಿ-20 ಮಾದರಿಯ ಕ್ರಿಕೆಟ್‌ನಂತೆ ಟೆಸ್ಟ್‌ಗೂ ಕೂಡ ವಿಶ್ವ ಚಾಂಪಿಯಷಿಪ್‌ ಪರಿಚಯಿಸಲಾಗುತ್ತಿದೆ ಎಂದು ಐಸಿಸಿ ಕ್ರಿಕೆಟ್‌ ಕಾರ್ಯಾಚರಣೆಯ ಪ್ರಧಾನ ವ್ಯವಸ್ಥಾಪಕ ಗಿಯಾಫ್‌ ಅಲ್ಲಾರ್ಡೈಸ್‌ ತಿಳಿಸಿದ್ದಾರೆ.

ಭಾರತೀಯ ವಧುವನ್ನು ವರಿಸಲಿರುವ ಪಾಕಿಸ್ತಾನದ ವೇಗದ ಬೌಲರ್‌ಭಾರತೀಯ ವಧುವನ್ನು ವರಿಸಲಿರುವ ಪಾಕಿಸ್ತಾನದ ವೇಗದ ಬೌಲರ್‌

ಆಗಸ್ಟ್‌ 1 ರಂದು ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವಣ ಆ್ಯಷಸ್‌ ಸರಣಿಯ ಮೊದಲ ಪಂದ್ಯದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಕೂಡ ಆರಂಭವಾಗಲಿದೆ. ವಿಶ್ವ ಟೆಸ್ಟ್‌ ಶ್ರೇಯಾಂಕದ ಅಗ್ರ ಒಂಬತ್ತು ತಂಡಗಳು ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಪೈಪೋಟಿ ನಡೆಸಲಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳ ನಡುವೆ ಚಾಂಪಿಯನ್‌ಷಿಪ್‌ಗಾಗಿ ಕಾದಾಟ ನಡೆಯಲಿದೆ.

ಸತತ ಎರಡು ವರ್ಷಗಳ ಕಾಲ ನಡೆಯುವ ಟೆಸ್ಟ್‌ ಚಾಂಪಿಯನ್‌ಷಿಪ್‌ 27 ಸರಣಿಗಳನ್ನು ಒಳಗೊಂಡಿದ್ದು, ಒಟ್ಟು 72 ಪಂದ್ಯಗಳು ನಡೆಯಲಿವೆ. ಅಗ್ರ ಎರಡು ತಂಡಗಳು 2021ರ ಜೂನ್‌ ತಿಂಗಳಲ್ಲಿ ಲಂಡನ್‌ ದಿ ಲಾರ್ಡ್ಸ್ ಅಂಗಳದಲ್ಲಿ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

ಭಾರತ ವಿರುದ್ಧ ಪಾಕ್ ಈ ಗೆಲುವು ಶ್ರೇಷ್ಠ ಗೆಲುವೆಂದ ಪಾಕ್ ಅಭಿಮಾನಿಗಳು!ಭಾರತ ವಿರುದ್ಧ ಪಾಕ್ ಈ ಗೆಲುವು ಶ್ರೇಷ್ಠ ಗೆಲುವೆಂದ ಪಾಕ್ ಅಭಿಮಾನಿಗಳು!

ಒಂದು ತಂಡ ತಲಾ ಮೂರು ಟೆಸ್ಟ್‌ ಸರಣಿಗಳನ್ನು ಸ್ವದೇಶ ಮತ್ತು ವಿದೇಶದಲ್ಲಿ ಆಡಲಿದೆ. ಎರಡು ಪಂದ್ಯಗಳ ಸರಣಿಗೆ 60 ಅಂಕ ನೀಡಲಾಗಿದ್ದು, ಮೂರು ಪಂದ್ಯಗಳ ಸರಣಿಯ ಪ್ರತಿಯೊಂದು ಪಂದ್ಯಕ್ಕೆ 40 ಅಂಕ ನೀಡಲಾಗುತ್ತದೆ. ಒಂದು ವೇಳೆ ಪಂದ್ಯ ಟೈ ಆದರೆ ಅರ್ಧದಷ್ಟು ಅಂಕಗಳನ್ನು ಇತ್ತಂಡಗಳು ಹಂಚಿಕೊಳ್ಳಲಿವೆ.

ಅಂದಹಾಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಎಷ್ಟು ಪಂದ್ಯಗಳನ್ನಾಡಲಿದೆ ಎಂಬುದರ ವಿವರ ಇಂತಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಭಾರತ ತಂಡದ ವೇಳಾಪಟ್ಟಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಭಾರತ ತಂಡದ ವೇಳಾಪಟ್ಟಿ

ಆಗಸ್ಟ್‌-2019: ವೆಸ್ಟ್‌ ಇಂಡೀಸ್‌ ವಿರುದ್ಧ ಎರಡು ಟೆಸ್ಟ್‌ ಪಂದ್ಯಗಳು (ವಿದೇಶ)
ಅಕ್ಟೋಬರ್‌ 2019: ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳು(ತವರು)
ನವೆಂಬರ್‌-2019: ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳು(ತವರು)
ಫೆಬ್ರವರಿ-2020: ನ್ಯೂಜಿಲೆಂಡ್‌ ವಿರುದ್ಧ 2 ಪಂದ್ಯಗಳು(ವಿದೇಶ)
ಡಿಸೆಂಬರ್‌-ಜನವರಿ-2020-21: ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳು(ವಿದೇಶ)
ಫೆಬ್ರವರಿ-ಮಾರ್ಚ್‌2021: ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳು (ತವರು)

