ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ WTC ಫೈನಲ್: ಟೀಮ್ ಇಂಡಿಯಾ ಆಟಗಾರರ ಕೋವಿಡ್ ಪರೀಕ್ಷೆಗೆ ಬಿಸಿಸಿಐ ವಿಶೇಷ ವ್ಯವಸ್ಥೆ

ICC WTC Final: BCCI arranges doorstep COVID-19 test for team india players

ಐಪಿಎಲ್ 2021 ಆವೃತ್ತಿ ಮುಂದೂಡಿಕೆಯಾದ ನಂತರ ಈಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ಇಂಗ್ಲೆಂಡ್ ಪ್ರವಾಸದತ್ತ ನೆಟ್ಟಿದೆ. ಮೊದಲಿಗೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಒಇಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡಲಿದ್ದು ಅದಕ್ಕಾಗಿ ಇಂಗ್ಲೆಂಡ್‌ಗೆ ಹಾರಲು ತಂಡ ಸಜ್ಜಾಗುತ್ತಿದೆ. ಆದರೆ ಭಾರತದಲ್ಲಿ ಕೊರೊನಾ ವೈರಸ್ ತೀವ್ರವಾಗಿ ಏರಿಕೆಯಾಗುತ್ತಿರುವ ಕಾರಣ ಆಟಗಾರರು ತಮ್ಮ ವೈಯಕ್ತಿಕ ಸುರಕ್ಷತೆಯತ್ತ ಹೆಚ್ಚಿನ ಚಿತ್ತ ನೆಡಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಬಿಸಿಸಿಐ ಕೂಡ ಹೆಚ್ಚಿನ ನಿಗಾ ವಹಿಸುತ್ತಿದೆ. ಇಂಗ್ಲೆಂಡ್‌ಗೆ ತೆರಳುವ ಭಾರತೀಯ ತಂಡದ ಆಟಗಾರರ ಕೊರೊನಾ ಪರೀಕ್ಷೆಗೆ ಬಿಸಿಸಿಐ ವಿಶೇಷ ವ್ಯವಸ್ಥೆಯನ್ನು ಮಾಡಿದೆ. ಆಟಗಾರರ ಮನೆಗೆ ತೆರಳಿ ಕೊರೊನಾ ಪರೀಕ್ಷೆ ಮಾಡಿಸಲು ಬಿಸಿಸಿಐ ಮುಂದಾಗಿದೆ.

ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ ಎಲ್ಲಾ ಆಟಗಾರರು ಹಾಗೂ ಅವರಿಗೆ ಸಾಥ್ ನೀಡುವ ಕುಟುಂಬಸ್ಥರು ಮೇ 23ರಂದು ಮುಂಬೈಗೆ ತೆರಳಲಿದ್ದಾರೆ. ಅದಕ್ಕೂ ಮುನ್ನ ಈ ಎಲ್ಲರ ಮನೆಗೆ ತೆರಳಿ ಕೊರೊನಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅದಾದ ನಂತರ ಮುಂಬೈನಲ್ಲಿ ಮಿನಿ ಬಯೋಬಬಲ್‌ನಲ್ಲಿದ್ದು ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ.

ಈಗಾಗಲೇ ಬಿಸಿಸಿಐ ಇಂಗ್ಲೆಂಡ್‌ಗೆ ತೆರಳುವ 20 ಆಟಗಾರರ ತಂಡವನ್ನು ಘೋಷಿಸಿದೆ. ವಿರಾಟ್ ಕೊಹ್ಲಿ ನೇತೃತ್ವದ ಈ ತಂಡ ಜೂನ್ ಎರಡರಂದು ಇಂಗ್ಲೆಂಡ್‌ಗೆ ಪ್ರಯಾಣವನ್ನು ಬೆಳೆಸಲಿದೆ. ಬಳಿಕ ಅಲ್ಲಿ ಕ್ವಾರಂಟೈನ್ ಪೂರೈಸಿದ ನಂತರ ಜೂಬ್ 18-22ರ ವರೆಗೆ ನಡೆಯುವ ಐಸಿಸಿ ವಿಶ್ವ ಟೆಸ್ಟ್ ಚಾಂಒಇಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣೆಸಾಟವನ್ನು ನಡೆಸಲಿದೆ. ಸೌಥಾಂ್ಟನ್‌ನಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ.

Story first published: Wednesday, May 12, 2021, 8:58 [IST]
Other articles published on May 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X