ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಲಾರ್ಡ್ಸ್ ಅಂಗಳದಿಂದ ಸ್ಥಳಾಂತರ ಸಂಭವ: ವರದಿ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಭಾರತ 3-1 ಅಂತರದಿಂದ ಗೆಲುವು ಸಾಧಿಸುವ ಮೂಲಕ ಪ್ರಥಮ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪ್ರಥಮ ಆವೃತ್ತಿ ಫೈನಲ್ ಪ್ರವೇಶವನ್ನು ಪಡೆದುಕೊಂಡಿದೆ. ಈ ಮೂಲಕ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಎದುರಿಸಲಿದೆ.

ಜೂನ್‌ ತಿಂಗಳ 18ರಂದು ಈ ಮಹತ್ವದ ಪಂದ್ಯವನ್ನು ಲಾರ್ಡ್ಸ್‌ನಲ್ಲಿ ಆಯೋಜಿಸುವ ನಿರ್ಧಾರವನ್ನು ಈ ಹಿಂದೆಯೇ ತೆಗೆದುಕೊಳ್ಳಲಾಗಿತ್ತು. ಆದರೆ ಈ ಮಹತ್ವದ ಪಂದ್ಯ ನಡೆಯುವ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳು ಕಂಡುಬರುತ್ತಿದೆ. ಈ ಐತಿಹಾಸಿಕ ಪಂದ್ಯದ ಆಯೋಜನೆ ಕ್ರಿಕೆಟ್‌ ಕಾಶಿ ಎನಿಸಿಕೊಂಡಿರುವ ಲಾರ್ಡ್ಸ್‌ನಿಂದ ಕೈತಪ್ಪುವ ಸಾಧ್ಯತೆಗಳು ಇದೆ ಎಂದು ವರದಿಯಾಗಿದೆ.

ಭಾರತ vs ಇಂಗ್ಲೆಂಡ್: ಪ್ರಶಸ್ತಿ ವಿಜೇತರ ಪಟ್ಟಿ, ಅಂಕಿ-ಅಂಶಗಳು!

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹಾಗೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಈಗ ಅಗತ್ಯ ತಾಣವನ್ನು ಈ ಮಹತ್ವದ ಟೂರ್ನಿಯಾಗಿ ಹುಡುಕಾಡುತ್ತಿದೆ ಎನ್ನಲಾಗಿದೆ. ಕ್ರೀಡಾಂಗಣದಲ್ಲಿರುವ ವ್ಯವಸ್ಥೆಗಳ ಕಾರಣದಿಂದಾಗಿ ಸೌಥಾಂಪ್ಟನ್‌ನಲ್ಲಿರುವ ಏಜಲ್‌ಬೌಲ್ ಕ್ರೀಡಾಂಗಣ ಈಗ ಟೂರ್ನಿ ಆಯೋಜನೆಗೆ ಸೂಕ್ತ ಸ್ಥಳ ಎಂದು ಗುರುತಿಸಲಾಗಿದೆ ಎನ್ನಲಾಗಿದೆ.

ಜನವರಿಯಲ್ಲಿ ಡೈಲಿಮೇಲ್ ಮಾಡಿದ ವರದಿಯ ಪ್ರಕಾರ, ಸ್ಥಳವನ್ನು ಬದಲಾಯಿಸುವುದರಿಂದ ಫೈನಲ್‌ಗೆ ಕೊರೊನಾ ವೈರಸ್‌ನ ಅಪಾಯ ಕಡಿಮೆಯಾಗುತ್ತದೆ. ಏಜಸ್ ಬೌಲ್‌ನಲ್ಲಿ ಆನ್-ಸೈಟ್ ಹೋಟೆಲ್ ಇರುವ ಕಾರಣ ಜೈವಿಕ ಸಿರಕ್ಷಿತ ವಾತಾವರಣಕ್ಕೆ ಅಗತ್ಯವಿರುವ ಅನುಕೂಲತೆಗಳನ್ನು ಒದಗಿಸುತ್ತದೆ. ಹೀಗಾಗಿ ಈ ಬದಲಾವಣ ಸಂಭವ ಇದೆ ಎನ್ನಲಾಗಿದೆ.

"ನಿರ್ಧಾರವನ್ನು ಶೀಘ್ರದಲ್ಲಿಯೇ ತೆಗೆದುಕೊಳ್ಳಬೇಕಾಗಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ 'ಎಂದು ಕೌಂಟಿಯ ಮುಖ್ಯಸ್ಥರಾಗಿರುವ ಬ್ರಾನ್ಸ್‌ಗ್ರೋವ್ ಡೈಲಿಮೇಲ್‌ಗೆ ಕಲೆದ ಜನವರಿಯಲ್ಲಿ ತಿಳಿಸಿದರು. 'ಇಂತಹ ಪ್ರತಿಷ್ಠಿತ ಕಾರ್ಯಕ್ರಮಕ್ಕಾಗಿ ಲಾರ್ಡ್ಸ್ ಹೊರತುಪಡಿಸಿ ಬೇರೆ ಯಾವುದೇ ಮೈದಾನವನ್ನು ನೇಮಿಸುವುದನ್ನು ಊಹಿಸುವುದು ಕಷ್ಟ. ಆದರೆ ಜೈವಿಕ ಭದ್ರತೆ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ಇನ್ನೂ ಸ್ವಲ್ಪ ಕಾಳಜಿಯೊಂದಿಗೆ ನಾವು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ" ಎಂದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, March 7, 2021, 17:30 [IST]
Other articles published on Mar 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X