ಆ.22 ರಿಂದ ಭಾರತದ ಟೆಸ್ಟ್ ಚಾಂಪಿಯನ್‌ಷಿಪ್‌ ಅಭಿಯಾನ

ಆ.22 ರಿಂದ ಭಾರತದ ಟೆಸ್ಟ್ ಚಾಂಪಿಯನ್‌ಷಿಪ್‌ ಅಭಿಯಾನ

ಮೂರು ವಾರಗಳ ಹಿಂದೆ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಸೋತು ನಿರಾಸೆ ಅನುಭವಿಸಿದ್ದ ಭಾರತ, ಇದೀಗ ಮೂರು ವಾರಗಳ ನಂತರ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಭಿಯಾನ ಆರಂಭಿಸಲಿದೆ. ಆಗಸ್ಟ್‌ 22 ರಂದು ಭಾರತ ಆಂಟಿಗುವಾದಲ್ಲಿ ಮೊದಲ ಟೆಸ್ಟ್‌ ಪಂದ್ಯವಾಡುವ ಮೂಲಕ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಸ್ಪರ್ಧೆಗೆ ಇಳಿಯಲಿದೆ. ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ ತವರು ಮತ್ತು ವಿದೇಶದಲ್ಲಿ ತಲಾ ಮೂರು ಟೆಸ್ಟ್‌ ಸರಣಿಗಳನ್ನಾಡಲಿದೆ. ವಿಶ್ವಕಪ್‌ ಗೆಲ್ಲುವಲ್ಲಿ ವಿಫಲವಾಗಿರುವ ಭಾರತ ಟೆಸ್ಟ್‌ ಚಾಂಪಿಯನ್‌ಷಿಪ್‌ ಮೇಲೆ ಇದೀಗ ಕಣ್ಣಿಟ್ಟಿದೆ.

ವಿಶ್ವ ಚಾಂಪಿಯನ್‌ಷಿಪ್‌ಗೆ ಭಾರತ ಸಂಪೂರ್ಣ ಸಜ್ಜು

ವಿಶ್ವ ಚಾಂಪಿಯನ್‌ಷಿಪ್‌ಗೆ ಭಾರತ ಸಂಪೂರ್ಣ ಸಜ್ಜು

ಕಳೆದ ಹಲವು ವರ್ಷಗಳಿಂದ ಭಾರತ ತಂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು ನಂ.1 ಸ್ಥಾನದಲ್ಲಿದೆ. "ವಿಶ್ವದ ಅಗ್ರಮಾನ್ಯ ಟೆಸ್ಟ್‌ ತಂಡವಾಗಿ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಯಣ ಆರಂಭಿಸಲು ಭಾರತ ತಂಡ ಸಂಪೂರ್ಣ ಸಜ್ಜಾಗಿದೆ," ಎಂದು ಟೀಮ್‌ ಇಂಡಿಯಾ ನಾಯಕ ನಾಯಕ ವಿರಾಟ್‌ ಕೊಹ್ಲಿ, ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ವಿಂಡೀಸ್‌ ಪ್ರವಾಸದಲ್ಲಿ ಭಾರತ ಮೊದಲಿಗೆ ಟಿ20 ಮತ್ತು ಏಕದಿನ ಸರಣಿಗಳನ್ನು ಆಡಲಿದ್ದು, ಬಳಿಕ ಟೆಸ್ಟ್‌ ಸರಣಿ ನಡೆಯಲಿದೆ.

ವಿಂಡೀಸ್‌ ಪ್ರವಾಸದೊಂದಿಗೆ ಕೋಚ್‌ ಜೊತೆಗಿನ ಒಪ್ಪಂದ ಅಂತ್ಯ

ವಿಂಡೀಸ್‌ ಪ್ರವಾಸದೊಂದಿಗೆ ಕೋಚ್‌ ಜೊತೆಗಿನ ಒಪ್ಪಂದ ಅಂತ್ಯ

ಭಾರತ ತಂಡದ ಹಾಲಿ ಕೋಚ್‌ ಮತ್ತು ತರಬೇತಿ ಬಳಗದ ಜೊತೆಗಿನ ಒಪ್ಪಂದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಅಂತ್ಯದೊಂದಿಗೆ ಮುಗಿದಿದೆ. ಇದೀಗ ಭಾರತ ತಂಡ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತರಬೇತಿ ಬಳಗದ ಜೊತೆಗಿನ ಒಪ್ಪಂದವನ್ನು ಬಿಸಿಸಿಐ 45 ದಿನಗಳ ಕಾಲ ವಿಸ್ತರಿಸಿದೆ. ಇದರೊಂದಿಗೆ ಟೀಮ್‌ ಇಂಡಿಯಾದ ವೆಸ್ಟ್‌ ವೆಸ್ಟ್‌ ಇಂಡೀಸ್‌ ಪ್ರವಾಸ ಅಂತ್ಯಗೊಳ್ಳುವುದರ ಜೊತೆ ಶಾಸ್ತ್ರಿ ಮತ್ತು ತಂಡದ ಜೊತೆಗಿನ ಒಪ್ಪಂದವೂ ಕೊನೆಗೊಳ್ಳಲಿದೆ. ಬಳಿಕ ಭಾರತ ತಂಡಕ್ಕೆ ನೂತನ ಕೋಚ್‌ ಆಯ್ಕೆಯಾಗುತ್ತದೇ ಅಥವಾ ಶಾಸ್ತ್ರಿ ಪಡೆಗೆ ಮತ್ತೊಂದು ಅವಕಾಶ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Story first published: Tuesday, July 30, 2019, 19:04 [IST]
Other articles published on Jul 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X